‘ಪರಾತ್ಪರ ಗುರು ಡಾ. ಆಠವಲೆಯವರಿಗೆ ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡೂ ರೀತಿಯ ಪ್ರಶ್ನೆಗಳು ನಿರ್ಮಾಣವಾಗುತ್ತವೆ. ಸ್ಥೂಲದಲ್ಲಿನ ಅತ್ಯಂತ ಚಿಕ್ಕ-ಪುಟ್ಟ ವಿಷಯಗಳ, ಉದಾಹರಣೆಗೆ ಧ್ವನಿಚಿತ್ರೀಕರಣದಲ್ಲಿನ ತಾಂತ್ರಿಕ ವಿಷಯಗಳು, ಯಜ್ಞ-ಯಾಗಾದಿ ಕೃತಿಗಳ ಹಿಂದಿನ ಶಾಸ್ತ್ರ ಇತ್ಯಾದಿಗಳನ್ನು ತಿಳಿದುಕೊಳ್ಳುವ ಬಗ್ಗೆ ಅವರಲ್ಲಿ ಜ್ಞಾಸೆಯಿರುತ್ತದೆ. ಅದೇ ರೀತಿ ಸುತ್ತಮುತ್ತಲು ಆಗುವ ಬದಲಾವಣೆಗಳು, ಅನಿಷ್ಟಶಕ್ತಿಗಳಿಂದಾಗಿ ವಾತಾವರಣದಲ್ಲಿ ಒತ್ತಡದ ಅರಿವಾಗುವುದು, ಸುತ್ತಮುತ್ತಲಿನ ಗಿಡಮರಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಬದಲಾವಣೆಗಳ ಬಗ್ಗೆ ಅವರಿಗೆ ಪ್ರಶ್ನೆಗಳು ಮೂಡುತ್ತದೆ.
ಇಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಜ್ಞಾನಪ್ರಾಪ್ತ ಮಾಡಿ ಕೊಳ್ಳುವ ಸಾಧಕ ಶ್ರೀ. ನಿಷಾದ ದೇಶಮುಖರಿಗೆ ಒಂದು ದಿನ ಕಳುಹಿಸಿದ ಕೆಲವು ಪ್ರಶ್ನೆಗಳನ್ನು ನೀಡಲಾಗಿದೆ. ಅವುಗಳ ಉತ್ತರಗಳನ್ನು ವಿಷಯಕ್ಕನುಸಾರ ಆಯಾ ಗ್ರಂಥಗಳಲ್ಲಿ ನೀಡಲಾಗಿದೆ. ಪರಾತ್ಪರ ಗುರುದೇವರು ಈ ರೀತಿಯ ವಿವಿಧ ಪ್ರಶ್ನೆಗಳನ್ನು ಜ್ಞಾನಪ್ರಾಪ್ತಕರ್ತ ಸಾಧಕರಲ್ಲಿ ಕೇಳಿ ಅವುಗಳ ಹಿಂದಿನ ಸೂಕ್ಷ್ಮದಲ್ಲಿನ ಅಧ್ಯಾತ್ಮಶಾಸ್ತ್ರೀಯ ಕಾರ್ಯಕಾರಣಭಾವವನ್ನು ತಿಳಿದುಕೊಳ್ಳುತ್ತಾರೆ. ಈ ಜ್ಞಾನವನ್ನು ಅವರು ತಮ್ಮಲ್ಲಿಯೇ ಇಟ್ಟುಕೊಳ್ಳುವುದಿಲ್ಲ, ಅವರು ಅದನ್ನು ಸನಾತನ ಪ್ರಭಾತ ನಿಯತಕಾಲಿಕೆಗಳು ಹಾಗೂ ಗ್ರಂಥಗಳಲ್ಲಿ ಪ್ರಕಾಶಿಸುತ್ತಾರೆ. ಸಮಾಜಕ್ಕೂ ಈ ಎಲ್ಲ ವಿಷಯಗಳು ತಿಳಿಯಬೇಕೆನ್ನುವುದು ಅವರ ಪ್ರಯತ್ನವಾಗಿರುತ್ತದೆ.
೧. ತೇಜ ಮತ್ತು ನಾದ ಒಟ್ಟಿಗಿದ್ದರೂ, ಅವುಗಳಿಂದಾಗಿ ನಿರ್ಗುಣ ತತ್ತ್ವದ ಪ್ರಭಾವವು ಹೇಗೆ ಕಡಿಮೆಯಾಗುತ್ತದೆ ?
೨. ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಇವುಗಳಲ್ಲಿ ಸಗುಣ-ನಿರ್ಗುಣ ಹೀಗೇನಾದರೂ ಇರುತ್ತದೆಯೆ ?
