ಚೀನಾದಲ್ಲಿ ೨ ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ ಬ್ಯಾಂಕ್ ಅಧಿಕಾರಿಗೆ ಗಲ್ಲುಶಿಕ್ಷೆ

 ಭ್ರಷ್ಡಾಚಾರಿಗಳಿಗೆ ಚೀನಾದಲ್ಲಿ ಗಲ್ಲುಶಿಕ್ಷೆಯಾಗಬಹುದಾದರೆ ಭಾರತದಲ್ಲಿ ಏಕೆ ಆಗಬಾರದು?

ಬೀಜಿಂಗ್ (ಚೀನಾ) – ೨ ಸಾವಿರ ೧೯ ಕೋಟಿ ೫೩ ಲಕ್ಷ ರೂ.ಗಳ ವಿವಿಧ ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿದಂತೆ ಮಾಜಿ ಬ್ಯಾಂಕ್ ಅಧಿಕಾರಿಗೆ ಚೀನಾದಲ್ಲಿ ಮರಣದಂಡನೆ ವಿಧಿಸಲಾಗಿದೆ.

ಅಧಿಕಾರಿಯ ಹೆಸರು ಲಾಯ್ ಕ್ಸಿಯಾಮಿನ್. ಅವರು ಚೀನಾದ ಅತಿದೊಡ್ಡ ಆಸ್ತಿ ನಿರ್ವಹಣಾ ಕಂಪನಿಯಾದ ಹುವಾರಾಂಗ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಲಾಯ್ ಕ್ಸಿಯಾಮಿನ್‌ನನ್ನು ಟಿಯಾನ್‌ಜಿನ್‌ನಗರದಲ್ಲಿ ಗಲ್ಲಿಗೇರಿಸಲಾಯಿತು. ‘ಲಾಯ್ ಕ್ಸಿಯಾಮಿನ್ ತೆಗೆದುಕೊಂಡ ಲಂಚದ ಪ್ರಮಾಣವು ತುಂಬಾ ದೊಡ್ಡದಾಗಿದೆ, ಹಾಗೆಯೇ ಅವರು ಯಾವ ಪರಿಸ್ಥಿತಿಯಲ್ಲಿ ಲಂಚ ಪಡೆದರೋ ಅದು ಸಹ ಗಂಭೀರ ಅಪರಾಧವಾಗಿದೆ. ಇದು ಸಮಾಜದ ಮೇಲೆ ವಿಪರೀತ ಪರಿಣಾಮ ಬೀರಿದೆ” ಎಂದು ಮರಣದಂಡನೆಯನ್ನು ವಿಧಿಸುವಾಗ ಚೀನಾದ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಶಿಕ್ಷೆಯ ವಿರುದ್ಧ ಲಾಯ್ ಕ್ಸಿಯಾಮಿನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ಚೀನಾದ ನ್ಯಾಯಾಲಯಗಳಲ್ಲಿ ೯೯ ಶೇ.ದಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ ಮತ್ತು ಅತ್ಯಂತ ಗಂಭೀರ ಅಪರಾಧಗಳಿಗೆ ಮರಣದಂಡನೆಯನ್ನೇ ವಿಧಿಸಲಾಗುತ್ತದೆ.