ಗುರುಗಳು ಜೀವದಶೆಯಲ್ಲಿ ಈಶ್ವರನಲ್ಲಿ ಏನು ಬೇಡುತ್ತಾರೆ ?

ಅ. ಸಂತ ತುಕಾರಾಮ ಮಹಾರಾಜರು ಜೀವದಶೆಯಲ್ಲಿ ಬೇಡುವುದು

ಹೇ ಈಶ್ವರಾ (ಪಾಂಡುರಂಗಾ), ನನ್ನ ಮೋಕ್ಷ ಪ್ರಾಪ್ತಿಯ ವ್ರತವನ್ನು ಯಾವನು ಮುಂದೆ ನಡೆಸುವವನಿದ್ದಾನೆಯೋ, ಅವನಿಗೆ ನೀನು ನನ್ನೆಡೆಗೆ ಬರಲು ಪ್ರೋತ್ಸಾಹಿಸು. ಹೇ ಭಗವಂತಾ, ನನ್ನ ಮೇಲೆ ಕೃಪೆಮಾಡು ಮತ್ತು ಯಾವನು ಬ್ರಹ್ಮಜ್ಞಾನದಲ್ಲಿ (ಮೋಕ್ಷವಿದ್ಯೆಯಲ್ಲಿ) ಶ್ರೇಷ್ಠನಾಗಿದ್ದಾನೆಯೋ, ಯಾವನ ಕೀರ್ತಿಯು ತ್ರಿಲೋಕದಲ್ಲಿ ಹರಡುವುದಿದೆಯೋ, ಅಂತಹ ಶಿಷ್ಯನನ್ನು ನನಗೆ ಕೊಡು. ಹೇ ವಿಠ್ಠಲಾ ನಿನ್ನ ದ್ವಾರದಲ್ಲಿ ನಿಂತು ಈ ತುಕಾರಾಮ, ನಿನ್ನ ಭಕ್ತ ನಿನಗೆ ಪ್ರಾರ್ಥಿಸುತ್ತಿದ್ದಾನೆ. – ಸಂತ ತುಕಾರಾಮ ಗಾಥಾ, ಅಭಂಗ ೫೧೭

‘ಹೇ ದೇವಾ, ಸಾತ್ ಭಕ್ತಿ ಮತ್ತು ಪ್ರೇಮವು ಯಾವನ ನರನಾಡಿಗಳಲ್ಲಿ ತುಂಬಿದೆಯೋ, ಹಾಗೆಯೇ ಈಶ್ವರಪ್ರಾಪ್ತಿಯು ಯಾವನ ದೃಢ ಭಾವ ವಾಗಿದೆಯೋ ಮತ್ತು ಯಾರಿಗೆ ಬ್ರಹ್ಮಜ್ಞಾನದ ಅರಿವು (ಈಶ್ವರೀ ಪ್ರಭುತ್ವದ ಅರಿವು) ಇದೆಯೋ, ಅಂತಹ ಶಿಷ್ಯನನ್ನು ನೀನು ನನಗೆ ಕೊಡು. ಯಾರಲ್ಲಿ ಈ ಎಲ್ಲ ಯೋಗಗಳು ಕೂಡಿ ಬರುತ್ತವೆಯೋ, ಅಲ್ಲಿ ಸಂಸಾರದ ಬಗ್ಗೆ ವೈರಾಗ್ಯವೇ ಬಿಡಾರ ಬಿಟ್ಟಿರುತ್ತದೆ. ಇವೆಲ್ಲವೂ ಯಾರಲ್ಲಿ ಇವೆಯೋ, ಅಂತಹ ಶಿಷ್ಯನ ದೃಷ್ಟಿ ತೆಗೆಯಬೇಕು, ಎಂದು ತುಕಾರಾಮರಿಗೆ ಅನಿಸುತ್ತದೆ. – ಸಂತ ತುಕಾರಾಮ ಗಾಥಾ, ಅಭಂಗ ೮೦೫