೧. ವಿವಿಧ ವ್ಯಕ್ತಿಗಳು ಪುನರ್ಜನ್ಮ ತೆಗೆದುಕೊಳ್ಳುವುದು
೧ ಅ. ಸಾಮಾನ್ಯ ವ್ಯಕ್ತಿಯು ಪುನರ್ಜನ್ಮ ತೆಗೆದುಕೊಳ್ಳುವುದರ ಹಿಂದಿನ ವಿವಿಧ ಕಾರಣಗಳು
೧. ಕರ್ಮಪ್ರಾರಬ್ಧಕ್ಕನುಸಾರ ಸುಖ ಮತ್ತು ದುಃಖಗಳನ್ನು ಭೋಗಿಸುವುದು
೨. ಇತರ ಜೀವಗಳೊಂದಿಗಿರುವ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರವನ್ನು ಪೂರ್ಣಗೊಳಿಸುವುದು
೩. ಕ್ರಿಯಮಾಣ ಕರ್ಮವನ್ನು ಉಪಯೋಗಿಸಿ ಹೊಸ ಕರ್ಮಗಳನ್ನು ಮಾಡುವುದು
೪. ಕ್ರಿಯಮಾಣಪ್ರಾರಬ್ಧಕ್ಕನುಸಾರ ಸಿಗುವ ಫಲವನ್ನು (ಸುಖ-ದುಃಖ) ಭೋಗಿಸುವುದು
೧ ಆ. ಸಾಧಕರ ಪುನರ್ಜನ್ಮವಾಗುವುದರ ಹಿಂದಿನ ವಿವಿಧ ಕಾರಣಗಳು
೧. ಕರ್ಮಪ್ರಾರಬ್ಧಕ್ಕನುಸಾರ ಸುಖ ಮತ್ತು ದುಃಖಗಳನ್ನು ಭೋಗಿಸುವುದು
೨. ಇತರ ಜೀವಗಳೊಂದಿಗಿರುವ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ವನ್ನು ಪೂರ್ಣಗೊಳಿಸುವುದು
೩. ಕ್ರಿಯಮಾಣ ಕರ್ಮವನ್ನು ಉಪಯೋಗಿಸಿ ಉತ್ತಮ ರೀತಿಯಲ್ಲಿ ಧರ್ಮಾಚರಣೆ ಹಾಗೂ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವುದು
೧ ಇ. ಸಂತರು, ಸದ್ಗುರುಗಳು ಹಾಗೂ ಪರಾತ್ಪರ ಗುರುಗಳು ಇವರ ಪುನರ್ಜನ್ಮವಾಗುವುದರ ಹಿಂದಿನ ಕಾರಣಗಳು
೧. ಸಮಷ್ಟಿ ಪ್ರಾರಬ್ಧಕ್ಕನುಸಾರ ಸುಖ ಹಾಗೂ ದುಃಖವನ್ನು ಭೋಗಿಸುವುದು
೨. ಧರ್ಮಾಭಿಮಾನಿ ಹಾಗೂ ಸಾಧಕರಿಗೆ ಸಾಧನೆಯ ಬಗ್ಗೆ ಮುಂದಿನ ಮಾರ್ಗದರ್ಶನ ಮಾಡುವುದು
೩. ಈಶ್ವರನ ಅವತಾರಿ ಕಾರ್ಯದಲ್ಲಿ ಪಾಲ್ಗೊಂಡು ಅವತಾರಿ ಕಾರ್ಯವನ್ನು ಪೂರ್ಣಗೊಳಿಸಲು ಅವತಾರಕ್ಕೆ ಸಹಾಯ ಮಾಡುವುದು
೪. ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳುವುದು (ಉನ್ನತ ಜೀವಗಳು ಜನ, ತಪ ಅಥವಾ ಸತ್ಯ ಈ ಲೋಕಗಳ ಬದಲು ಪೃಥ್ವಿಯಲ್ಲಿ ಪುನರ್ಜನ್ಮ ತೆಗೆದುಕೊಂಡು ಅವತಾರಿ ಕಾರ್ಯದಲ್ಲಿ ಪಾಲ್ಗೊಂಡ ಕಾರಣ ಅವರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಿ ಅವರು ಮೋಕ್ಷಕ್ಕೆ ಅರ್ಹರಾಗುತ್ತಾರೆ.)
೧ ಈ. ಪರಾತ್ಪರ ಗುರು ಡಾಕ್ಟರ ಆಠವಲೆಯವರು ಪುನರ್ಜನ್ಮ ತಳೆದುದರ ಹಿಂದಿನ ವಿವಿಧ ಕಾರಣಗಳು
೧. ಅವತಾರಿ ಕಾರ್ಯದ ಮೂಲಕ ಧರ್ಮಸಂಸ್ಥಾಪನೆ
೨. ಕೆಟ್ಟ ಶಕ್ತಿ ಹಾಗೂ ದುಷ್ಪ್ರವೃತ್ತಿಗಳ ನಿರ್ಮೂಲನೆ
೩. ಸಮಷ್ಟಿಯ ಉದ್ಧಾರ
೨. ಸಾಮಾನ್ಯ ವ್ಯಕ್ತಿಗಳು ಪ್ರಾರಬ್ಧದಿಂದ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ಅವತಾರಿ ಕಾರ್ಯಕ್ಕಾಗಿ ಪುನರ್ಜನ್ಮ ತಾಳುವುದು
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೧೮ ರಾತ್ರಿ ೧೧.೩೫)
ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆ ಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಸೂಕ್ಷ್ಮ ಪರೀಕ್ಷಣೆ: ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.