ಬಿಹಾರದ ಗಡಿಭಾಗದ ಭೂಪ್ರದೇಶದ ಮೇಲೆ ನೇಪಾಳಿ ಸೈನಿಕರಿಂದ ಅತಿಕ್ರಮಣ

ಗಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸೈನಿಕರ ನೇಮಕ

ನೇಪಾಳದ ಹೆಚ್ಚಾಗುತ್ತಿರುವ ವಿವಾದವನ್ನು ನೋಡುತ್ತಾ ಭಾರತವು ಅದಕ್ಕೆ ತಕ್ಕ ಪಾಠಕಲಿಸುವುದು ಅಗತ್ಯವಿದೆ ಇಲ್ಲದಿದ್ದರೆ ಅದು ಮಿತಿಮೀರಿ ಹೋಗುವ ಸಾಧ್ಯತೆ ಇದೆ !

ವಾಲ್ಮೀಕನಗರ (ಬಿಹಾರ) – ಇಲ್ಲಿಯ ಭಾರತೀಯ ಭೂಪ್ರದೇಶವಾಗಿರುವ ಸುಸ್ತಾ ಪ್ರದೇಶವನ್ನು ನೇಪಾಳವು ಆಕ್ರಮಿಸಿಕೊಂಡಿದ್ದು ಅಲ್ಲಿ ಭಾರತೀಯ ನಾಗರಿಕರ ಮೇಲೆ ನಿರ್ಬಂಧ ಹೇರಿದೆ. ಈ ಪ್ರದೇಶದಲ್ಲಿ ೭ ಸಾವಿರದ ೧೦೦ ಎಕರೆ ಭೂಮಿಯ ಬಗ್ಗೆ ವಿವಾದ ನಡೆಯುತ್ತಿದೆ, ಅದೇ ರೀತಿ ನೇಪಾಳವು ಇಲ್ಲಿಯ ನರಸಹಿ ಕಾಡು ಕೂಡ ತನ್ನದಾಗಿದೆ ಎಂದು ಹೇಳಿಕೊಂಡಿದೆ. ಕೊರೋನಾ ‘ಪ್ರತ್ಯೇಕಿಕರಣ ಕೇಂದ್ರ’ ತೆರೆಯುವ ನೆಪದಲ್ಲಿ ನೇಪಾಳವು ತನ್ನ ಸೈನ್ಯವನ್ನು ಅಲ್ಲಿ ಕಳುಹಿಸಿದೆ.

ಭಾರತದ ಗಡಿಭಾಗದಲ್ಲಿ ಚೀನಾವು ನೇಪಾಳಿ ಸೈನಿಕರಿಗಾಗಿ ನಿರ್ಮಿಸಿದ ಡೇರೆ

ನೇಪಾಳಿ ಸೈನಿಕರಿಂದ ತನ್ನ ಗಡಿಯಲ್ಲಿ ೪೦೦ ಚೀನಾದ ಡೇರೆಗಳನ್ನು ನಿರ್ಮಿಸಿವೆ

ಬಿಹಾರದ ಗಡಿಯಲ್ಲಿರುವ ಚೀನಾದ ಡೇರೆಯಲ್ಲಿ ನೇಪಾಳದ ಸಶಸ್ತ್ರ ಸೈನಿಕರು ಕಾಣಿಸುತ್ತಿದ್ದಾರೆ. ಈ ರೀತಿ ಸುಮಾರು ಚೀನಾದ ೪೦೦ ಡೇರೆಗಳನ್ನು ನಿರ್ಮಿಸಲಾಗಿದೆ. ಗಡಿಯಲ್ಲಿ ಪ್ರತಿ ೧೦೦ ಮೀಟರಿನಲ್ಲಿ ನೇಪಾಳದ ಸೈನಿಕರನ್ನು ನೇಮಿಸಿದೆ. ೧ ಸಾವಿರದ ೭೫೧ ಕಿ.ಮೀ. ಉದ್ದದ ಗಡಿಯಲ್ಲಿ ನೇಪಾಳದ ಸಶಸ್ತ್ರ ದಳದ ೨೨೦ ಹೊಸ ಚೌಕಿಗಳನ್ನು ನಿರ್ಮಿಸುವ ಸಿದ್ಧತೆ ಮಡುತ್ತಿದೆ.

