‘ಆಯುರ್ವೇದ ಜಾಗೃತಿ ಬದನೆಕಾಯಿ

ವೈದ್ಯ ವಿಲಾಸ ಶಿಂದೆ

ಬದನೆ ತುಂಬಾ ಪೌಷ್ಟಿಕವಾಗಿರುತ್ತವೆ. ಪೇಟೆಯಲ್ಲಿ ಸಿಗುವ ದೊಡ್ಡ ಬದನೆಕಾಯಿ ಮತ್ತು ಹಳ್ಳಿಗಳಲ್ಲಿನ ಬದನೆಕಾಯಿಗಳ ಔಷಧದ ಗುಣಧರ್ಮಗಳು ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ ಬದನೆಕಾಯಿಗಳನ್ನು ತಿನ್ನಬೇಕಾಗಿದ್ದರೆ, ದೊಡ್ಡ ಬದನೆ, ಕೋಳಿಮೊಟ್ಟೆಯ ಆಕಾರದಲ್ಲಿರುವ ಬಿಳಿ ಬದನೆ, ಮುಳ್ಳುಗಳಿರುವ ಬದನೆಕಾಯಿ ಅಥವಾ ಹಳ್ಳಿಯ ಬದನೆಕಾಯಿಗಳನ್ನು ತಿನ್ನಬೇಕು. ಮನೆಯ ತಾರಸಿಯ (ಟೆರೇಸ್‌ನ) ಲ್ಲಿಯೂ ಕುಂಡಗಳಲ್ಲಿ ಬದನೆಕಾಯಿ ಗಿಡಗಳನ್ನು ಬೆಳೆಸಬಹುದು.

೧. ಬದನೆಕಾಯಿಗಳ ಆಯ್ಕೆ

‘ಬದನೆಕಾಯಿ ತುಂಬಾ ಹಸಿ ಅಥವಾ ಹಣ್ಣಾಗಿರಬಾರದು, ಆದರೆ ಅದು ಪಕ್ವವಾಗಿರಬೇಕು.

೨. ಬದನೆಯಿಂದ ತಯಾರಿಸುವ ಕೆಲವು ಪದಾರ್ಥಗಳು

೨ ಅ. ಬದನೆಕಾಯಿಗಳ ಪಲ್ಯ : ತಾಜಾ ಬದನೆಕಾಯಿಗಳನ್ನು ಉಗಿಯ ಮೇಲೆ ಬೇಯಿಸಿ ಅವುಗಳಿಗೆ ರುಚಿಗೆ ಬೇಕಾಗುವಷ್ಟು ಸೈಂಧವಲವಣ ಮತ್ತು ಹಸಿಶುಂಠಿಯನ್ನು ಹಾಕಿದರೆ ರುಚಿಕರ ಪಲ್ಯ ತಯಾರಾಗುತ್ತದೆ. ಇದಕ್ಕೆ ಖಾರವನ್ನು ಹಾಕಬಾರದು. ಕೆಲವರು ಬದನೆಯ ಬೀಜಗಳನ್ನು ತೆಗೆದು ಪಲ್ಯ ಮಾಡುತ್ತಾರೆ.

೨ ಆ. ಬದನೆಯ ಭರಿತ : ಬದನೆಕಾಯಿಗಳನ್ನು ನೀರಿನಿಂದ ಸ್ವಚ್ಛ ತೊಳೆದು ಅವುಗಳನ್ನು ಗ್ಯಾಸ್‌ದ ಮೇಲೆ ಅಥವಾ ಒಲೆಯಲ್ಲಿ ಹಾಕಿ ಸುಡಬೇಕು. ಅವುಗಳ ಮೇಲಿನ ಸುಟ್ಟಿರುವ ಸಿಪ್ಪೆಯನ್ನು ತೆಗೆಯಬೇಕು. ಬೇಯಿಸಿದ ಈ ಬದನೆಗಳ ಮೇಲೆ ಮೆಣಸಿನ ಪುಡಿ, ಇಂಗು ಮತ್ತು ಸೈಂಧವಲವಣ ಹಾಕಿ ಕಲ್ಲಿನಲ್ಲಿ ಚೆನ್ನಾಗಿ ಅರೆಯಬೇಕು. ಅದನ್ನು ಜೋಳದ ರೊಟ್ಟಿಯೊಂದಿಗೆ ತಿನ್ನಬೇಕು. ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ಸರಿಯಾಗಿ ಹಸಿವೆಯಾಗುತ್ತದೆ. ಇದರಲ್ಲಿ ಎಣ್ಣೆಯನ್ನು ಹಾಕಬಾರದು. ಎಣ್ಣೆಯನ್ನು ಹಾಕಿದರೆ ಅದು ಜಡವಾಗಿ ಜೀರ್ಣವಾಗಲು ಕಷ್ಟವಾಗುತ್ತದೆ. ದೊಡ್ಡ ಬದನೆಕಾಯಿಗಳ ಭರಿತ ಉತ್ತಮವಾಗುತ್ತದೆ. ವಿಶೇಷವಾಗಿ ಬದನೆಕಾಯಿಗಳನ್ನು ಒಲೆಯಲ್ಲಿ ಸುಟ್ಟು ತಯಾರಿಸಿದ ಭರಿತವು ತುಂಬಾ ರುಚಿಕರವಾಗಿರುತ್ತದೆ.

೩. ಬದನೆಕಾಯಿಗಳ ಗುಣಧರ್ಮ

೩ ಅ. ಚಿಕ್ಕ ಆಕಾರದ ಬದನೆಕಾಯಿಗಳು ಪಿತ್ತ ಮತ್ತು ಕಫನಾಶಕವಾಗಿವೆ.

೩ ಆ. ದೊಡ್ಡ ಆಕಾರದ ಬದನೆಕಾಯಿಗಳು ಜೀರ್ಣವಾಗಲು ಸುಲಭ, ಆದರೆ ಅವು ಸ್ವಲ್ಪ ಪಿತ್ತಕರವಾಗಿರುತ್ತವೆ.

೪. ಬದನೆಕಾಯಿಗಳ ಔಷಧಿ ಉಪಯೋಗ

೪ ಅ. ಜ್ವರ ಮತ್ತು ಕೆಮ್ಮು : ಜ್ವರದಲ್ಲಿ ಬದನೆಯ ಪಲ್ಯಯನ್ನು ಸ್ವಲ್ಪ ಸ್ವಲ್ಪ ತಿನ್ನಲು (ನೆಕ್ಕಲು) ಕೊಡಬೇಕು. ಬದನೆಕಾಯಿ ಪಲ್ಯಯಿಂದ ಬಾಯಿಗೆ ರುಚಿ ಬರುತ್ತದೆ. ಶರೀರದಲ್ಲಿ ಹೆಚ್ಚಿರುವ ಆರ್ದ್ರತೆ (ಕ್ಲೇದ) ಮತ್ತು ಕಫ ಈ ಪಲ್ಯಯಿಂದ ಕಡಿಮೆಯಾಗುತ್ತದೆ. ಅಕ್ಕಿಯನ್ನು ಹುರಿದು ಮಾಡಿದ ಮೃದುವಾದ ಅನ್ನ ಮತ್ತು ಬದನೆಕಾಯಿ ಪಲ್ಯವು ಜ್ವರ ಮತ್ತು ಕಫದಲ್ಲಿ ಲಾಭದಾಯಕವಾಗಿದೆ.

೪ ಆ. ಹೊಟ್ಟೆ ಉಬ್ಬುವುದು : ಹೊಟ್ಟೆ ಉಬ್ಬಿದಾಗ ಕೆಲವೊಮ್ಮೆ ಹೃದಯದ ಮೇಲೆ ಒತ್ತಡ ಬರುತ್ತದೆ. ಇದರಿಂದ ಅಸ್ವಸ್ತತೆ ಹೆಚ್ಚಾಗುತ್ತದೆ, ಹಾಗೆಯೇ ಸತತವಾಗಿ ಹೊಟ್ಟೆ ನೋಯಿಸುತ್ತದೆ. ಆಗ ಬದನೆಯ ಭರಿತವನ್ನು ಸೇವಿಸಿದರೆ ಲಾಭವಾಗುತ್ತದೆ. ಇದಕ್ಕೆ ದೊಡ್ಡ ಬದನೆಕಾಯಿಗಳನ್ನು ಉಪಯೋಗಿಸಬೇಕು. ದೊಡ್ಡ ಬದನೆಕಾಯಿಗೆ ಸಂಸ್ಕೃತದಲ್ಲಿ ‘ಬೃಹತೀ ಎಂದು ಹೇಳುತ್ತಾರೆ.

೪ ಇ. ಮೂಲವ್ಯಾಧಿ : ಮೂಲವ್ಯಾಧಿಯಲ್ಲಿ ಬಿಳಿ ಬದನೆಕಾಯಿ ಪಲ್ಯಯನ್ನು ತಿನ್ನಬೇಕು. ಬದನೆಕಾಯಿಯನ್ನು ಬೆಂಕಿಯ ಮೇಲೆ ಸುಟ್ಟು ಬಟ್ಟೆಯಲ್ಲಿ ಕಟ್ಟಿ ಅದರಿಂದ ಗುದದ್ವಾರದ ಮೇಲೆ ಶಾಖ ಕೊಡಬೇಕು. ಇದರಿಂದ ಲಾಭವಾಗುತ್ತದೆ, ಆದರೆ ಇದನ್ನು ಜಾಗರೂಕತೆಯಿಂದ ಮಾಡಬೇಕು.

೪ ಈ. ಅಂಡಕೋಷಗಳಿಗೆ ಬಾವು ಬರುವುದು : ಬದನೆಕಾಯಿ ಗಿಡಗಳ ಬೇರುಗಳನ್ನು ಅರೆದು ಅದನ್ನು ಅಂಡಕೋಷಗಳ ಮೇಲೆ ಹಚ್ಚಿದರೆ, ಕೆಲವೇ ದಿನಗಳಲ್ಲಿ  ಪರಿಣಾಮವಾಗುತ್ತದೆ.

೪ ಉ. ನಿದ್ರೆ ಬರದಿರುವುದು

೧. ೨ ಚಮಚ ಬದನೆಕಾಯಿ ಗಿಡದ ಎಲೆಗಳ ರಸವನ್ನು ಕಲ್ಲುಸಕ್ಕರೆಯ ಜೊತೆಗೆ ಸೇವಿಸಿದರೆ ಉತ್ತಮ ನಿದ್ರೆ ಬರುತ್ತದೆ. ರಾತ್ರಿ ಬದನೆಯ ಭರಿತವನ್ನು ತಿನ್ನಬೇಕು.

೪ ಊ. ಕುರ  : ಬದನೆಯನ್ನು ಸುಟ್ಟು ಕುರದ ಮೇಲೆ ಕಟ್ಟಬೇಕು.

೪ ಎ. ನಿತ್ರಾಣ (ಅಶಕ್ತತೆ) : ಬದನೆಯು ಸ್ವಾಧಿಷ್ಟ, ಪೌಷ್ಟಿಕ ಹಾಗೂ ಶುಕ್ರಧಾತೂ (ವೀರ್ಯ)ವನ್ನು ಹೆಚ್ಚಿಸುವುದಾಗಿದೆ. ಯಾರ ಶರೀರದಲ್ಲಿ ಮೇಧ (ಕೊಬ್ಬು) ಹೆಚ್ಚಾಗಿ ಶರೀರ ದಪ್ಪವಾಗುತ್ತದೆಯೋ; ಆದರೆ ಅದರ ತುಲನೆಯಲ್ಲಿ ಯಾರಲ್ಲಿ ಶಕ್ತಿ ಇರುವುದಿಲ್ಲವೋ, ಅಂತಹವರು ಬದನೆಯ ಪಲ್ಯವನ್ನು ಅವಶ್ಯ ಸೇವಿಸಬೇಕು. ಇದರಿಂದ ಸ್ವಲ್ಪ ದಿನಗಳಲ್ಲಿಯೆ ಬಲ ಹೆಚ್ಚಾಗುತ್ತದೆ. ವಾರದಲ್ಲಿ ಒಂದು ಸಲ ಅಥವಾ ಎರಡು  ಸಲ ಬದನೆಯ ಪಲ್ಯಯನ್ನು ಅವಶ್ಯ ತಿನ್ನಬೇಕು. ಇದರಿಂದ ಶರೀರ ಪ್ರತಿಕಾರಕ್ಷಮವಾಗುತ್ತದೆ.

– ವೈದ್ಯ ವಿಲಾಸ ಜಗನ್ನಾಥ ಶಿಂದೆ, ಜಿಜಾಯೀ ಆಯುರ್ವೇದ ಚಿಕಿತ್ಸಾಲಯ, ಖಾಲಾಪುರ, ರಾಯಗಡ ಜಿಲ್ಲೆ, ಮಹಾರಾಷ್ಟ್ರ. ಸಂಪರ್ಕ ಕ್ರಮಾಂಕ : 7758806466 (ರಾತ್ರಿ ೮ ರಿಂದ ೯ ಈ ಅವಧಿಯಲ್ಲಿ ಸಂಪರ್ಕ ಮಾಡಬಹುದು) (೪.೧೦.೨೦೧೯)