೩. ೧೧.೭.೨೦೧೭ ರಂದು ನನ್ನ ಕೋಣೆಯಲ್ಲಿ ಪ್ರವೇಶ ಮಾಡಿದ ನಂತರ ಕೋಣೆಯಲ್ಲಿ ತೀವ್ರ ಪ್ರಮಾಣದಲ್ಲಿ ಒತ್ತಡದ ಅರಿವಾಗುತಿತ್ತು. ಕೋಣೆಯ ಹೊಸ್ತಿಲಿನ ಹೊರಗೆ ಒತ್ತಡವಿರಲಿಲ್ಲ. ಕೋಣೆಯ ಬಾಗಿಲಿನಿಂದ ಕೋಣೆಯ ನಾಲ್ಕು ಮೂಲೆಗಳಿಗೆ ನಡೆದುಕೊಂಡು ಹೋಗಿ ನೋಡಿದಾಗ ಕಿವಿಯಲ್ಲಿ ಒತ್ತಡ ನಿರ್ಮಾಣವಾಗುವುದು, ತಲೆ ತಿರುಗಿ ಬೀಳುವ ಹಾಗಾಗುವುದು, ತೊಂದರೆದಾಯಕ ನಾದ ಕೇಳಿಸುವುದು, ಇಂತಹ ತೊಂದರೆಗಳಾದವು. ಕೋಣೆಯಲ್ಲಿ ಈ ರೀತಿಯ ತೊಂದರೆದಾಯಕ ಬದಲಾವಣೆಯಾಗಲು ಕಾರಣವೇನು ?
೪. ನನ್ನ ಕೋಣೆಯಲ್ಲಿ ಪ್ರವೇಶ ಮಾಡಿದ ನಂತರ ಕೋಣೆಯಲ್ಲಿ ತೀವ್ರ ಪ್ರಮಾಣದಲ್ಲಿ ಒತ್ತಡದ ಅರಿವಾಗುತ್ತಿದ್ದರೂ ಕೋಣೆಯಲ್ಲಿನ ದೇವರಕೋಣೆಯ ಎದುರಿಗೆ ಲೋಲಕ ಹಿಡಿದಾಗ ಅದು ಗಡಿಯಾರದ ಮುಳ್ಳುಗಳು ತಿರಗುವ ದಿಕ್ಕಿನಲ್ಲಿ ತಿರುಗಿ ದೇವರ ಕೋಣೆಯಲ್ಲಿ ಸಕಾರಾತ್ಮಕ ಇಂಧನ ಇರುವುದನ್ನು ತೋರಿಸಿತು. ಹೀಗಾಗಲು ಕಾರಣವೇನು ?
೫. ನನ್ನ ಕೋಣೆಯಲ್ಲಿ ಒತ್ತಡದ ಅರಿವಾಗುತ್ತಿರುವಾಗ ಕು. ಪ್ರಿಯಾಂಕಾ ಲೋಟಲೀಕರ್ ಇವರಿಗೆ ದೂರದಲ್ಲಿ ಬಿರುಗಾಳಿ ಬೀಸುವ ಹಾಗೆ ಸೂಕ್ಷ್ಮನಾದ ಕೇಳಿಸುತಿತ್ತು ಮತ್ತು ನನಗೆ ಶಹನಾಯಿಯ ಸೂಕ್ಷ್ಮನಾದ ಕೇಳಿಸಿತು. ಇಂತಹ ನಾದ ಕೇಳಿಸುವುದರ ಹಿಂದಿನ ಕಾರಣವೇನು ? ಈ ನಾದದ ವೈಶಿಷ್ಟ್ಯವೇನು ?
೬. ನಾನು ಹಚ್ಚಿರುವ ಊದುಬತ್ತಿಯನ್ನು ಕೋಣೆಯಲ್ಲಿ ಎಲ್ಲೆಡೆ ಒಮ್ಮೆ ತಿರುಗಿಸಿದಾಗ ಕೋಣೆಯಲ್ಲಿನ ಒತ್ತಡ ತಕ್ಷಣ ಕಡಿಮೆಯಾಯಿತು. ಹೀಗೇಕಾಯಿತು ?
೭. ನನ್ನ ಕೋಣೆಯಲ್ಲಿನ ಬೇಸಿನ್‌ನ ತೂತಿನ ಮೇಲೆ ಅಂಗೈ ಹಿಡಿದಾಗ ಅದರಿಂದ ತೊಂದರೆದಾಯಕ ಸ್ಪಂದನಗಳು ಹೊರಗೆ ಬರುತ್ತಿರುವುದು ಆರಿವಾಯಿತು; ಆದರೆ ಎರಡೂ (ಪಾಶ್ಚಾತ್ಯ ಮತ್ತು ಭಾರತೀಯ) ಶೌಚಾಲಯದಲ್ಲಿನ ತೂತುಗಳಿಂದ ತೊಂದರೆದಾಯಕ ಸ್ಪಂದನಗಳು ಹೊರಗೆ ಬರುವುದು ಅರಿವಾಗಲಿಲ್ಲ. ಅದರ ಕಾರಣವೇನು ? – ಶ್ರೀ. ನಿಷಾದ ದೇಶಮುಖ