‘ಆನಲೈನ್ ಕಾರ್ಯಕ್ರಮದ ಸೇವೆಯಲ್ಲಿ ಉಪಕರಣಗಳೆಂದರೆ ‘ಸಹಸಾಧಕರು, ಎಂಬ ಭಾವವನ್ನಿಟ್ಟು ಅವುಗಳ ಮೇಲೆ ಆಧ್ಯಾತ್ಮಿಕ ಉಪಾಯ ಮಾಡಿ ಅಡಚಣೆಗಳ ಮೇಲೆ ಪರಿಹಾರವನ್ನು ಕಂಡುಕೊಳ್ಳಿರಿ !

ಸನಾತನ ಸಂಸ್ಥೆಯ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗಾಗಿ ಮಹತ್ವದ ಸೂಚನೆ !

ಸದ್ಗುರು (ಡಾ.) ಮುಕುಲ ಗಾಡಗೀಳ

‘ಕೊರೋನಾ ಸಂಚಾರ ನಿಷೇಧದ ಅವಧಿಯಲ್ಲಿ ಪರಾತ್ಪರ ಗುರು (ಡಾ.) ಜಯಂತ ಆಠವಲೆಯವರ ಕೃಪೆಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಿವಿಧ ಆನಲೈನ್ ಉಪಕ್ರಮಗಳು ಪ್ರಾರಂಭವಾದವು ಮತ್ತು ಸದ್ಯ ಅವುಗಳು ನಿಯಮಿತವಾಗಿ ನಡೆಯುತ್ತಿವೆ. ಇದರಲ್ಲಿ ಅನೇಕ ವಿಷಯಗಳ ಕುರಿತು ಸಂವಾದ, ಪ್ರತಿದಿನ ನಡೆಯುವ ಸತ್ಸಂಗ ಮತ್ತು ವಿವಿಧ ಶಿಬಿರಗಳು ಮುಂತಾದವುಗಳ ಸಮಾವೇಶವಿದೆ. ಈ ಆನಲೈನ್ ಉಪಕ್ರಮಗಳು ಯಾವುದೇ ಆಧ್ಯಾತ್ಮಿಕ ಅಡಚಣೆಗಳಿಲ್ಲದೇ ನಿರ್ವಿಘ್ನವಾಗಿ ನೆರವೇರಬೇಕು, ಎಂದು ಸಂತರು ವಿವಿಧ ಆಧ್ಯಾತ್ಮಿಕ ನಾಮಜಪ ಮುಂತಾದ ಉಪಾಯಗಳನ್ನು ಹೇಳುತ್ತಾರೆ ಮತ್ತು ಸ್ವತಃ ಅವರೂ ಮಾಡುತ್ತಾರೆ. ಸಂತರು ಉಪಾಯಗಳನ್ನು ಮಾಡುತ್ತಿದ್ದರೂ, ಸಾಧಕರು ಸಹ ತಮ್ಮ ಮಟ್ಟದಲ್ಲಿ ಆವಶ್ಯಕ ಆಧ್ಯಾತ್ಮಿಕ ಉಪಾಯಗಳನ್ನು ನಿರಂತರವಾಗಿ ಮಾಡುವುದು ಆವಶ್ಯಕವಿದೆ.

ಈ ಆನಲೈನ್ ಉಪಕ್ರಮಗಳ ಸೇವೆಯಲ್ಲಿ ಗಣಕಯಂತ್ರ, ಲ್ಯಾಪಟಾಪ್ ಅಥವಾ ಇತರ ತಾಂತ್ರಿಕ ಉಪಕರಣಗಳು ಇವು ನಮ್ಮ ‘ಸಹಸಾಧಕರಾಗಿದ್ದಾರೆ, ಈ ಸಹಸಾಧಕರ ಮಾಧ್ಯಮದಿಂದ ನಮ್ಮ ಸಮಷ್ಟಿ ಸೇವೆಯಾಗಲಿದೆ, ಎಂಬ ಕೃತಜ್ಞತೆಯ ಭಾವವನ್ನಿಡಬೇಕು. ಅವುಗಳಿಗಾಗಿ ಭಾವ ಪೂರ್ಣವಾಗಿ ಪ್ರಾರ್ಥನೆ ಮಾಡಬೇಕು ಮತ್ತು ಅವುಗಳ ಶುದ್ಧಿ ಮಾಡಬೇಕು. ನಾವು ಭಾವದ ಸ್ತರದಲ್ಲಿ ಉಪಾಯ ಮತ್ತು ಅವುಗಳ ಶುದ್ಧಿ ಮಾಡುವುದರಿಂದ ಅಲ್ಲಿ ಈಶ್ವರೀ ತತ್ತ್ವವು ಕಾರ್ಯನಿರತಗೊಂಡು ತಾಂತ್ರಿಕ ಸೇವೆಯಲ್ಲಿನ ಕೆಟ್ಟ ಶಕ್ತಿಗಳ ಅಡಚಣೆಗಳು ದೂರವಾಗಲು ಸಹಾಯವಾಗುತ್ತದೆ. ಅದರಿಂದ ಧರ್ಮಪ್ರಸಾರದಲ್ಲಿನ ತಾಂತ್ರಿಕ ಅಡಚಣೆಗಳು ದೂರವಾಗಲು ಸಹಾಯವಾಗುತ್ತದೆ. ಇದಕ್ಕಾಗಿ ನಾವು ಗುರುಚರಣಗಳಲ್ಲಿ ಶರಣಾಗತರಾಗಿ ಯೋಗ್ಯ ಕ್ರಿಯಮಾಣವನ್ನು ಬಳಸುವುದು ಅವಶ್ಯಕವಿದೆ.

ಸಾಧಕರೇ, ಈ ಆಪತ್ಕಾಲದಲ್ಲಿಯೂ ಕೇವಲ ಗುರುಕೃಪೆಯಿಂದ ಆನಲೈನ್ (ಆಕಾಶತತ್ತ್ವದ) ಮೂಲಕವಾಗಿ ಧರ್ಮಪ್ರಸಾರದ ಕಾರ್ಯವು ವೇಗದಿಂದ ವೃದ್ಧಿಯಾಗುತ್ತಿದೆ, ಸಂಪೂರ್ಣ ವಿಶ್ವದಾದ್ಯಂತ ಶ್ರೀ ಗುರುಗಳ ಕೀರ್ತಿ ಹರಡುತ್ತಿದೆ, ಈ ಕುರಿತು ಅಖಂಡ ಕೃತಜ್ಞತೆಯಿಂದಿರಿ ಮತ್ತು ಸೇವೆಯಲ್ಲಿನ (ಉಪಕರಣದ ರೂಪ ದಲ್ಲಿ) ಸಹಸಾಧಕರ ಮೇಲೆ ಭಾವಪೂರ್ಣವಾಗಿ ಆಧ್ಯಾತ್ಮಿಕ ನಾಮಜಪ ಮುಂತಾದ ಉಪಾಯಗಳನ್ನು ಮಾಡಿ ಕಾರ್ಯಕ್ರಮದಲ್ಲಿ ಬರುವ ಆಧ್ಯಾತ್ಮಿಕ ಅಡಚಣೆಗಳ ಮೇಲೆ ಪರಿಹಾರವನ್ನು ಕಂಡುಕೊಳ್ಳಿರಿ !

– (ಸದ್ಗುರು) ಡಾ. ಮುಕುಲ ಗಾಡಗೀಳ (೧೫.೧.೨೦೨೧)