ವ್ಯಷ್ಟಿ ಮತ್ತು ಸಮಷ್ಟಿಯ ಅಪೂರ್ವ ಸಂಗಮವಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ಸಾಧನೆಯನ್ನು ಕಲಿಸಿ ಸಾಧಕರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುವ ಮತ್ತು ಸಂತರನ್ನು ತಯಾರಿಸುವ ಸನಾತನ ಸಂಸ್ಥೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಭಾದ್ರಪದ ಅಮಾವಾಸ್ಯೆ (೧೭.೯.೨೦೨೦) ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಜನ್ಮದಿನ ಇದೆ. ಆ ನಿಮಿತ್ತ ಸನಾತನದ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧನೆಯ ಕುರಿತು ಮಾಡಿದ ಮಾರ್ಗದರ್ಶನ

೧. ಪರಿಸ್ಥಿತಿಯು ಅನುಕೂಲವೋ ಅಥವಾ ಪ್ರತಿಕೂಲವೊ ಇದು ಕ್ರಿಯಮಾಣದ ಮೇಲೆ ಅವಲಂಬಿಸಿದೆ !

ಪ್ರಸ್ತುತ ಕಾಲವು ಬಾಹ್ಯದೃಷ್ಟಿಯಿಂದ ಪ್ರತಿಕೂಲವಾಗಿದೆ; ಆದರೆ ಸಾಧನೆಗಾಗಿ ಅನುಕೂಲವಾಗಿದೆ. ನಮ್ಮ ಕ್ರಿಯಮಾಣದ ಮೇಲೆ ಪರಿಸ್ಥಿತಿಯು ಅನುಕೂಲವೋ ಅಥವಾ ಪ್ರತಿಕೂಲವೋ, ಎಂದು ನಿರ್ಧರಿತವಾಗುತ್ತದೆ. ಗುರುಗಳ ಸಂಕಲ್ಪದಿಂದ ಸಾಧಕರ ರಕ್ಷಣೆಯು ಆಗಲಿಕ್ಕೇ ಇದೆ; ಆದರೆ ಅವರ ಹೇಳಿದ್ದೆಲ್ಲವನ್ನು ಆಚರಣೆಯಲ್ಲಿ ತರಬೇಕು ಮಾಡಬೇಕು. ನಾವು ಘೋರ ಆಪತ್ಕಾಲದಲ್ಲಿ ಪ್ರವೇಶಿಸುತ್ತಿದ್ದೇವೆ. ಇದರಿಂದ ಪಾರಾಗಲು ದೇವರ ಮೇಲಿನ ಭಕ್ತಿ ಮತ್ತು ಶ್ರದ್ಧೆಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಗುರುಕೃಪೆಯು ಆವಶ್ಯಕವಾಗಿದೆ.

