‘ಸೂಕ್ಷ್ಮದಲ್ಲಿ ಏನಾಗುತ್ತದೆ ? ಹಾಗೂ ಅದರ ಹಿಂದಿನ ಶಾಸ್ತ್ರವೇನು ? ಇವುಗಳ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಜಿಜ್ಞಾಸೆಯನ್ನು ದೇವರು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಸಾಧಕರ ಮಾಧ್ಯಮದಿಂದ ಪೂರ್ಣ ಮಾಡುವುದು !

ಪರಾತ್ಪರ ಗುರು ಡಾ. ಆಠವಲೆ

‘ನನಗೆ ಹಾಗೂ ಸಾಧಕರಿಗೆ ಬರುವ ಅನುಭೂತಿಗಳ ಶಾಸ್ತ್ರವನ್ನು ಅರಿತುಕೊಳ್ಳುವ ಜಿಜ್ಞಾಸೆ ಇತ್ತು; ಏಕೆಂದರೆ ಲಭ್ಯವಿರುವ ಬುದ್ಧಿಜನ್ಯ ಜ್ಞಾನದಿಂದ ಅವುಗಳ ಶಾಸ್ತ್ರವು ತಿಳಿಯುತ್ತಿರಲಿಲ್ಲ. ಆಗ ‘ದೇವರು ಪ್ರತಿಯೊಂದು ಇಚ್ಛೆಯನ್ನು ಹೇಗೆ ಪೂರ್ಣ ಮಾಡುತ್ತಾನೆ ?, ಎಂದು ನನಗೆ ಅನುಭೂತಿ ಬಂದಿತು.

೧. ‘ಸೂಕ್ಷದಲ್ಲಿ ಏನಾಗುತ್ತದೆ ?, ಎಂಬ ಬಗ್ಗೆ ಜ್ಞಾನವು ಸಿಗುವುದು

ಫೆಬ್ರುವರಿ ೨೦೦೨ ರಿಂದ ಒಳ್ಳೆಯ ಹಾಗೂ ಕೆಟ್ಟ ಅನುಭೂತಿಗಳು ಬರುತ್ತಿರುವಾಗ ‘ಸೂಕ್ಷ್ಮದಲ್ಲಿ ಏನಾಗುತ್ತದೆ ?, ಎಂಬ ಜ್ಞಾನವು ಕು. ಕವಿತಾ ರಾಠಿವಡೆಕರ, ಕು. ಸುಷ್ಮಾ ಪೆಡಣೆಕರ, ಕು. ಕಲ್ಯಾಣಿ ಗಾಂಗಣ, ಕು. (ಈಗಿನ ಸದ್ಗುರು) ಅನುರಾಧಾ ವಾಡೆಕರ ಹಾಗೂ ವರ್ಷ ೨೦೦೬ನೇ ಇಸವಿಯಿಂದ ಕು. ರಂಜನಾ ಗಾವಸ (ಈಗಿನ ಸೌ. ರಂಜನಾ ಗಡೆಕರ) ಮುಂತಾದವರಿಗೆ ಸಿಗುತ್ತಿತ್ತು ಹಾಗೂ ಅವರು ನನಗೆ ಹೇಳುತ್ತಿದ್ದರು.

೨. ‘ಸೂಕ್ಷ್ಮದಲ್ಲಿ ಏನಾಗುತ್ತದೆ ?, ಎಂಬುದರ ಶಾಸ್ತ್ರವು ತಿಳಿಯುವುದು

‘ಸೂಕ್ಷ್ಮದಲ್ಲಿ ಏನಾಗುತ್ತದೆ ?, ಎಂಬ ಬಗ್ಗೆ ಜ್ಞಾನವು ದೊರಕಿದರೂ ಅದರ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳುವ ಇಚ್ಛೆ ನನಗಿತ್ತು. ದೇವರು ೨೦೦೩ ನೇ ಇಸವಿಯಿಂದ ಸೂಕ್ಷ್ಮ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಸೌ. (ಈಗಿನ ಸದ್ಗುರು ಅಂಜಲಿ ಗಾಡಗೀಳ ಹಾಗೂ ಶ್ರೀ. ರಾಮ ಹೊನಪ, ೨೦೦೪ ನೇ ಇಸವಿಯಲ್ಲಿ ಕು. ಮಧುರಾ ಭೋಸಲೆ ಹಾಗೂ ೨೦೦೫ ನೇ ಇಸವಿಯಿಂದ ಶ್ರೀ. ನಿಷಾದ ದೇಶಮುಖ ಇವರ ಮಾಧ್ಯಮದಿಂದ ಜ್ಞಾನವನ್ನು ನೀಡಲು ಆರಂಭಿಸಿದರು. ನನ್ನ ಬರವಣಿಗೆಯಲ್ಲಿ ಸೂಕ್ಷ್ಮದಲ್ಲಿನ ಜ್ಞಾನವು ಬಹುತೇಕ ಬಾರಿ ಇರುತ್ತದೆ. ಅದೆಲ್ಲವೂ ಮೇಲಿನ ಸಾಧಕರು ಹಾಗೂ ಸಂತರಿಂದಾಗಿ ದೊರಕಿದೆ. ಈ ಜ್ಞಾನದ ಬಗ್ಗೆ ನಾನು ದೇವರು ಹಾಗೂ ಮೇಲಿನ ಸಾಧಕರು ಹಾಗೂ ಸಂತರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

೩. ಆಕೃತಿಯ ಮೂಲಕ ಶಾಸ್ತ್ರವನ್ನು ತಿಳಿಯುವುದು

ಯಾವುದಾದರೊಂದು ವಿಷಯ ವಿಶೇಷವಾಗಿ ಅಧ್ಯಾತ್ಮದಲ್ಲಿನ ವಿಷಯವನ್ನು ಅರಿತು ಕೊಳ್ಳುವಾಗ ಶಬ್ದಗಳಷ್ಟೇ ಆಕೃತಿಗಳಿಗೂ ಮಹತ್ವವಿರುತ್ತದೆ; ಏಕೆಂದರೆ ಪೂರ್ಣ ವಿಷಯ ಶಬ್ದಗಳಲ್ಲಿ ಮಂಡಿಸುವುದು ಕೆಲವೊಮ್ಮೆ ಅಸಾಧ್ಯವಿರುತ್ತದೆ. ಆಕೃತಿಯಿಂದಾಗಿ ವಿಷಯವನ್ನು ತಿಳಿಯಲು ಸಹಾಯವಾಗುತ್ತದೆ. ಎಸ್.ಎಸ್.ಆರ್.ಎಫ್.ನ ಸೌ. ಯೋಯಾ ವಾಲೆಯವರು ಸೂಕ್ಷ್ಮದಲ್ಲಿನ ಚಿತ್ರಗಳನ್ನು ಬಿಡಿಸುತ್ತಿರುವುದರಿಂದ ಅವರಿಂದಾಗಿ ಅನೇಕ ಕ್ಲಿಷ್ಟ ವಿಷಯಗಳು ಈಗ ನನಗೆ ತಿಳಿಯುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ

ಸರ್ಪಸುತ್ತು ಆದ ನಂತರ ಒಣಗಿದ ಗುಳ್ಳೆಗಳ ಮೇಲಿನ ಚರ್ಮದ ಸಿಪ್ಪೆಗಳನ್ನು ಒಟ್ಟುಗೂಡಿಸಿ ಜಿಜ್ಞಾಸುವೃತ್ತಿಯಿಂದ ಚರ್ಮದ ಮಾದರಿಯನ್ನೂ ಸಂಶೋಧನೆಗಾಗಿ ನೀಡುವ ಪರಾತ್ಪರ ಗುರು ಡಾಕ್ಟರ್ !

