(ಪರಾತ್ಪರ ಗುರು) ಡಾ. ಆಠವಲೆ : ಈ ಮೊದಲು ನನಗೆ ಜ್ಞಾನವನ್ನು ಅರಿತುಕೊಳ್ಳುವ ಜಿಜ್ಞಾಸೆಯು ಇರುತ್ತಿತ್ತು; ಆದುದರಿಂದ ನಾನು ಪ್ರಶ್ನೆಗಳನ್ನು ಕೇಳುತ್ತಿದ್ದೆನು. ‘ಈಗ ‘ಅಧ್ಯಯನಕಾರರಿಗೆ ಜ್ಞಾನದ ಉಪಯೋಗವಾಗಬೇಕೆಂದು ಪ್ರಶ್ನೆಗಳನ್ನು ಕೇಳುತ್ತೇನೆ, ಎಂದು ನನಗೆ ಅನಿಸುತ್ತದೆ. ‘ಹುಟ್ಟು ಗುಣವು ಸುಟ್ಟರೂ ಹೋಗುವುದಿಲ್ಲ, ಈ ರೀತಿ ಇದು ಅಲ್ಲವಲ್ಲ ?
ಆಧ್ಯಾತ್ಮಿಕ ವಿಶ್ಲೇಷಣೆ
೧ ಅ. ತನಗಾಗಿ ಜ್ಞಾನವನ್ನು ಪಡೆಯುವುದು : ‘ಮನುಷ್ಯನಿಗೆ ತನ್ನ ಸುತ್ತಲಿನ ಜಗತ್ತು, ಅದರಲ್ಲಿ ಘಟಿಸುವ ಪ್ರಸಂಗಗಳು, ವಿವಿಧ ವಿಷಯಗಳ ಕುರಿತು ಅರಿತುಕೊಳ್ಳುವ ಇಚ್ಛೆ ಇರುತ್ತದೆ. ಈ ಜ್ಞಾನ ವಾದ ತಕ್ಷಣ ಅವನಿಗೆ ಸುಖವಾದರೂ ಸಿಗುತ್ತದೆ ಅಥವಾ ಹೊಸದನ್ನು ಅರಿತುಕೊಳ್ಳುವ ಇಚ್ಛೆಯು ಪೂರ್ತಿಯಾಗುತ್ತದೆ. ಮನುಷ್ಯನ ಜಿಜ್ಞಾಸೆಯು ಅವನ ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಪೂರ್ಣವಾಗುತ್ತಿರುತ್ತದೆ.
೧ ಆ. ಜಿಜ್ಞಾಸುವೃತ್ತಿಯ ಮಹತ್ವ ! : ಇದಕ್ಕೂ ಮೊದಲು ಮನುಷ್ಯನ ಅನೇಕ ಜನ್ಮಗಳಾಗಿವೆ. ಪ್ರತಿ ಯೊಂದು ಜನ್ಮದಲ್ಲಿ ಸಾಧನೆಯ ಅಭಾವದಿಂದಾಗಿ ಅವನ ಸುತ್ತಲೂ ಮಾಯೆಯ ಆವರಣವು ನಿರ್ಮಾಣವಾಗಿರುತ್ತದೆ. ಈ ಆವರಣದಡಿಯಲ್ಲಿ ಮನುಷ್ಯನ ಅನೇಕ ಜನ್ಮಗಳ ಪ್ರವಾಸವು ನಡೆದಿರುತ್ತದೆ. ಮನುಷ್ಯನಲ್ಲಿ ಜಿಜ್ಞಾಸೆ ಇದ್ದರೆ ಅವನು ಅಕ್ಕಪಕ್ಕದ ಜಗತ್ತನ್ನು ಅರಿತುಕೊಳ್ಳುವ, ತಿಳಿದುಕೊಳ್ಳುವ ಮತ್ತು ಅದರಲ್ಲಿನ ಸತ್ಯವನ್ನು ಹುಡುಕುವ ಪ್ರಯತ್ನ ಮಾಡುತ್ತಿರುತ್ತಾನೆ. ಜೀವವು ಮಾಯೆಯಲ್ಲಿನದನ್ನು ಅರಿತುಕೊಂಡರೂ, ಅದರ ಜಿಜ್ಞಾಸೆಯು ಮುಗಿದಿರುವುದಿಲ್ಲ. ಈ ಜಿಜ್ಞಾಸೆಯು ಅದನ್ನು ಯಾವುದಾದರೂ ನಿಮಿತ್ತದಿಂದ ಅಧ್ಯಾತ್ಮದ ಕಡೆಗೆ ಕರೆದುತರುತ್ತದೆ. ನಂತರ ಅದರ ಅಧ್ಯಾತ್ಮದಲ್ಲಿನ ಜಿಜ್ಞಾಸೆಯು ಪ್ರಾರಂಭವಾಗುತ್ತದೆ. ಆಗ ಅದಕ್ಕೆ, ಅಧ್ಯಾತ್ಮದಲ್ಲಿನ ಈ ಜಗತ್ತು ಮುಗಿಯುವುದಿಲ್ಲ, ಎಂದು ಗಮನಕ್ಕೆ ಬರುತ್ತದೆ. ಇಂತಹ ಸಮಯದಲ್ಲಿ ಅದಕ್ಕೆ ಭಗವಂತನ ಬಳಿಗೆ ಹೋಗುವ ಇಚ್ಛೆಯು ನಿರ್ಮಾಣವಾಗುತ್ತದೆ. ನಂತರ ಈ ಸಾತ್ತ್ವಿಕ ಜಿಜ್ಞಾಸೆಯು ಅದನ್ನು ಭಗವಂತನವರೆಗೆ ತಲುಪಿಸುತ್ತದೆ.
೧ ಇ. ಪರಾತ್ಪರ ಗುರು ಡಾ. ಆಠವಲೆಯವರ ವ್ಯಷ್ಟಿ ಜಿಜ್ಞಾಸೆ ಮತ್ತು ಸಮಷ್ಟಿ ಜಿಜ್ಞಾಸೆ ! : ಹಿಂದೆ ಪರಾತ್ಪರ ಗುರು ಡಾಕ್ಟರರಿಗೆ ಜ್ಞಾನವನ್ನು ಅರಿತುಕೊಳ್ಳುವ ಜಿಜ್ಞಾಸೆ ಇರುತ್ತಿತ್ತು. ಪ್ರಾರಂಭದಲ್ಲಿ ಅದರ ಉಪಯೋಗವು ಅವರಿಗೆ ಕೇವಲ ಒಂದು ಮಾಹಿತಿಯೆಂದಾಯಿತು. ಸಾಧನೆಗೆ ಬಂದ ನಂತರ ಅವರ ಜಿಜ್ಞಾಸೆಯು ಅವರನ್ನು ಭಗವಂತನವರೆಗೆ ಕರೆದೊಯ್ಯಿತು. ಪರಾತ್ಪರ ಗುರು ಡಾಕ್ಟರರ ವ್ಯಷ್ಟಿ ಸಾಧನೆಯು ಪೂರ್ಣವಾದುದರಿಂದ ಅವರಿಗೆ ಸ್ವತಃಕ್ಕೆ ಜ್ಞಾನವನ್ನು ದೊರಕಿಸಿಕೊಳ್ಳುವ ಕುರಿತು ಇಚ್ಛೆಯು ಉಳಿಯಲಿಲ್ಲ. ಈಗ ಉಳಿದಿರುವ ಜಿಜ್ಞಾಸೆಯೆಂದರೆ, ಅದು ‘ಸಮಷ್ಟಿ, ಅಂದರೆ ಸಮಾಜದಲ್ಲಿನ ಜಿಜ್ಞಾಸು ಮತ್ತು ಸಾಧಕ ಇವರ ಆಧ್ಯಾತ್ಮಿಕ ಪ್ರಗತಿಯಾಗಬೇಕು ಮತ್ತು ಅವರಿಗೆ ಸಾಧನೆಯ ಮಾರ್ಗವು ಸಿಗಬೇಕು, ಎಂಬುದಕ್ಕಾಗಿ ಇದೆ.