೨. ಮುಂದುಮುಂದಿನ ಹಂತಗಳ ಪ್ರಯತ್ನ ಮಾಡುವುದು ಆವಶ್ಯಕ

ಗುರುಪೂರ್ಣಿಮೆಯ ನಂತರ ಕಾಲವು ಸಾಧನೆ ಅನುಕೂಲ ವಾಗುತ್ತಿದೆ. ಸೂಕ್ಷ್ಮ ಯುದ್ಧದ ತೀವ್ರತೆಯು ಹೆಚ್ಚಾಗುತ್ತಿದೆ. ಹೀಗಿದ್ದರೂ, ಈಶ್ವರನ ಚೈತನ್ಯವು ಹೆಚ್ಚಾಗುತ್ತಾ ಹೋಗಲಿದೆ. ಹಿಂದೂ ರಾಷ್ಟ್ರದಲ್ಲಿ ಪ್ರವೇಶಿಸುವ ಮೊದಲು ನಮಗೆ ದೊಡ್ಡ ಆಪತ್ಕಾಲವನ್ನು ಎದುರಿಸಬೇಕಾಗಿ ಬಂದಿದೆ. ಈಗ ಪ್ರಯತ್ನಗಳು ಸಹಜವಾಗಿ ಆಗುತ್ತಿವೆ; ಆದರೆ ಅವುಗಳನ್ನು ಹೆಚ್ಚಿಸಬೇಕಾಗಿದೆ. ‘ನನ್ನ ಆಧ್ಯಾತ್ಮಿಕ ಉನ್ನತಿಯಾಗಲು ಯಾವ ಗುಣಗಳು ನನ್ನಲ್ಲಿರುವುದು ಆವಶ್ಯಕವಾಗಿದೆ ?’. ‘ಯಾವ ಗುಣಗಳನ್ನು ಹೆಚ್ಚಿಸಬೇಕು ?’, ‘ಅಂತರ್ಮನದ ಆಳಕ್ಕೆ ಹೋಗಿ ಹೇಗೆ ನಿರೀಕ್ಷಣೆಯನ್ನು ಮಾಡಬೇಕು ?,’ ಇದಕ್ಕಾಗಿ ನಾವು ಪ್ರಯತ್ನಗಳನ್ನು ಹೆಚ್ಚಿಸಬೇಕು. ನಮ್ಮ ಆಧ್ಯಾತ್ಮಿಕ ಮಟ್ಟವು ಮಹತ್ವದ್ದಾಗಿದೆ; ಆದರೆ ಅದರಲ್ಲಿ ಸಿಲುಕದೇ ಅದರ ಅರಿವಿಟ್ಟು ಕೊಂಡು ಮುಂದುಮುಂದಿನ ಪ್ರಯತ್ನಗಳನ್ನು ಮಾಡಬೇಕು.

೩. ಅಪ್ರಿಯ (ಇಷ್ಟವಾಗದ) ಪ್ರಸಂಗಗಳಲ್ಲಿ ಮನಸ್ಸಿನ ಸ್ಥಿತಿಯ ಬಗ್ಗೆ ಆಳವಾಗಿ ಚಿಂತನೆ ಮಾಡುವುದು ಆವಶ್ಯಕ !

ಯಾವುದಾದರೊಂದು ಸೇವೆಗಾಗಿ ಸಾಧಕರ ಸಂಖ್ಯೆಯು ಕಡಿಮೆ ಇದ್ದರೆ, ಆಗ ‘ಈಶ್ವರನು ಎಲ್ಲವನ್ನೂ ಮಾಡಿಸಿಕೊಳ್ಳುವನಿದ್ದಾನೆ’, ಎಂಬ ಭಾವವಿರುತ್ತದೆಯೇ ? ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸಿನ ವಿರುದ್ಧ ಘಟಿಸಿದಾಗ ನಮಗೇನು ಅನಿಸುತ್ತದೆ ? ಅದು ಪರೀಕ್ಷೆ ಇರುತ್ತದೆ. ಇಂತಹ ಸಮಯದಲ್ಲಿ, ‘ನಮ್ಮಲ್ಲಿ ಅಪೇಕ್ಷೆ ಇರುತ್ತದೆಯೇ ?’ ಎಂದು ಮನಸ್ಸಿನ ನಿರೀಕ್ಷಣೆಯನ್ನು ಮಾಡಬೇಕು. ನಮಗೆ ಯಾರಾದರೂ ತಪ್ಪು ಹೇಳಿದರೆ ಅಥವಾ ಜವಾಬ್ದಾರ ಸಾಧಕರು ಸಹಸಾಧಕರ ಪ್ರಶಂಸೆ ಮಾಡಿದರೆ, ‘ನಮಗೇನು ಅನಿಸುತ್ತದೆ’, ಎಂದು ಆಳಕ್ಕೆ ಹೋಗಿ ಚಿಂತನ ಮಾಡಬೇಕು. ದೋಷ-ಅಹಂನ್ನು ಪಾರು ಮಾಡಲು ಸಾಧ್ಯವಾಗದೇ ಸಂಘರ್ಷವಾದರೆ, ಮನಸ್ಸಿನ ಶಕ್ತಿಯು ಖರ್ಚಾಗುತ್ತದೆ. ಮನಸ್ಸು ಸಮತೋಲನದಲ್ಲಿ ರಬೇಕು. ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಾಗುವ ವರೆಗೆ ಮನಸ್ಸಿನ ಸ್ಥಿತಿಯು ಮೇಲೆ-ಕೆಳಗೆ ಆಗುತ್ತಲೇ ಇರುತ್ತದೆ. ಪೂರ್ವಗ್ರಹ, ಪ್ರತಿಕ್ರಿಯೆ, ‘ನನಗೆ ಸರಿಹೊಂದುವುದಿಲ್ಲ’ ಎಂಬಂತಹ ವಿಚಾರಗಳಲ್ಲಿ ಸಿಲುಕಿದರೆ, ನಾವು ಅಧ್ಯಾತ್ಮದಲ್ಲಿ ಇನ್ನೂ ಹಿಂದೆ ಹೋಗುತ್ತೇವೆ. ಎಲ್ಲರೂ ತಪ್ಪುತ್ತಾರೆ; ಆದರೆ ‘ಸಾಧಕರು ಎಲ್ಲ ವಿಷಯಗಳ ತ್ಯಾಗ ಮಾಡಿ ಸಾಧನೆಯನ್ನು ಮಾಡಲು ಬಂದಿದ್ದಾರೆ. ಆ ತಪ್ಪುಗಳನ್ನು ತಡೆಗಟ್ಟಲು ಪ್ರಯತ್ನವನ್ನೂ ಮಾಡುತ್ತಿದ್ದಾರೆ’, ಎಂದು ಗಮನದಲ್ಲಿಟ್ಟು ನಾವು ಸಾಧಕರ ಗುಣಗಳನ್ನು ಎಷ್ಟು ನೋಡುತ್ತೇವೆ ? ‘ಇನ್ನೂ ಪ್ರಯತ್ನವನ್ನು ಹೆಚ್ಚಿಸಬೇಕು’, ಎಂಬ ಅರಿವನ್ನು ಸಾಧಕರು ಇಟ್ಟಕೊಳ್ಳಬೇಕು.