ಕು. ಪ್ರಿಯಾಂಕಾ ಲೋಟಲೀಕರ

‘ಕೆಲವು ದಿನಗಳ ಹಿಂದೆ ಪರಾತ್ಪರ ಗುರು ಡಾಕ್ಟರರ ಬಲಗೈ ಭುಜಕ್ಕೆ ‘ಸರ್ಪಸುತ್ತು ಆಗಿತ್ತು. ಆದುದರಿಂದ ಅಲ್ಲಿ ಚರ್ಮದ ಮೇಲೆ ಗುಳ್ಳೆಗಳಾಗಿ ದ್ದವು. ಔಷಧಿಯನ್ನು ಹಚ್ಚಿದ್ದರಿಂದ ಕೆಲವು ದಿನಗಳಲ್ಲಿ ಗುಳ್ಳೆಗಳು ಒಣಗಿದವು ಹಾಗೂ ಅಲ್ಲಿನ ಚರ್ಮದ ಸಿಪ್ಪೆಗಳು ಕೀಳ ತೊಡಗಿದವು. ಒಂದು ದಿನ ಪರಾತ್ಪರ ಗುರು ಡಾಕ್ಟರರು ಆ ಸಿಪ್ಪೆಗಳನ್ನು ತೆಗೆದರು. ಅವರು ಇವೆಲ್ಲ ಸಿಪ್ಪೆಗಳನ್ನು ಒಂದು ಚಿಕ್ಕ ಡಬ್ಬಿಯಲ್ಲಿ ಒಟ್ಟು ಮಾಡಿದರು ಹಾಗೂ ಆ ಡಬ್ಬಿಯನ್ನು ನನಗೆ ಕಳುಹಿಸಿ, ‘ಇಲ್ಲಿಯವರೆಗೆ ನನ್ನ ಕೂದಲು ಹಾಗೂ ಉಗುರು ಇವುಗಳ ಮಾದರಿಯು ನಿಮ್ಮ ಕಡೆಗಿತ್ತು; ಆದರೆ ಚರ್ಮದ ಮಾದರಿ ಇರಲಿಲ್ಲ. ಆದುದರಿಂದ ಇದನ್ನು ತೆಗೆದುಕೊಳ್ಳಿ. ನಾವು ಈ ಚರ್ಮದ ಸಂಶೋಧನೆಯನ್ನು ಮಾಡೋಣ, ಎಂದು ಸಂದೇಶ ನೀಡಿದರು. ದಧಿಚಿ ಋಷಿಗಳು ತಮ್ಮ ಮೂಳೆಯನ್ನು ಧರ್ಮಕಾರ್ಯಕ್ಕಾಗಿ ನೀಡಿದ್ದರು, ಅದರಂತೆಯೇ ಪರಾತ್ಪರ ಗುರು ಡಾಕ್ಟರರು ಸಮಷ್ಟಿಗಾಗಿ ತಮ್ಮ ಚರ್ಮವನ್ನು ಲಭ್ಯಮಾಡಿ ಕೊಟ್ಟರು, ಈ ವಿಚಾರದಿಂದ ನನ್ನ ಭಾವಜಾಗೃತವಾಯಿತು. – ಕು. ಪ್ರಿಯಾಂಕಾ ಲೋಟಲೀಕರ, ಸಂಶೋಧನಾ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. (೨೮.೪.೨೦೧೪)

ಜ್ಞಾನ ಪಡೆಯಲು ಮತ್ತು ಸಮಷ್ಟಿಗೆ ಅದರ ಲಾಭ ಪಡೆದುಕೊಳ್ಳಲು ಪರಾಕೋಟಿಯ ತಳಮಳ

‘ಜೂನ್ ೨೦೧೬ ರಲ್ಲಿ ಪ.ಪೂ. ಆಬಾ ಮತ್ತು ಪೂ. (ಸೌ.) ಮಂಗಲಾಅಜ್ಜಿಯವರು ಸುಮಾರು ಒಂದು ವಾರ ಆಶ್ರಮದಲ್ಲಿದ್ದರು. ಪ.ಪೂ. ಡಾಕ್ಟರರು ಪ.ಪೂ. ಆಬಾ ಇವರಿಗೆ, ‘ತಮಗೆ ಸಮಯವಿದ್ದಾಗ ಹೇಳಿರಿ. ನಾನು ಬರುವೆನು, ಎಂದು ಹೇಳಿದರು. ಇದರಿಂದ ಅವರ ಜ್ಞಾನವನ್ನು ಪಡೆದುಕೊಳ್ಳಲುವ ಮತ್ತು ಸಮಷ್ಟಿಗಾಗಿ ಅದರ ಲಾಭವನ್ನು ಪಡೆದುಕೊಳ್ಳುವ ಪರಾಕೋಟಿಯ ತಳಮಳವು ಕಾಣಿಸುತ್ತದೆ; ಏಕೆಂದರೆ ಪ್ರಾಣಶಕ್ತಿಯು ಕಡಿಮೆ ಇರುವುದರಿಂದ ಪ.ಪೂ. ಡಾಕ್ಟರರಿಗೆ ನಿಂತುಕೊಳ್ಳಲು, ನಡೆಯಲು ತುಂಬಾ ಕಠಿಣವಾಗುತ್ತದೆ ಮತ್ತು ಪ.ಪೂ. ಆಬಾ ಇವರು ಎರಡನೆ ಮಹಡಿಯ ಮೇಲೆ ಇರುತ್ತಿದ್ದರು. – ಶ್ರೀ. ಪರಶುರಾಮ ಯ. ಗೊರಲ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೭.೨೦೧೬)