ಸಾಧಕರು ಈಶ್ವರೀ ರಾಜ್ಯದ ಸ್ಥಾಪನೆಯ ಧ್ಯೇಯವನ್ನಲ್ಲ, ಈಶ್ವರಪ್ರಾಪ್ತಿಯ ಧ್ಯೇಯವನ್ನಿಟ್ಟು ಸಾಧನೆಯನ್ನು ಮಾಡುವುದು ಮಹತ್ವದ್ದು !

‘ಸಾಧನೆಯನ್ನು ಮಾಡುವಾಗ ಯಾವ ಧ್ಯೇಯವನ್ನಿಡಬೇಕು ?’ ಎಂಬ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಅಂಶಗಳು

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ದೈವೇಚ್ಛೆಯಂತೆ ಸಮಯ ಬಂದಾಗ (ಭಗವಂತನ ಆಯೋಜನೆಗನುಸಾರ), ಈಶ್ವರೀ ರಾಜ್ಯವು ಯಾವಾಗ ಬರಬೇಕೋ ಆಗ ಬಂದೇ ಬರುತ್ತದೆ. ಅದರ ಅಪೇಕ್ಷೆ ಸಹ ಬೇಡ. ಸಾಧಕರು ಈಶ್ವರೀ ರಾಜ್ಯದ ಸ್ಥಾಪನೆಯ ಧ್ಯೇಯವನ್ನಿಟ್ಟು ಸಾಧನೆಯನ್ನು ಮಾಡಬಾರದು. ‘ನನಗೆ ಈಶ್ವರನು ಬೇಕು’, ಎಂಬ ಧ್ಯೇಯಕ್ಕಾಗಿ ಪ್ರಯತ್ನಿಸಬೇಕು. ಸಮಯ ಬಂದಾಗ ಈಶ್ವರೀ ರಾಜ್ಯವು ಸ್ಥಾಪನೆಯಾಗಿಯೇ ಆಗಲಿದೆ. ಅದಕ್ಕಾಗಿ ನಾವು ಪ್ರತ್ಯೇಕವಾಗಿ ಪ್ರಯತ್ನವನ್ನು ಮಾಡುವ ಅಗತ್ಯವಿಲ್ಲ. ಸಾಧನೆಯನ್ನು ಮಾಡುವಾಗ ಸಾಧಕರ ಸಾತ್ತ್ವಿಕತೆಯು ಹೆಚ್ಚಾದಾಗ ಅದರ ಫಲವೆಂದು ತನ್ನಿಂದ ತಾನೆ ಈಶ್ವರೀ ರಾಜ್ಯದ ಸ್ಥಾಪನೆಯಾಗಲಿದೆ. ಸಾಧಕರು ಸಾಧನೆಯನ್ನು ಮಾಡಿ ಮೋಕ್ಷ ಪ್ರಾಪ್ತಿಯನ್ನು ಮಾಡಿಕೊಳ್ಳುವುದು ಮಹತ್ವದ್ದಾಗಿದೆ. ಅದಕ್ಕಾಗಿ ಸಾಧನೆಯಲ್ಲಿ ಈಶ್ವರಪ್ರಾಪ್ತಿಯ ಧ್ಯೇಯವನ್ನಿಡುವುದು ಮಹತ್ವದ್ದಾಗಿದೆ. ಧ್ಯೇಯದಿಂದ ನಾವು ಚಿಂತನಶೀಲರಾಗುತ್ತೇವೆ, ನಮ್ಮ ಪ್ರಯತ್ನಗಳಿಗೆ ವೇಗ ಸಿಗುತ್ತದೆ ಮತ್ತು ನಾವು ಕಾರ್ಯಪ್ರವೃತ್ತರಾಗುತ್ತೇವೆ.’ – (ಸದ್ಗುರು) ಸೌ. ಅಂಜಲಿ ಗಾಡಗೀಳ (ಈ ಲೇಖನವು ಈ ಮೊದಲು ಬರೆದಿರುವುದರಿಂದ ಇಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಎಂಬ ಉಲ್ಲೇಖವಿದೆ. – ಸಂಕಲನಕಾರರು)