೪. ಭಗವಂತನ ಸರ್ವಸಾಮರ್ಥ್ಯದ ಅರಿವು ಮೂಡಿಸಿದ ಕೊರೋನಾ !

ಕೊರೋನಾ ರೋಗವು ಹರಡುವ ಮೊದಲು ಮನುಷ್ಯನಲ್ಲಿ ‘ನಾನು ಏನೂ ಮಾಡಬಹುದು’, ಎಂಬ ಅಹಂ ಇತ್ತು; ಆದರೆ ಈಶ್ವರನು ಅವನಿಗೆ ತಲೆತಗ್ಗಿಸುವ ಹಾಗೆ ಮಾಡಿದನು. ಶ್ರೀಮಂತ ನಾಗಿರಲಿ ಅಥವಾ ಬಡವನಾಗಿರಲಿ, ಈಶ್ವರನು ಎಲ್ಲರಿಗೂ, ಈಶ್ವರನಿಂದಲೇ ಎಲ್ಲವೂ ಆಗುತ್ತದೆ ಬೇರೆಯವರಿಂದಲ್ಲ, ಎಂದು ತೋರಿಸಿಕೊಟ್ಟನು. ‘ನಾನು ಪ್ರಸಾರ ಮಾಡುತ್ತೇನೆ’, ಎಂದು ನಮಗೆ ಅನಿಸುತ್ತದೆ; ಆದರೆ ಅದೆಲ್ಲವೂ ಈಶ್ವರನ ನಿಯೋಜನೆಯಾಗಿದೆ. ನಾವು ಕೇವಲ ಮಾಧ್ಯಮವಾಗಿದ್ದೇವೆ. ‘ನಾನಿಲ್ಲದಿದ್ದರೂ, ಈಶ್ವರನು ತನ್ನ ಕಾರ್ಯವನ್ನು ಮಾಡಿಯೇ ಮಾಡುವನು. ನಾನಿಲ್ಲವೆಂದು; ಗ್ರಂಥನಿರ್ಮಿತಿ ಅಥವಾ ಪ್ರಸಾರಗಳಂತಹ ಯಾವುದೇ ಸೇವೆಯು ನಿಲ್ಲುವುದಿಲ್ಲ’, ಎಂದು ಸಾಧಕರು ಗಮನದಲ್ಲಿಡಬೇಕು.

೫. ಗುರುಗಳ ಬಗ್ಗೆ ಎಷ್ಟು ಕೃತಜ್ಞತೆ ಎನಿಸುತ್ತದೆ, ಎಂಬುದರ ಮೇಲೆ ಸಾಧನೆಯಲ್ಲಿನ ಪ್ರಯತ್ನಗಳು ಅವಲಂಬಿಸಿರುತ್ತದೆ !

ನಿಮಗೆ ಸಿಟ್ಟು ಬರುತ್ತದೆ’, ಎಂದು ಯಾರಾದರು ಹೇಳಿದರೆ, ‘ಗುರುಗಳು ಅರಿವು ಮಾಡಿಕೊಟ್ಟರೆಂದು ನಮಗೆ ಅದು ತಿಳಿಯಿತು’, ಎಂಬ ಕೃತಜ್ಞತೆಯು ಎಷ್ಟು ಜನರಿಗೆ ಅನಿಸುತ್ತದೆ ? ಕೃತಜ್ಞತೆಯು ಎಷ್ಟು ಪ್ರಮಾಣದಲ್ಲಿದೆ, ಎಂಬುದರ ಮೇಲೆ ಸಾಧನೆಯಲ್ಲಿನ ಪ್ರಯತ್ನವು ಅವಲಂಬಿಸಿರುತ್ತದೆ. ಸಾಧನೆಯಲ್ಲಿ ಅಲ್ಪಸಂತುಷ್ಟಿ ಬೇಡ. ‘ತುಂಬಾ ಪ್ರಯತ್ನ ಮಾಡಬೇಕಾಗಿದೆ’, ಎಂಬ ಅರಿವಿಟ್ಟುಕೊಳ್ಳೋಣ. ನಮಗೆ ೨ ಕಿಲೋಮೀಟರ್ ನಡೆಯಬೇಕಾಗಿದೆ, ಎಂದು ತಿಳಿಯೋಣ ; ಆದರೆ ನಾವು ೨ ಹೆಜ್ಜೆಗಳಷ್ಟು ನಡೆದು ನಿಂತರೆ, ವೇಗವು ಕಡಿಮೆಯಾಗುವುದೆಂದು, ಗಮನದಲ್ಲಿಟ್ಟು ಪ್ರಯತ್ನಿಸೋಣ. ಈ ಗುರುಪೂರ್ಣಿಮೆಯಂದು ‘ಎಲ್ಲ ಸಾಧಕರ ಪ್ರಗತಿಯಾಗಬೇಕೆಂದೇ ಗುರುಗಳ ಸಂಕಲ್ಪವಾಗಿತ್ತು. ಗುರುದೇವರು, ಎಲ್ಲ ಸಾಧಕರು ಆಧ್ಯಾತ್ಮ ದಲ್ಲಿ ಮುಂದುಮುಂದೆ ಹೋಗಬೇಕೆಂದು ದಾರಿ ಕಾಯುತ್ತಿದ್ದಾರೆ. ನಾವು ಮಾಡಿದ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ನೋಡಿದರೂ ಗುರುಗಳಿಗೆ ಆನಂದವಾಗುತ್ತದೆ. ಆ ಪ್ರಯತ್ನಗಳೂ ಗುರುಗಳ ಕೃಪೆಯಿಂದಲೇಆಗಿರುತ್ತವೆ. ಅರ್ಜುನನು ಮೀನಿನ ಕಣ್ಣನ್ನು ಭೇದಿಸುವ ಧ್ಯೇಯವಿಟ್ಟಾಗ, ಶ್ರೀಕೃಷ್ಣನು ಅರ್ಜುನನಿಗೆ, ನೀನು ಜಾಗೃತವಾಗಿರು ಮತ್ತು ಧ್ಯೇಯದ ಕಡೆಗೆ ಗಮನವಿಡು, ಎಂದು ಹೇಳಿದಾಗ ಅರ್ಜುನನು ಶ್ರೀಕೃಷ್ಣನಿಗೆ, ‘ಶ್ರೀಕೃಷ್ಣಾ, ನೀನೇನು ಮಾಡುವೆ ?’, ಎಂದು ಕೇಳಿದನು. ಆಗ ಶ್ರೀಕೃಷ್ಣನು, “ನಿನಗೇನು ಮಾಡಲು ಸಾಧ್ಯವಿಲ್ಲವೋ, ಅದನ್ನು ನಾನು ಮಾಡುತ್ತೇನೆ !” (ಅಂದರೆ ನೀರಿನಲ್ಲಿರುವ ಮೀನಿನ ಕಣ್ಣನ್ನು ಭೇದಿಸಲು ನೀರನ್ನು ಸ್ಥಿರವಾಗಿಡುವ ಕಾರ್ಯವನ್ನು ಭಗವಾನ ಶ್ರೀಕೃಷ್ಣನು ಮಾಡುವನಿದ್ದನು.) ಎಂದು ಹೇಳಿದನು.

೬. ಸಾಕ್ಷಾತ್ ಶ್ರೀವಿಷ್ಣುವು ಗುರುಗಳ ರೂಪದಲ್ಲಿ ಲಭಿಸಿರುವುದರಿಂದ ಪರಾಕಾಷ್ಠೆಯ ಪ್ರಯತ್ನಗಳಾಗಬೇಕು !

ಈಶ್ವರನು ನಮಗೆ ಸಾಧನೆಯನ್ನು ಎಷ್ಟು ಸುಗಮ ಮಾಡಿಕೊಟ್ಟಿದ್ದಾನೆ ! ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದ್ದರಿಂದ ೧೦೦ ಕ್ಕಿಂತಲೂ ಹೆಚ್ಚು ಸಾಧಕರು ಸಂತರಾದರು, ಮತ್ತು ಸಾವಿರಾರು ಸಾಧಕರು ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡಿದ್ದಾರೆ. ಅಧ್ಯಾತ್ಮವು ಎಷ್ಟು ಸುಂದರವಾಗಿದೆ. ಅದು ಕೃತಿಯ ಶಾಸ್ತ್ರವಾಗಿದೆ. ‘ಗುರುಕೃಪಾಯೋಗ’ವು ಶ್ರೇಷ್ಠ ಸಾಧನಾಮಾರ್ಗವಾಗಿದೆ. ಸಾಕ್ಷಾತ್ ಶ್ರೀವಿಷ್ಣು ಗುರುರೂಪದಲ್ಲಿದ್ದು ಸಾಧಕರ ಸಾಧನೆಯಾಗಬೇಕೆಂದು ಸಂಕಲ್ಪವನ್ನು ಮಾಡಿರುವುದರಿಂದ, ನಾವು ಅದೆಷ್ಟು ಮಾಡಬೇಕು. ‘ಆಗಿರುವುದೆಲ್ಲವೂ ಈಶ್ವರನಿಂದಾಗಿದೆ’, ಎಂಬ ಅರಿವನ್ನು ಸತತವಾಗಿ ಮನಸ್ಸಿನಲ್ಲಿಡೋಣ. ನಮಗೆ ಏನೂ ಮಾಡಲು ಸಾಧ್ಯವಿಲ್ಲ. ತಮ್ಮಲ್ಲಿ ಗುಣಗಳನ್ನು ಅಂಕುರಿಸಲು, ಸಾಧಕತ್ವವನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ. ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂನ ಪಟ್ಟಿಯನ್ನು ತಯಾರಿಸಿ ಅವುಗಳನ್ನು ದೂರಗೊಳಿಸಲು ಪ್ರಯತ್ನಿಸಿ. ತಮ್ಮಲ್ಲಿ ಪರಿಪೂರ್ಣತೆ ಬರಲು ಕ್ಷಮತೆಗನುಸಾರ ಹೆಚ್ಚೆಚ್ಚು ಪ್ರಯತ್ನಗಳನ್ನು ಮಾಡಿರಿ. ನಮ್ಮ ದೇಹದ ಮೇಲೆಯೂ ಭಗವಂತನ ನಿಯಂತ್ರಣವಿದೆ. ಎಲ್ಲವನ್ನು ಮಾಡುವವನು ಭಗವಂತನಾಗಿದ್ದಾನೆ. ರೈಲು (ಎಕ್ಸಪ್ರೆಸ್) ಯಾವ ವೇಗದಿಂದ ಚಲಿಸುತ್ತಿರುತ್ತದೋ, ಅದೇ ರೀತಿ ಸಾಧನೆಯನ್ನೂ ವಿಹಂಗಮ ಗತಿಯಿಂದ ಮಾಡೋಣ.

ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಇವರ ಚೈತನ್ಯದಿಂದ ಆಗುವ ಸೂಕ್ಷ್ಮದ ಆಧ್ಯಾತ್ಮಿಕ ಕಾರ್ಯ ಮತ್ತು ಅವರಲ್ಲಿರುವ ದೇವರ ಅವತಾರತ್ವ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸದ್ಗುರು ಬಿಂದಾ ಸಿಂಗಬಾಳ ಇವರು ಸಾಮಾನ್ಯರಲ್ಲ ಅವರಲ್ಲಿ ದೇವರ ಅವತಾರತ್ವವಿದ್ದು ಅದುವೇ ಸಮಷ್ಟಿಗೆ ಮಾರ್ಗದರ್ಶಕವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ನಾವು ಎಷ್ಟೇ ಚಿಂತನೆ ಮಾಡಿದರೂ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಸೂಕ್ಷ್ಮದ ಆಧ್ಯಾತ್ಮಿಕ ಕಾರ್ಯದ ವ್ಯಾಪ್ತಿಯನ್ನು ಅರಿಯಲು ಸಾಧ್ಯವಿಲ್ಲ. ಅವರ ಸೂಕ್ಷ್ಮದ ಕಾರ್ಯವು ಅಸಾಧಾರಣವಾಗಿದೆ. ಏಕೆಂದರೆ ಅದು ಮಾನವನ ಬುದ್ಧಿಯನ್ನು ಮೀರಿದೆ. ಮಾನವನ ದೇಹವು ವರ್ಷದ ೧೨ ತಿಂಗಳುಗಳು ನಿರಂತರವಾಗಿ ಸೇವೆಯನ್ನು ಮಾಡಲು ಸಾಧ್ಯವಿದೆಯೆಂದರೆ ಈ ವಿಷಯವು ಮಾನವನ ಬುದ್ಧಿಯನ್ನು ಮೀರಿದೆ. ಇದು ಮಾನವನ ಕಾರ್ಯವಲ್ಲ; ಇದು ಅವತಾರಿ ಕಾರ್ಯವೇ ಆಗಿದೆ. ದೈವೀ ಅವತಾರವೇ ಹೀಗೆ ಮಾಡಲು ಸಾಧ್ಯ. ಆದ್ದರಿಂದ ಸದ್ಗುರು ಬಿಂದಾ ಸಿಂಗಬಾಳ ಇವರು ಸಾಮಾನ್ಯರಲ್ಲ ಅವರಲ್ಲಿ ದೇವತೆಗಳ ಅವತಾರತ್ವವಿದೆ ಮತ್ತು ಅದುವೇ ಸಮಷ್ಟಿಗೆ ಮಾರ್ಗ ದರ್ಶಕವಾಗಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ, ಅವರ ಸೂಕ್ಷ್ಮದ ಕಾರ್ಯವು ಎಷ್ಟು ಅಗಾಧವಾಗಿದೆಯೆಂದರೆ ಅದರ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಮಾನವನ ಮನಸ್ಸಿಗೆ ಇದನ್ನು ತಿಳಿದುಕೊಳ್ಳಲು ಕಠಿಣವಿದೆ. ಸ್ಥೂಲದಿಂದ ಎಷ್ಟೇ ವಿಚಾರ ಮಾಡಿದರೂ ಸಣ್ಣ ಸಣ್ಣ ವಿಷಯಗಳಿಂದ ಸದ್ಗುರು ಬಿಂದಾ ಸಿಂಗಬಾಳರವರ ಅವತಾರತ್ವ ಸಿದ್ಧವಾಗುತ್ತಿರುತ್ತದೆ. ಸದ್ಗುರು ಬಿಂದಾ ಸಿಂಗಬಾಳ ಇವರಲ್ಲಿರುವ ಚೈತನ್ಯರೂಪಿ ಅವತಾರತ್ವದ ಚರಣಗಳಲ್ಲಿ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು. – ಸದ್ಗುರು (ಸೌ.) ಅಂಜಲಿ ಗಾಡಗೀಳ (ಸಂಗ್ರಹಕರು : ಶ್ರೀ. ದಿವಾಕರ ಆಗಾವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೩.೨೦೨೦)

ಇಲ್ಲಿನ ನೀಡಿದ ಲೇಖನವು ಹಿಂದಿನದ್ದಾಗಿರುವುದರಿಂದ ಸಂತರ ಹೆಸರನ್ನು ಹಿಂದಿನಂತೆ ಉಲ್ಲೇಖಿಸಲಾಗಿದೆ. – ಸಂಪಾದಕರು