ಗುರುಪೂರ್ಣಿಮೆಯೆಂದರೆ ಪರಬ್ರಹ್ಮಸ್ವರೂಪಿ ಶ್ರೀಕೃಷ್ಣನ ಆದಿಶಕ್ತಿ ಪೂಜೆ !

ಪ.ಪೂ.ಪಾಂಡೆ ಮಹಾರಾಜ

೧. ಗುರುಪೂರ್ಣಿಮೆಯು ಚೈತನ್ಯದ ಗುರುಪೂರ್ಣಿಮೆಯಾಗಿರುವುದರಿಂದ ತಮ್ಮಲ್ಲಿನ ಚೈತನ್ಯವನ್ನು ಜಾಗೃತಗೊಳಿಸಿ ಸೇವೆ ಮಾಡಿ !

ಎಲ್ಲೆಡೆ ಚೈತನ್ಯವೇ ಇದೆ ಹಾಗೂ ಅದೇ ಗುರು ಸ್ವರೂಪದಲ್ಲಿ ಕಾರ್ಯ ಮಾಡುತ್ತದೆ. ಅದರದ್ದೇ ಗುರು ಪೂರ್ಣಿಮೆ, ಅದರದ್ದೇ ಕಾರ್ಯವಾಗಿದೆ ಹಾಗೂ ಅದೇ ಮಾಡಲಿಕ್ಕಿದೆ. ನಾವು ಕೇವಲ ನೋಡಲಿಕ್ಕಿದ್ದೇವೆ. ಅದಕ್ಕಾಗಿ ಈ ಚೈತನ್ಯಮಯ ಗುರುಪೂರ್ಣಿಮೆಯಿದೆ, ಎಂದು ತಿಳಿದು ತಮ್ಮಲ್ಲಿನ ಚೈತನ್ಯವನ್ನು ಜಾಗೃತಗೊಳಿಸಿ ಸೇವೆ ಮಾಡಲಿಕ್ಕಿದೆ.

೨. ತನ್ನಲ್ಲಿರುವ ಆದಿಶಕ್ತಿಯ ಸ್ವರೂಪವನ್ನು ಗುರುತಿಸಿ ಅವನ ಸ್ತವನ ಮಾಡಿ ಹಾಗೂ ಅದನ್ನು ಜಾಗೃತಗೊಳಿಸಿರಿ !

ನಾವು ಸ್ವರಕ್ಷಣಾ ತರಬೇತಿಯ ಸಮಯದಲ್ಲಿ ಆದಿಶಕ್ತಿ ನೀ ಅಂತಶಕ್ತಿ ನೀ ಜಗಜ್ಜನನಿ ನೀ ಲಯಕಾರಿ ನೀ || ಈ ಶಕ್ತಿಸ್ತವನವನ್ನು ಹಾಡುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಂತಃಕರಣದಲ್ಲಿನ ಆದಿ ಶಕ್ತಿಗೆ ಆವಾಹನ ಮಾಡಲಿಕ್ಕಿದೆ. ಅವಳನ್ನು ಜಾಗೃತಗೊಳಿಸಿ ಕಾರ್ಯ ಮಾಡಲಿಕ್ಕಿದೆ; ಆದರೆ ನಾವು ಬಹಿರ್ಮುಖರಾಗಿ ಆ ಶಕ್ತಿಯನ್ನು ಹೊರಗೆ ಹುಡುಕಿದರೆ ಅಥವಾ ಹೊರಗಿನ ಶಕ್ತಿಯಲ್ಲಿ ಆದಿಶಕ್ತಿಯನ್ನು ಹುಡುಕಲು ಪ್ರಯತ್ನಿಸಿದರೆ ಅದು ಕಾರ್ಯನ್ವಿತವಾಗುವುದಿಲ್ಲ. ಈ ಶಕ್ತಿ ನನ್ನಲ್ಲಿದೆ, ಅದು ಜಾಗೃತವಾಗಿ ಕಾರ್ಯ ಮಾಡಲಿದೆ, ಎಂಬುದನ್ನು ಬಿಂಬಿಸಲು ಅದನ್ನು ಈ ಸ್ತವನವಾಗಿದೆ. ಇದನ್ನು ತಿಳಿದು ಅವಳ ಸ್ತವನ ಮಾಡುವುದು ಹಾಗೂ ಅದು ಬೇರೆಯೇ ಆಗಿದೆಯೆಂದು ತಿಳಿದು ಅವಳ ಸ್ತವನ ಮಾಡುವುದು, ಇದರಲ್ಲಿ ವ್ಯತ್ಯಾಸವಿದೆ. ಆದಿಶಕ್ತಿಯನ್ನು ಹೊರಗೆ ನೋಡುವುದರಿಂದ ಅದು ದೂರವಾಗುತ್ತದೆ, ಅಂದರೆ ಬಾಹ್ಯತಃ ನೋಡಲು ಪ್ರಯತ್ನಿಸುವುದರಿಂದ ಅದು ಬೇರೆಯೆ ಶಕ್ತಿ ಆಗಿದ್ದು ಅದು ಜಾಗೃತವಾಗಿ ಕಾರ್ಯ ಮಾಡಬೇಕೆಂದು ಅನಿಸುತ್ತದೆ; ಆದರೆ ವಾಸ್ತವ ದಲ್ಲಿ, ಇಲ್ಲಿ ನಮ್ಮಲ್ಲಿನ ಶಕ್ತಿಯ ಸ್ತವನ ಮಾಡಿ ಅದನ್ನು ಜಾಗೃತಗೊಳಿಸಿ ಪುಟಿದೇಳಬೇಕು.

೩. ಗುರುಪೂರ್ಣಿಮೆಗೆ ಗುರುಗಳ ಸ್ಥಾನದಲ್ಲಿರುವ ಆದಿಶಕ್ತಿಯನ್ನು ಸ್ಮರಿಸಿ ಅದಕ್ಕೆ ಪೂಜೆ ಮಾಡಿರಿ !

೩ ಅ. ಪರಬ್ರಹ್ಮಸ್ವರೂಪವಾಗಿರುವ ಗುರುತತ್ತ್ವದ ಮಹತ್ವ !

ಗುರುರ್ಬ್ರಹ್ಮಾ ಗುರ್ರ‍ುವಿಷ್ಣುಃ ಗುರುರ್ದೇವೋ ಮಹೇಶ್ವರಃ |

ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ಅರ್ಥ : ಗುರುಗಳೇ ಬ್ರಹ್ಮಾ, ಗುರುಗಳೇ ಸರ್ವವ್ಯಾಪಕ ಭಗವಾನ್ ವಿಷ್ಣು ಹಾಗೂ ಗುರುಗಳೇ ಶಂಕರರಾಗಿದ್ದಾರೆ. ಇಷ್ಟು ಮಾತ್ರವಲ್ಲ, ಅವರು ಸಾಕ್ಷಾತ್ ಪರಬ್ರಹ್ಮ (ಈಶ್ವರನ ಈಶ್ವರ) ಆಗಿದ್ದಾರೆ. ಇಂತಹ ಗುರುಗಳಿಗೆ ನಾನು ನಮಸ್ಕರಿಸುತ್ತೇನೆ. ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರು ಆದಿಶಕ್ತಿಯ ರೂಪವೇ ಆಗಿದ್ದಾರೆ. ಪರಬ್ರಹ್ಮನಿಂದ ನಿರ್ಮಾಣವಾದ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರು ಅಂಶ ರೂಪದಲ್ಲಿ ಕಾರ್ಯ ಮಾಡುತ್ತಾರೆ, ಎಂದು ತಿಳಿದುಕೊಳ್ಳಬೇಕು. ಗುರುಪೂರ್ಣಿಮೆಯೆಂದರೆ ಆ ಪರಬ್ರಹ್ಮಸ್ವರೂಪಿ ಶ್ರೀಕೃಷ್ಣನ ಆದಿಶಕ್ತಿಯ ಪೂರ್ಣಿಮೆಯಾಗಿದೆ.

೩ ಆ. ಗುರುಪೂರ್ಣಿಮೆಯಂದು ಮಾಡಿದ ಗುರುಗಳ ಪೂಜೆಯು ಜಗದ್ಗುರು ಶ್ರೀಕೃಷ್ಣನ ಪೂಜೆಯೆ ಆಗಿದೆ !

ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನಂದ ವಿಗ್ರಹಃ |

ಅನಾದಿರಾದಿರ್ಗೋವಿಂದಃ ಸರ್ವಕಾರಣಕಾರಣಮ್ ||

– ಶ್ರೀ ಬ್ರಹ್ಮಸಂಹಿತಾ, ಶ್ಲೋಕ ೧

ಅರ್ಥ : ಶ್ರೀಕೃಷ್ಣನು ಪರಮ ಈಶ್ವರನಾಗಿದ್ದಾನೆ. ಅವನ ಶ್ರೀವಿಗ್ರಹ ನಿತ್ಯ, ಚಿರಂತನ ಹಾಗೂ ಆನಂದಸ್ವರೂಪವಾಗಿದೆ. ಅವನು ಅನಾದಿ, ಸರ್ವಶ್ರೇಷ್ಠ ಹಾಗೂ ಸರ್ವಕಾರಣಗಳ ಕಾರಣಸ್ವರೂಪ ಗೋವಿಂದ ಆಗಿದ್ದಾನೆ. ಗುರುಗಳ ಸ್ಥಾನವೆಂದರೆ ಮೂಲಸ್ವರೂಪದ ಆದಿ ಕೃಷ್ಣನೆ ಆಗಿದ್ದಾನೆ, ಅವನು ಪ್ರಳಯದ ನಂತರವೂ ಇರುತ್ತಾನೆ. ಅಂತಹ ಜಗದ್ಗುರುಗಳ ಶಕ್ತಿ ಹೀಗಿದೆ, ಆ ಶಕ್ತಿಗೆ ನಮಸ್ಕಾರಗಳು. ಗುರುಪೂರ್ಣಿಮೆಯಂದು ಮಾಡಿದ ಪೂಜೆಯು ಶ್ರೀಕೃಷ್ಣನ ಪೂಜೆಯೆ ಆಗಿದೆ, ಎಂದು ತಿಳಿದು ಮಾಡಲಾಗುತ್ತದೆ. ಗುರು ಪರಬ್ರಹ್ಮರೂಪಿ ಆಗಿರುವುದರಿಂದ ನಾವು ಅವರ ಪೂಜೆಯನ್ನು ಪರಬ್ರಹ್ಮರೂಪಿ ಕೃಷ್ಣನ ಪೂಜೆಯೆಂದು ಮಾಡುತ್ತೇವೆ.

೩ ಇ. ಸಂತ ಜ್ಞಾನೇಶ್ವರ ಮಹಾರಾಜರು ಸಹ ಮೂಲಸ್ವರೂಪದ ಆದಿ ಶಕ್ತಿಗೇ ಮೊದಲು ನಮಸ್ಕರಿಸುತ್ತಾರೆ. ಸಂತ ಜ್ಞಾನೇಶ್ವರ ಮಹಾರಾಜರು ಸಹ ಜ್ಞಾನೇಶ್ವರಿ ಬರೆಯುವಾಗ ಮೂಲಸ್ವರೂಪದ ಆದಿಶಕ್ತಿಗೇ ಮೊದಲು ನಮಸ್ಕರಿಸಿದ್ದಾರೆ. ಅವರು ಹೀಗೆನ್ನುತ್ತಾರೆ,

ಓಂ ನಮೋಜೀ ಆದ್ಯಾ | ವೇದ ಪ್ರತಿಪಾದ್ಯಾ | ಜಯಜಯ ಸ್ವಸಂವೇದ್ಯಾ | ಆತ್ಮರೂಪಾ ||

– ಜ್ಞಾನೇಶ್ವರೀ, ಅಧ್ಯಾಯ ೧, ದ್ವಿಪದಿ ೧

ಅರ್ಥ : ಓಂ ಇದು ಆದಿಶಕ್ತಿಯ ಮೊದಲ ಸ್ವರೂಪವಾಗಿದ್ದು ಅದನ್ನು ವೇದಗಳು ಪ್ರತಿಪಾದಿಸಿವೆ. ಅದೇ ಸ್ವಸಂವೇದ್ಯದಂತಹ ಆತ್ಮಸ್ವರೂಪದಿಂದ ಎಲ್ಲೆಡೆ ಕಾರ್ಯ ಮಾಡುತ್ತಿದೆ, ಇಂತಹ ಓಂಕಾರರೂಪಿ (ಶ್ರೀಕೃಷ್ಣರೂಪಿ) ಆದಿಶಕ್ತಿಗೆ ನಮಸ್ಕಾರಗಳು.

೩ ಈ. ಗುರುಪೂರ್ಣಿಮೆಗೆ ಪ.ಪೂ.ಭಕ್ತರಾಜ ಮಹಾರಾಜರೂಪಿ ಗುರುಗಳ ಚೈತನ್ಯದ ಪೂಜೆ ಮಾಡಲಾಗುವುದು : ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರು ಶ್ರೀಕೃಷ್ಣನ ರೂಪವೇ ಆಗಿದ್ದಾರೆ. ನಮಗೆ ಗುರುಪೂರ್ಣಿಮೆಯ ಸಮಯದಲ್ಲಿ ಅವರಲ್ಲಿನ ಚೈತನ್ಯರೂಪಿ ಮಹಾಶಕ್ತಿಯ ಪೂಜೆ ಮಾಡಲಿಕ್ಕಿದೆ. ಇಲ್ಲಿ ಈ ಶಕ್ತಿಯ ಹೆಸರು ಪ.ಪೂ. ಭಕ್ತರಾಜ ಮಹಾರಾಜ ಎನ್ನಲಾಗಿದೆ. ಅಂತೂ ಇದು ಗುರುಗಳ ಚೈತನ್ಯದ ಪೂಜೆ ಆಗಿದೆ. ಚೈತನ್ಯದ ಹೊರತು ಬೇರೆ ಏನೂ ಇಲ್ಲ.

೪. ಗುರುಪೂರ್ಣಿಮೆಯೆಂದರೆ ಚೈತನ್ಯರೂಪಿ ಮೂಲತತ್ತ್ವದ ಪೂಜೆಯಾಗಿದ್ದು ಮೂಲ ಸ್ವರೂಪವನ್ನು ಮರೆತಿರುವುದರಿಂದ ಮತ್ತು ಬಹಿರ್ಮುಖ ವೃತ್ತಿಯಿಂದ ಕಾರ್ಯ ಮಾಡುವುದರಿಂದ ವಿವಿಧ ಸಂಪ್ರದಾಯ, ಪಂಥ ಇತ್ಯಾದಿಗಳ ನಿರ್ಮಾಣವಾಗುವುದು

ಗುರುಪೂರ್ಣಿಮೆಯೆಂದರೆ ಚೈತನ್ಯರೂಪಿ ಮೂಲತತ್ತ್ವದ ಪೂಜೆ ಯಾಗಿದೆ; ಏಕೆಂದರೆ ಅದೇ ಎಲ್ಲೆಡೆ ಎಲ್ಲ ಜಡ-ಚೇತನ ಸ್ವರೂಪದಲ್ಲಿ ಕಾರ್ಯ ಮಾಡುತ್ತಿದ್ದು ನಾವು ಅದನ್ನು ಗುರುತಿಸಲು ಅದರ ಸ್ವರೂಪಕ್ಕನುಸಾರ ಬೇರೆ ಬೇರೆ ಹೆಸರನ್ನು ಕೊಡುತ್ತೇವೆ. ವಾಸ್ತವದಲ್ಲಿ ಆದಿಶಕ್ತಿ ಗುರುತತ್ತ್ವದ ಸ್ವರೂಪವು ಎಲ್ಲೆಡೆ ಒಂದೇ ಆಗಿದೆ. ಅದರ ಮೂಲ ಸ್ವರೂಪವನ್ನು ಮರೆತಿರುವುದರಿಂದ ಹಾಗೂ ಬಹಿರ್ಮುಖ ವೃತ್ತಿಯಿಂದ ಬಾಹ್ಯ ರೂಪದ ಕಡೆಗೆ ನೋಡು ತ್ತಿರುವುದರಿಂದ ವಿವಿಧ ಸಂಪ್ರದಾಯ, ಪಂಥ ಇತ್ಯಾದಿಗಳಾಗಿವೆ. ಆದ್ದರಿಂದ ಭೇದಭಾವ ನಿರ್ಮಾಣವಾಯಿತು. ಭೇದಭಾವದಿಂದಲೇ ಇಂದು ಹಿಂದೂ ಧರ್ಮದ ಶ್ರೇಷ್ಠ ಶಕ್ತಿಯು ಲೋಪವಾಗಿದೆ, ವಿಭಜಿಸಲ್ಪಟ್ಟಿದೆ. ಆದ್ದರಿಂದ ಧರ್ಮಶಕ್ತಿಗೆ ಗ್ಲಾನಿ ಬಂದಿದೆ. ಇಂದು ಈ ಬಾಹ್ಯ ಸಂಸ್ಕಾರವನ್ನು ದೂರಗೊಳಿಸಿ, ಆ ಮೂಲ ಶಕ್ತಿಯನ್ನು ಪುನಃ ಪ್ರಕಟಿಸಿ ಒಗ್ಗಟ್ಟಾಗಿ ಕಾರ್ಯ ಮಾಡುವುದು ಅತ್ಯಂತ ಆವಶ್ಯಕವಾಗಿದೆ.

೫. ಗುರು ಎಂದರೆ ಆದಿಶಕ್ತಿಯ ಸಗುಣ ಸ್ವರೂಪವಾಗಿದ್ದು ಅವರಲ್ಲಿ ಶ್ರೇಷ್ಠವಾದ ಸಾಮರ್ಥ್ಯವಿರುವುದರಿಂದ ಅವರು ಶಿಷ್ಯನಿಗೆ ಈಶ್ವರತ್ವವನ್ನು ಪ್ರದಾನಿಸಲು ಸಾಧ್ಯವಾಗುವುದು

ಗುರು ಎಂದರೆ ಆದಿಶಕ್ತಿಯ ಸಗುಣ ಸ್ವರೂಪವಾಗಿದ್ದು ಅವರಲ್ಲಿ ಶ್ರೇಷ್ಠವಾದ ಸಾಮರ್ಥ್ಯವಿರುವುದರಿಂದ ಅವರು ಶಿಷ್ಯನಿಗೆ ಈಶ್ವರತ್ವವನ್ನು ಪ್ರದಾನಿಸಲು ಸಾಧ್ಯವಿದೆ. ನಮ್ಮ ಅಂತಃಕರಣದಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸುವ ಶ್ರೇಷ್ಠವಾದ ಸಾಮರ್ಥ್ಯ ಕೇವಲ ಗುರುತತ್ತ್ವದಲ್ಲಿಯೆ ಇದೆ. ಆ ಶಕ್ತಿಯನ್ನು ಜಾಗೃತಗೊಳಿಸಲು ಗುರುಪೂರ್ಣಿಮೆಗೆ ಅದರ ಪೂಜೆ ಮಾಡಬೇಕು. ಅದಕ್ಕಾಗಿಯೇ ಎಲ್ಲೆಡೆ ಆದಿಶಕ್ತಿಯೇ ಕಾರ್ಯ ಮಾಡಲಿಕ್ಕಿದೆಯೆಂದು ತಿಳಿದು ನಾವು ಗುರುಪೂರ್ಣಿಮೆಯನ್ನು ಆಚರಿಸೋಣ ! – ಪ.ಪೂ. ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ್, ಪನವೇಲ್ (೨೭.೫.೨೦೧೭)