ಸನಾತನ ಸಂಸ್ಥೆಯ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕೆ ಶ್ರೀ ವಿದ್ಯಾಚೌಡೇಶ್ವರಿದೇವಿಯ ಆಶೀರ್ವಾದವಿದೆ ಮತ್ತು ದೇವಿಯೇ ಈ ಕಾರ್ಯವನ್ನು ಮುನ್ನಡೆಸಲಿದ್ದಾರೆ !
ಹಿಂದಿನ ಕಾಲದಲ್ಲಿ ಸಂಕಟಗಳು ಬಂದಾಗ ಶಿಷ್ಯರು ಸದ್ಗುರುಗಳ ಮೊರೆ ಹೋಗುತ್ತಿದ್ದರು ಮತ್ತು ಗುರುಗಳು ಶಿಷ್ಯನ ರಕ್ಷಣೆ ಮಾಡುತ್ತಿದ್ದರು. ಯಾವಾಗ ಹರಿಹರ ಇಬ್ಬರೂ ಮುನಿಸಿಕೊಳ್ಳುತ್ತಿದ್ದರೋ ಆಗ ಗುರುಗಳು ಜೊತೆಗಿದ್ದು ಅವರನ್ನು ಕಾಯುತ್ತಿದ್ದರು. ಗುರುವಿನ ಗುಲಾಮನಾಗಬೇಕು ಅಂದರೆ ಮಾತ್ರ ಮುಕ್ತಿ ಸಿಗುತ್ತದೆ. ಹಿಂದಿನ ಕಾಲದಲ್ಲಿ ಗುರುವಿನ ಮಹತ್ವ ಎಲ್ಲರಿಗೂ ತಿಳಿದಿತ್ತು. ಈ ಆಧುನಿಕ ಕಾಲದಲ್ಲಿ, ಅಂದರೆ ಕಲಿಯುಗದಲ್ಲಿ ಜನರಿಗೆ ಅವರ ಮಹತ್ವ ತಿಳಿದಿಲ್ಲ. ಇಂದು ಸನಾತನ ಸಂಸ್ಥೆಯ ಸಾಧಕರು ಗುರುಗಳ ಮಾರ್ಗದರ್ಶನದಲ್ಲಿ ಅನುಗ್ರಹದಿಂದ ಸಾಧನೆ ಮಾಡುತ್ತಿದ್ದಾರೆ. ಗುರುಶಿಷ್ಯ ಹೇಗಿರುತ್ತಾರೆಂದು ಅಲ್ಲಿ ಪ್ರತ್ಯಕ್ಷ ಕಲಿಯಲು ಸಿಗುತ್ತದೆ, ಗುರು ಎಂದರೆ ಕತ್ತಲೆಯಲ್ಲಿರುವವರನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗುವವರು. ಸಣ್ಣವರಿರುವಾಗ ತಂದೆತಾಯಿ ಮೊದಲ ಗುರು ಆಗಿರುತ್ತಾರೆ. ಅನಂತರ ಶಾಲೆಯಲ್ಲಿ ಹೇಳಿಕೊಡುವ ಶಿಕ್ಷಕರು ಇರುತ್ತಾರೆ. ನಮ್ಮೆಲ್ಲರಿಗೂ ಗೊತ್ತಿರುವಂತೆ ದತ್ತಾತ್ರೇಯರು, ಶ್ರೀರಾಘವೇಂದ್ರ ಸ್ವಾಮೀಜಿಯವರು, ಸತ್ಯಸಾಯಿಬಾಬಾರವರು ಇವರೆಲ್ಲರೂ ಗುರುಗಳೇ ಇದ್ದಾರೆ. ಇಂತಹ ಗುರುಗಳಿಂದ ಲಕ್ಷಗಟ್ಟಲೆ ಜನರು ಮೋಕ್ಷವನ್ನು ಪಡೆದಿದ್ದಾರೆ. ಗುರುಗಳಿಗೆ ಶರಣಾಗಬೇಕು, ಅವರು ಹೇಳಿದ ಹಾಗೆ ನಡೆಯಬೇಕು.
ಇಂದು ಸನಾತನ ಸಂಸ್ಥೆ ಮತ್ತು ಅದರ ಆಶ್ರಮಗಳಲ್ಲಿ ಗುರುಗಳ ಮಾರ್ಗದರ್ಶನದಿಂದ ನಡೆಯುತ್ತಿರುವ ಸನಾತನ ಧರ್ಮ ಅಂದರೆ ಹಿಂದೂ ಧರ್ಮದ ಕಾರ್ಯ ಇಡೀ ದೇಶಾದ್ಯಂತ ಪ್ರಸಾರವಾಗುತ್ತಿದೆ. ಈ ರಾಷ್ಟ್ರ ಮತ್ತು ಧರ್ಮದ ಕಾರ್ಯ ಉತ್ತಮವಾಗಲಿ ಹಾಗೂ ಇದಕ್ಕೆ ಸನಾತನ ಸಂಸ್ಥೆ ಆಶ್ರಮ ಸಾಕ್ಷಿಯಾಗಲಿ ಮತ್ತು ಇವೆಲ್ಲ ಕಾರ್ಯಕ್ಕೆ ಶ್ರೀ ವಿದ್ಯಾಚೌಡೇಶ್ವರಿದೇವಿಯ ಆಶೀರ್ವಾದ ಇದೆ ಮತ್ತು ದೇವಿಯೇ ಕಾರ್ಯವನ್ನು ಮುನ್ನಡೆಸಲಿದ್ದಾರೆ. ಗುರುಪೂರ್ಣಿಮೆಯ ಶುಭಕಾರ್ಯಕ್ಕೆ ದೇವಿಯ ಆಶೀರ್ವಾದ ಎಲ್ಲರ ಮೇಲಿದೆ. – ಪ. ಪೂ. ಶ್ರೀ ಶ್ರೀ ಶ್ರೀ ಬಾಲಮಂಜುನಾಥ ಮಹಾಸ್ವಾಮೀಜಿ, ಶ್ರೀ ಮಠ, ಹಂಗರಹಳ್ಳಿ, ಕುಣಿಗಲ ತಾಲೂಕು. (೪.೭.೨೦೨೦)