
ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ. ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆ ಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ. ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಆಗಸ್ಟ್ ೨೦೨೦ ರವರೆಗೆ ಸನಾತನದ ೩೨೫ ಗ್ರಂಥಗಳ ೧೭ ಭಾಷೆಗಳಲ್ಲಿ ೮೦,೧೮,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಅನುವಾದ ಮಾಡುವವರಿಗೆ ಮರಾಠಿ ಮತ್ತು ಕನ್ನಡ ಭಾಷೆಯ ಸಂಪೂರ್ಣ ಜ್ಞಾನವಿರಬೇಕು, ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಅಂತರ್ಜಾಲದ ಮಾಹಿತಿಯಿರಬೇಕು. ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.
ಸಂಪರ್ಕ ಕ್ರ. : 9342435617
ವಿ-ಅಂಚೆ : [email protected]
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !