‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಭಾರತದಾದ್ಯಂತ ಆಯೋಜಿಸಲಾದ ಔಷಧಿ ಸಸ್ಯಗಳ ಸಾಗುವಳಿ (ಕೃಷಿ) ಮಾಡಲು ಸಹಕರಿಸಿ !

ಮುಂಬರುವ ಭೀಕರ ಕಾಲದಲ್ಲಿನ ೩ನೇ ಮಹಾಯುದ್ಧ ಮತ್ತು ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ನಡೆದಿರುವ ಸಿದ್ಧತೆಯ ಒಂದು ಭಾಗವೆಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆದಷ್ಟು ಬೇಗ ಭಾರತದಾದ್ಯಂತ ಔಷಧಿ ಸಸ್ಯಗಳ ಸಾಗುವಳಿ ಮಾಡುವ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ರೈತರು; ದೊಡ್ಡ ಜಮೀನುಗಳ ಮಾಲೀಕರು; ಸಸ್ಯಶಾಸ್ತ್ರ, ಕೃಷಿ ವಿಜ್ಞಾನಿಗಳು, ಹಾಗೆಯೇ ಆಯುರ್ವೇದ ಶಾಸ್ತ್ರಜ್ಞರು; ಔಷಧಿಸಸ್ಯಗಳ ಜ್ಞಾನವಿರುವ ತಜ್ಞರು ಹೀಗೆ ಅನೇಕರ ಸಹಾಯದ ಆವಶ್ಯಕತೆಯಿದೆ. ತಮ್ಮ ಆಸಕ್ತಿ ಮತ್ತು ಕ್ಷಮತೆಗನುಸಾರ ಮುಂದಿನ ಸೇವೆಗಳಲ್ಲಿ ತಾವೂ ಕೈ ಜೋಡಿಸಬಹುದು.

೧. ಪ್ರತ್ಯಕ್ಷ ಸಾಗುವಳಿಯ ಸಂದರ್ಭದಲ್ಲಿನ ಸೇವೆ

ತಮ್ಮ ಭೂಮಿಯಲ್ಲಿ ಔಷಧಿ ಸಸ್ಯಗಳ ಸಾಗುವಳಿಯನ್ನು ಮಾಡುವುದು (ಈ ಸಾಗುವಳಿಯನ್ನು ಬೇಸಾಯ ನಡೆಯುತ್ತಿರುವ ಭೂಮಿಯಲ್ಲಿ ಆಂತರಿಕ ಬೆಳೆ / ಉಪ ಬೆಳೆ ಎಂದು ಮಾಡಬಹುದು. ಇದರಿಂದ ಮುಖ್ಯ ಬೆಳೆಯ ಮೇಲೆ ಯಾವುದೇ ವಿಪರೀತ ಪರಿಣಾಮವಾಗುವುದಿಲ್ಲ.); ಔಷಧಿ ಸಸ್ಯಗಳ ಸಾಗುವಳಿಗಾಗಿ ಅವಶ್ಯಕವಿರುವ ಸಸಿಗಳನ್ನು ತಯಾರಿಸುವುದು; ಸಾಗುವಳಿಗಾಗಿ ಭೂಮಿ, ಮನುಷ್ಯಬಲ ಅಥವಾ ಸಾಧನಗಳನ್ನು ಪೂರೈಸುವುದು; ಶಾಸ್ತ್ರೀಯ ಪದ್ಧತಿಯಲ್ಲಿ ಕೃಷಿಯನ್ನು ಮಾಡಿಸಿಕೊಳ್ಳುವುದು; ಪ್ರತ್ಯಕ್ಷ ಶ್ರಮದಾನ ಮಾಡುವುದು.

೨. ಇತರ ಸೇವೆಗಳು

ಔಷಧಿ ಸಸ್ಯಗಳನ್ನು ಗುರುತಿಸುವುದು; ಸಾಗುವಳಿ ಮಾಡಲು ಮಾರ್ಗದರ್ಶನ ಮಾಡುವುದು; ತಾಂತ್ರಿಕ ಅಡಚಣೆಗಳನ್ನು ದೂರಗೊಳಿಸುವುದು; ಔಷಧಿ ಸಸ್ಯಗಳ ಸಾಗುವಳಿ ಮಾಡಲು ಮಾಹಿತಿ ನೀಡುವ ಗ್ರಂಥ ಅಥವಾ ಲೇಖನಗಳನ್ನು ದೊರಕಿಸಿಕೊಡುವುದು; ಸರಕಾರಿ ಯೋಜನೆಗಳು ದೊರೆಯಲು ಸಹಾಯ ಮಾಡುವುದು; ಸಾಗುವಳಿಗಾಗಿ ಆರ್ಥಿಕ ಸಹಾಯ ಮಾಡುವುದು; ಸಸ್ಯಗಳಿಂದ ಔಷಧಿಗಳನ್ನು ತಯಾರಿಸಲು ಸಹಾಯ ಮಾಡುವುದು.

 ಔಷಧಿ ಸಸ್ಯಗಳ ಸಾಗುವಳಿ ಸೇವೆಯಲ್ಲಿ ಪಾಲ್ಗೊಳ್ಳಲು ಸಂಪರ್ಕ

ಶ್ರೀ. ವಿಷ್ಣು ಜಾಧವ, ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೊಂಡಾ, ಗೋವಾ – ೪೦೩ ೪೦೧.

ಸಂಚಾರವಾಣಿ ಕ್ರಮಾಂಕ : 8600935533

ವಿ-ಅಂಚೆ : [email protected]

ಭಾವಿ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಉಪಚಾರ ಪದ್ಧತಿಯಾಗಿರುವುದು ! ಅದಕ್ಕಾಗಿಯೂ ಈಗಿನಿಂದಲೇ ಔಷಧೀ ಸಸ್ಯಗಳ ಸಂವರ್ಧನೆಯನ್ನು ಮಾಡುವುದು ಆವಶ್ಯಕವಾಗಿದೆ.

(ಸಂಧರ್ಭ : ಸನಾತನ ಗ್ರಂಥ ‘ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?)