ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆದ ಬಳಿಕ ತೆಂಗಿನಕಾಯಿಯ ಮೇಲಾದ ಪರಿಣಾಮ ಮತ್ತು ಅದರ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ದೃಷ್ಟಿಯನ್ನು ತೆಗೆಯುವುದರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ತೆಂಗಿನಕಾಯಿಯಿಂದ ಹೇಗೆ ದೃಷ್ಟಿ ತೆಗೆಯುವುದು ಎಂಬುದರ ಸಾಂದರ್ಭಿಕ ಚಿತ್ರ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು `ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಪರಾತ್ಪರ ಗುರು ಡಾ.ಆಠವಲೆಯವರು ಈಶ್ವರೀ ರಾಜ್ಯದ ಸ್ಥಾಪನೆಯ ಮಹಾನ್ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡಚಣೆಗಳನ್ನು ತರಲು ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಸತತವಾಗಿ ಆಕ್ರಮಣಗಳನ್ನು ಮಾಡುತ್ತವೆ. ಇದರಿಂದ ಪರಾತ್ಪರ ಗುರು ಡಾಕ್ಟರರಿಗೆ ವಿವಿಧ ಶಾರೀರಿಕ ತೊಂದರೆಗಳಾಗುತ್ತವೆ. ಅವರಿಗಾಗುತ್ತಿರುವ ತೊಂದರೆಗಳು ದೂರವಾಗಬೇಕೆಂದು ೨೧. ೭. ೨೦೧೯ ರಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರು ತೆಂಗಿನಕಾಯಿಯಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದರು. ‘ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆದ ಬಳಿಕ ತೆಂಗಿನಕಾಯಿಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎನ್ನುವುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್)’ ಎಂಬ ಉಪಕರಣದ ಮೂಲಕ ತೆಂಗಿನಕಾಯಿಯ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಪ್ರಾ. ಸುಹಾಸ ಜಗತಾಪ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ತೆಂಗಿನಕಾಯಿಯಿಂದ ದೃಷ್ಟಿ ತೆಗೆದ ಬಳಿಕ ತೆಂಗಿನಕಾಯಿಯಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ, ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು: ದೃಷ್ಟಿಯನ್ನು ತೆಗೆಯುವ ಮೊದಲು ತೆಂಗಿನಕಾಯಿಯಲ್ಲಿ ಕೇವಲ ಸಕಾರಾತ್ಮಕ ಊರ್ಜೆಯಿತ್ತು. ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಆದರೆ ತೆಂಗಿನಕಾಯಿಯಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದ ಬಳಿಕ ಆ ತೆಂಗಿನಕಾಯಿಯಲ್ಲಿದ್ದ ಸಕಾರಾತ್ಮಕ ಊರ್ಜೆ ಇಲ್ಲವಾಗಿ, ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ‘ಇನ್‍ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಗಳು ನಿರ್ಮಾಣವಾದವು. ಇದು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ನಿಷ್ಕರ್ಷ

ದೃಷ್ಟಿಯನ್ನು ತೆಗೆದ ಬಳಿಕ ತೆಂಗಿನಕಾಯಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಇದರ ಕಾರಣವೆಂದರೆ, ದೃಷ್ಟಿ ತಗುಲಿರುವ ವ್ಯಕ್ತಿಯ ಸುತ್ತಲಿರುವ ತೊಂದರೆದಾಯಕ ಸ್ಪಂದನಗಳು ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟವು.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದೃಷ್ಟಿಯನ್ನು ತೆಗೆದುದರಿಂದ ವ್ಯಕ್ತಿಯ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ದೂರವಾಗುವುದು : ವ್ಯಕ್ತಿಗೆ ದೃಷ್ಟಿ ತಗಲಿದ್ದರಿಂದ ಅವನ ಸುತ್ತಲೂ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ನಿರ್ಮಾಣವಾಗುತ್ತದೆ. ಇದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಯಾವಾಗ ವ್ಯಕ್ತಿಯ ಸ್ಥೂಲದೇಹ ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆಯೋ, ಆಗ ಅವನು ಶಾರೀರಿಕ ರೋಗಗಳಿಂದ ಬಳಲುತ್ತಾನೆ. ಶಾರೀರಿಕ ರೋಗಗಳಲ್ಲಿ ತೀವ್ರ ತಲೆನೋವು, ಕಿವಿನೋವು, ಕಣ್ಣು ನೋವು ಕಣ್ಣುಕತ್ತಲೆ ಬರುವುದು, ಕೈ-ಕಾಲುಗಳಿಗೆ ಜೋಮು ಬರುವುದು, ಎದೆ ಬಡಿತದಲ್ಲಿ ಹೆಚ್ಚಳವಾಗುವುದು, ಕೈ-ಕಾಲುಗಳು ತಣ್ಣಗಾಗಿ ಬಸವಳಿದಂತಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ದೃಷ್ಟಿಯನ್ನು ತೆಗೆಯುವುದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣವು ದೂರವಾಗುತ್ತದೆ. ಇದರಿಂದ ವ್ಯಕ್ತಿಗಾಗುವ ತೊಂದರೆಗಳು ಕಡಿಮೆಯಾಗುತ್ತವೆ ಅಥವಾ ಇಲ್ಲವಾಗುತ್ತವೆ.

೩ ಆ. ದೃಷ್ಟಿ ತೆಗೆದ ಬಳಿಕ ತೆಂಗಿನಕಾಯಿಯಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ, ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರುವುದು : ‘ತೆಂಗಿನಕಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಲಹರಿಗಳು ಸೆಳೆಯಲ್ಪಡುತ್ತವೆ. ತೆಂಗಿನಕಾಯಿಯಲ್ಲಿ ರಜ-ತಮಾತ್ಮಕ ಲಹರಿಗಳು ಅಲ್ಪ ಕಾಲಾವಧಿಯಲ್ಲಿ ಸೆಳೆಯಲ್ಪಟ್ಟು, ಅವು ತೆಂಗಿನಕಾಯಿಯ ಸಾತ್ತ್ವಿಕತೆಯಿಂದ ಒಳಗಿಂದೊಳಗೆ ಬಹಳಷ್ಟು ಪ್ರಮಾಣದಲ್ಲಿ ವಿಘಟನೆಗೊಳ್ಳುತ್ತವೆ. ಇತರ ವಸ್ತುಗಳಿಗಿಂತ ತೆಂಗಿನಕಾಯಿಯಲ್ಲಿ ದೃಷ್ಟಿ ತೆಗೆಯುವ ಕ್ಷಮತೆಯು, ಇದನ್ನು ಹೆಚ್ಚಿರುವುದರಿಂದ ವ್ಯಕ್ತಿಯ ಸೂಕ್ಷ್ಮದೇಹದಿಂದ ತೊಂದರೆದಾಯಕ ಶಕ್ತಿಯ (ತೊಂದರೆದಾಯಕ ಸ್ಪಂದನಗಳ) ಆವರಣವನ್ನು ಸೆಳೆಯುವಲ್ಲಿ ತೆಂಗಿನಕಾಯಿಯನ್ನು ಅಧಿಕ ಉತ್ತಮವೆಂದು ತಿಳಿಯಲಾಗುತ್ತದೆ. ತೆಂಗಿನಕಾಯಿಯು ಸರ್ವಸಮಾವೇಶಕ ವಾಗಿರುವುದರಿಂದ, ಅದು ಯಾವುದೇ ರೀತಿಯ ದೃಷ್ಟಿಯನ್ನು ತೆಗೆಯಲು ಅಥವಾ ಮಾಟ-ಮಂತ್ರದ ನಿವಾರಣೆಗೆ ಉಪಯುಕ್ತವಾಗಿರುತ್ತದೆ’, (ಆಧಾರ : ಸನಾತನದ ಗ್ರಂಥ : ‘ಉಪ್ಪು – ಸಾಸಿವೆ, ತೆಂಗಿನಕಾಯಿ, ಪಟಗಾರ ಇತ್ಯಾದಿಗಳಿಂದ ದೃಷ್ಟಿಯನ್ನು ಹೇಗೆ ತೆಗೆಯಬೇಕು ?’) ತೆಂಗಿನಕಾಯಿಯಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದಿದ್ದರಿಂದ, ಅವರ ಸುತ್ತಲಿನ ತೊಂದರೆದಾಯುಕ ಸ್ಪಂದನಗಳು ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟವು. ಇದರಿಂದ ತೆಂಗಿನಕಾಯಿಯಲ್ಲಿದ್ದ ಸಕಾರಾತ್ಮಕ ಊರ್ಜೆಯು ಇಲ್ಲವಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು’.

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೦.೧೦.೨೦೨೦)

ವಿ-ಅಂಚೆ ವಿಳಾಸ : [email protected]