‘ದೇಶದಾದ್ಯಂತ ‘ಕೊರೊನಾ ವಿಷಾಣು ಪುನಃ ಶೀಘ್ರಗತಿಯಿಂದ ಹಬ್ಬುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಜನಸಂದಣಿಯ ಸ್ಥಳಕ್ಕೆ ಹೋಗದಿರುವುದು, ಅನಗತ್ಯ ಪ್ರಯಾಣ ಮಾಡದಿರುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕನ ಬಳಕೆ ಮಾಡುವುದು, ಮುಂತಾದ ಸೂಚನೆಗಳ ಪಾಲನೆ ಮಾಡುವುದು ಅವಶ್ಯಕವಿದೆ. ಅತ್ಯಾವಶ್ಯಕ ಕಾರಣಗಳಿಂದಾಗಿ ಅಥವಾ ನೌಕರಿಯ ನಿಮಿತ್ತದಿಂದ ಪ್ರತಿದಿನ ಯಾರಿಗೆ ಹೊರಗೆ ಹೋಗಬೇಕಾಗುತ್ತದೆ, ಅವರು ತಮಗೆ ನೆಗಡಿ, ಕೆಮ್ಮು ಅಥವಾ ಜ್ವರ ಈ ಲಕ್ಷಣಗಳು ಇಲ್ಲದಿದ್ದರೂ, ಪ್ರತಿದಿನ ೨ ಬಾರಿ ಪ್ರತಿಸಲ ೩-೪ ನಿಮಿಷಗಳ ವರೆಗೆ ಮೂಗಿನ ಮೂಲಕ ‘ವಾಫ್ ತೆಗೆದುಕೊಳ್ಳಬೇಕು. ನೆಗಡಿ, ಕೆಮ್ಮು ಅಥವಾ ಜ್ವರ ಈ ಲಕ್ಷಣಗಳು ಇದ್ದರೆ ಅವರು ಪ್ರತಿದಿನ ೩-೪ ಬಾರಿ ‘ವಾಫ್ ತೆಗೆದುಕೊಳ್ಳುವುದು ಆವಶ್ಯಕವಿದೆ. ಬಿಸಿ ನೀರಿನಲ್ಲಿ ಉಪ್ಪು ಮತ್ತು ಸ್ವಲ್ಪ ಅರಿಷಿಣ ಹಾಕಿ ದಿನವಿಡಿ ೫-೬ ಸಲ ಬಾಯಿ ಮುಕ್ಕಳಿಸಬೇಕು, ಹಾಗೆಯೇ ವೈದ್ಯರ ಸಲಹೆ ಪಡೆಯಬೇಕು. ಸಾಧ್ಯವಿದ್ದಲ್ಲಿ ಮನೆಯಲ್ಲಿ ಇತರ ಸದಸ್ಯರಿಂದ ಬೇರೆ ಇರಬೇಕು.
ತಮ್ಮಲ್ಲಿಯ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಎಲ್ಲರೂ ಸಮತೋಲನದ ಆಹಾರ ಮತ್ತು ಸಾಕಷ್ಟು ನಿದ್ದೆ ಮಾಡುವುದು ಆವಶ್ಯಕವಿದೆ.
– ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ.