ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡಲು ನಿಂತ ಸ್ವಾಭಿಮಾನಿ ರಾಜ ಮಹಾರಾಣಾ ಪ್ರತಾಪ್ ! ಅವರು ಹಳದೀಘಾಟ್‌ನ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು. ಅವರು ‘ಮೇವಾಡಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ರಾಜವೈಭವ ಭೋಗಿಸುವುದಿಲ್ಲ !’ ಎಂಬ ಪ್ರತಿಜ್ಞೆಯನ್ನು ಅಪಾರ ಯಾತನೆಗಳನ್ನು ಸಹಿಸಬೇಕಾಗಿ ಬಂದರೂ ಪಾಲಿಸಿದರು ಮತ್ತು ಮೇವಾಡವನ್ನು ಮುಕ್ತಗೊಳಿಸಿದರು.
ಮಹಾರಾಣಾ ಪ್ರತಾಪರ ತ್ಯಾಗ, ಧೈರ್ಯ ಸ್ಮರಿಸಿ ರಾಷ್ಟ್ರರಕ್ಷಣೆಗೆ ಸಿದ್ಧರಾಗಿ !