ಜಗತ್ತಿನ ೧೫೦ ದೇಶಗಳಿಗೆ ೧೨೦ ಲಕ್ಷ ಕೋಟಿ ಸಾಲ ನೀಡಿ ಮೋಸ ಹೋದ ಚೀನಾ !

ಕೊರೋನಾದಿಂದಾಗಿ ಜಗತ್ತಿನ ಅರ್ಥವ್ಯವಸ್ಥೆ ಹದಗೆಟ್ಟಿದ್ದರಿಂದ ಹಣ ಮರುಪಾವತಿಯಾಗುವ ಸಾಧ್ಯತೆ ಕಡಿಮೆ

ಬೀಜಿಂಗ್ (ಚೀನಾ) – ಜಗತ್ತಿನಲ್ಲಿ ತನ್ನ ವರ್ಚಸ್ಸನ್ನು ನಿರ್ಮಿಸಲು ಚೀನಾವು ಜಗತ್ತಿನ ೧೫೦ ದೇಶಗಳಿಗೆ ಸರಿ ಸುಮಾರು ೧೨೦ ಲಕ್ಷ ಕೋಟಿ ರೂಪಾಯಿ ಸಾಲ ನೀಡಿದೆ; ಆದರೆ ಅದರಲ್ಲಿ ಹೆಚ್ಚಿನ ಸಾಲದ ಹಣ ಮರುಪಾವತಿಯಾಗುವ ಸಾಧ್ಯತೆ ಕಡಿಮೆಯಾಗುತ್ತಿದೆ. ಕೊರೋನಾ ಸಂಕಟದಿಂದ ಜಗತ್ತಿನ ಅರ್ಥವ್ಯವಸ್ಥೆ ಹದಗೆಟ್ಟಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಚೀನಾ ಏನೂ ಮಾಡಲು ಸಾಧ್ಯವಿಲ್ಲದ್ದರಿಂದ ಆ ದೇಶಗಳಿಗೆ ಸಾಲವನ್ನು ಮರುಪಾವತಿಸುವ ಕಾಲಾವಕಾಶ ಹೆಚ್ಚಿಸುತ್ತಿದೆ. ಅದರ ಹೊರತಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಸಹಾಯಕತೆ ಕಂಡು ಬರುತ್ತಿದೆ.

೧. ಚೀನಾವು ಪಾಕಿಸ್ತಾನ, ಶ್ರೀಲಂಕಾ, ಮಾಲದಿವ್ ಅದೇರೀತಿ ಆಫ್ರಿಕಾ ಖಂಡದ ಅನೇಕ ದೇಶಗಳಿಗೆ ಸಾಲ ನೀಡಿದೆ. ಪಾಕಿಸ್ತಾನವು ತನ್ನ ಸಾಲವನ್ನು ತೀರಿಸಲು ಇನ್ನೂ ೧೦ ವರ್ಷ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡಿದೆ. ಪಾಕಿಸ್ತಾನದೊಂದಿಗೆ ಚೀನಾದ ಸಂರಕ್ಷಣೆಯ ಬಗ್ಗೆ ಅನುಕೂಲವಿದ್ದರಿಂದ ಅದಕ್ಕೆ ಆರ್ಥಿಕವಾಗಿ ಹಾನಿ ಆಗುತ್ತಿದ್ದರೂ, ಅದನ್ನು ನಿರಾಕರಿಸಲು ಸಾಧ್ಯವಾಗುತ್ತಿಲ್ಲ.

೨. ಚೀನಾವು ೭೭ ದೇಶಗಳಿಗೆ ಸಾಲ ಮರುಪಾವತಿಸಲು ತಡೆ ನೀಡಿದೆ. ಅದರಲ್ಲಿ ಆಫ್ರಿಕಾ ಖಂಡದಲ್ಲೇ ೪೦ ದೇಶಗಳಿವೆ. ಈ ದೇಶಗಳು ಚೀನಾಗೆ ಹಣ ನೀಡಲು ಸಾಧ್ಯವಿಲ್ಲ, ಎಂಬುದು ಅರಿತಿರುವ ಚೀನಾವು ಜಗತ್ತಿನ ಮುಂದೆ ದೊಡ್ಡತನ ತೋರಿಸಿಕೊಳ್ಳಲು ಚೀನಾ ಸ್ವತಃ ಆ ದೇಶಗಳಿಗೆ ‘ಸದ್ಯ ಹಣ ನೀಡಬೇಡಿ’, ಎಂದು ಹೇಳುವ ಮೂಲಕ ವಿನಾಯತಿ ನೀಡಿದೆ.