ಪರಾತ್ಪರ ಗುರು ಡಾಕ್ಟರರಲ್ಲಿನ ಜಿಜ್ಞಾಸೆಯು ಈಶ್ವರೀ ಪ್ರೇರಣೆಯಿಂದ ಕಾರ್ಯ ಮಾಡುತ್ತದೆ. ಈ ಪ್ರೇರಣೆಯಿಂದ ಈಗಿನ ಪೀಳಿಗೆಯದ್ದು ಮಾತ್ರವಲ್ಲ, ಮುಂದಿನ ಅನೇಕ ಪೀಳಿಗೆಗಳ ಕಲ್ಯಾಣವಾಗಲಿದೆ. ಸನಾತನ ಸಂಸ್ಥೆಯ ಗ್ರಂಥರೂಪದಲ್ಲಿನ ಜ್ಞಾನವು ಸಮಾಜವನ್ನು ಈಶ್ವರನವರೆಗೆ ಶೀಘ್ರದಲ್ಲಿ ಹೋಗುವ ಮಾರ್ಗವನ್ನು ತೋರಿಸಲಿದೆ.
೧ ಇ ೧. ಜಿಜ್ಞಾಸುವೃತ್ತಿಯಿಂದ ಈಶ್ವರನವರೆಗೆ ಹೇಗೆ ತಲುಪಬಹುದು ? : ಅಧ್ಯಾತ್ಮದಲ್ಲಿನ ಜಿಜ್ಞಾಸೆಯಿಂದ, ಎಂದರೆ ಶೋಧಿಸುವ ವೃತ್ತಿಯಿಂದ ಜಿಜ್ಞಾಸುವಿಗೆ ಸಾಧನೆಯ ಕುರಿತು ವಿವಿಧ ಅಂಗಗಳ ಜ್ಞಾನವು ಆಗುತ್ತಾ ಹೋಗುತ್ತದೆ. ಆದುದರಿಂದ ಸಾಧನೆಯ ಮಹತ್ವವ ಜಿಜ್ಞಾಸುವಿನ ಮನಸ್ಸಿನ ಮೇಲೆ ಮೂಡುತ್ತದೆ. ಇದರಿಂದಾಗಿ ಅಜ್ಞಾನದ, ಎಂದರೆ ಮಾಯೆಯ ಒಂದೊಂದು ಪರದೆಯು ದೂರವಾಗುತ್ತದೆ ಮತ್ತು ಕೊನೆಗೆ ಸಾಧಕನಿಗೆ ಸತ್ಯದವರೆಗೆ, ಎಂದರೆ ಪರದೆಯ ಹಿಂದೆ ಇರುವ ಭಗವಂತನವರೆಗೆ ತಲುಪಲು ಸಾಧ್ಯವಾಗುತ್ತದೆ.
ಪರಾತ್ಪರ ಗುರು ಡಾಕ್ಟರರು ಈ ಭಗವಂತನವರೆಗೆ ತಲುಪಿರುವರು, ಎಂದರೆ ಅವರಿಗೆ ಅವನ ಪ್ರಾಪ್ತಿಯಾಗಿದೆ. ಅವರು ಸಮಷ್ಟಿಗಾಗಿ ಇರುವ ಜಿಜ್ಞಾಸೆ ಮತ್ತು ಅದರಿಂದ ಲಭಿಸುವ ಜ್ಞಾನ ಇವುಗಳ ಮೂಲಕ ಇತರ ಜೀವಗಳಲ್ಲಿನ ಮಾಯೆಯ ಪರದೆಯನ್ನು ದೂರ ಮಾಡುತ್ತಿರುವರು. ಇದರಿಂದಾಗಿ ಇಂತಹ ಜೀವಗಳಿಗೂ ಭಗವಂತನವರೆಗೆ ತಲುಪಲು ಸಾಧ್ಯವಾಗುವುದು.
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತ ವಾಗಿರುವ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧೧.೨೦೧೭)