ನೇಪಾಳದ ಕುಹಕತೆ

೧. ನರಕಟಿಯಾಗಂಜ ಪ್ರದೇಶದಲ್ಲಿ ಭಿಖನಾಠೋಡಿಯಲ್ಲಿ ಬರುವ ೨ ಜಲಪ್ರವಾಹಗಳನ್ನು ನೇಪಾಳವು ತಡೆದಿದೆ. ನೇಪಾಳವು ಭಾರತೀಯ ಚೌಕಿಗಳಿಗೆ ಬರುವಂತಹ ನೀರಿನ ಸರಬರಾಜನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ; ಆದರೆ ಪ್ರತ್ಯಕ್ಷದಲ್ಲಿ ಈ ಚೌಕಿಗಳಿಗೆ ಕುಪನಲಿಕಾದ ಮಾಧ್ಯಮದಿಂದ ನೀರು ಸರಬರಾಜು ಆಗುತ್ತದೆ.

೨. ಗಂಡಕಿ ನದಿಯ ಭಾರತೀಯ ಪ್ರದೇಶದ ದಡದಲ್ಲಿರುವ ಸುಸ್ತಾ ಗ್ರಾಮದಲ್ಲಿ ನೇಪಾಳವು ಸೇತುವೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿತ್ತು. ಭಾರತವು ಇದನ್ನು ತೀವ್ರವಾಗಿ ವಿರೋಧಿಸಿದಾಗ ನೇಪಾಳವು ಈ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದೆ.

೩. ಜೂನ್ ಆರಂಭದಲ್ಲಿ ವಾಲ್ಮಿಕಿನಗರದ ಪ್ರದೇಶದಲ್ಲಿ ತ್ರಿವೇಣಿ ದಂಡೆಯ ಹತ್ತಿರ ಒಂದು ಆಣೆಕಟ್ಟನ್ನು ನಿರ್ಮಿಸಲು ನೇಪಾಳವು ವಿರೋಧಿಸಿತ್ತು. ಭಾರತವು ನೇಪಾಳಕ್ಕೆ ಬೆದರಿಸಿದ ನಂತರ ನೇಪಾಳವು ಶಾಂತವಾಯಿತು.

೪. ಭಾರತವು ಭಿಟ್ಠಾಮೋಡ ಪ್ರದೇಶದಲ್ಲಿ ಆರಂಭಿಸಿದ್ದ ‘ಅಪ್ರೋಚ’ ಮಾರ್ಗಕ್ಕೆ ನೇಪಾಳವು ಆಕ್ಷೇಪಿಸಿದೆ.

ನೇಪಾಳದಿಂದ ಬಿಹಾರಕ್ಕೆ ನೆರೆಯ ಅಪಾಯ

ನೇಪಾಳ-ಭಾರತ ಗಡಿಯಿಂದ ಬಿಹಾರಕ್ಕೆ ಯಾವಾಗಲೂ ನೆರೆಯ ಅಪಾಯವಿರುತ್ತದೆ. ನೇಪಾಳವು ಅದಕ್ಕಾಗಿ ಪ್ರತಿವರ್ಷ ಉಪಾಯಯೋಜನೆ ಮಾಡುತ್ತಿತ್ತು. ಈ ಸಲ ಮಾತ್ರ ನೇಪಾಳವು ಇಲ್ಲಿ ತಡೆಗೋಡೆ ನಿರ್ಮಿಸಲು ಆಕ್ಷೇಪಿಸಿದ್ದರಿಂದ ಬಿಹಾರದಲ್ಲಿ ನೆರೆಯ ಅಪಾಯವುಂಟಾಗಿದೆ.