ಸದ್ಯ ಸಾಧಕರಿಗೆ ಅವರ ವಾಸ್ತುವನ್ನು ಮಾರಾಟ ಮಾಡಲು ತುಂಬಾ ಅಡಚಣೆ ಬರುತ್ತಿದೆ, ಎಂದು ತುಂಬಾ ಸಾಧಕರ ಉದಾಹರಣೆಯಿಂದ ಗಮನಕ್ಕೆ ಬಂದಿದೆ. ವಾಸ್ತು ಮಾರಾಟದಲ್ಲಿನ ಅಡಚಣೆ ದೂರವಾಗಲು ಏನಾದರೂ ಉಪಾಯ ಇದ್ದರೆ ಸೂಚಿಸಿ ಎಂದು ಭಗವಾನ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿದೆ. ಭಗವಾನ ಶ್ರೀ ಕೃಷ್ಣನು ವಾಸ್ತು ಮಾರಾಟದಲ್ಲಿನ ಅಡಚಣೆ ದೂರ ಆಗಲು ವಾಸ್ತು ಮಾರಾಟ ಯಂತ್ರ ಸೂಚಿಸಿದನು. ಯಂತ್ರದ (3×3 ಇಂಚು ಆಕಾರದಲ್ಲಿ) ಚಿತ್ರವನ್ನು ಮುಂದೆ ನೀಡಲಾಗಿದೆ. ಒಂದು ಖಾಲಿ ಕಾಗದದ ಮೇಲೆ ವಾಸ್ತು ಮಾರಾಟ ಯಂತ್ರದ ಚಿತ್ರದ ಬಣ್ಣದ ಗಣಕೀಯ ಪ್ರತಿ (ಪ್ರಿಂಟ್) ತೆಗೆಯಬೇಕು. ಈ ಯಂತ್ರವನ್ನು ವಾಸ್ತುವಿನ ವಾಯುವ್ಯ ದಿಕ್ಕಿನ ಗೋಡೆಯ ಮೇಲೆ ಸಾಧಾರಣ ೫ ಅಡಿ ಎತ್ತರದಲ್ಲಿ ಹಚ್ಚಬೇಕು. (ವಾಯುವ್ಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಆ ಭಾಗವನ್ನು ಬಿಟ್ಟು ಯಂತ್ರವನ್ನು ಪಕ್ಕದ ಗೋಡೆಯ ಮೇಲೆ ಹಚ್ಚಬೇಕು) ಉಪಾಯವನ್ನು ಪಂಚಾಂಗದಲ್ಲಿ ಶುಭದಿನವನ್ನು ನೋಡಿ ಆರಂಭಿಸಬೇಕು. ಯಂತ್ರ ಹಚ್ಚಿದ ಮೇಲೆ ಊದುಬತ್ತಿ ಬೆಳಗಿಸಿ ಮುಂದಿನ ಪ್ರಾರ್ಥನೆ ಮಾಡಬೇಕು, ವಾಸ್ತುವಿನ ಮಾರಾಟದಲ್ಲಿ ಬರುವ ಎಲ್ಲಾ ಅಡಚಣೆಗಳು ದೂರವಾಗಿ, ವಾಸ್ತು ಆದಷ್ಟು ಬೇಗ ಮಾರಾಟವಾಗಲಿ. ವಾಸ್ತು ಮಾರಾಟವಾದ ನಂತರ ಆ ಯಂತ್ರಕ್ಕೆ ಕೃತಜ್ಞತೆ ವ್ಯಕ್ತ ಮಾಡಿ ಅಗ್ನಿಗೆ ಸಮರ್ಪಿಸಬೇಕು.
– ಶ್ರೀ. ಧನಂಜಯ ಕರ್ವೆ

ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !