ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಪೂ. ರಮಾನಂದ ಗೌಡ

ಪ್ರಸ್ತುತ ವಿವಿಧ ವಿಪತ್ತುಗಳಿಂದಾಗಿ ಮಾನವನು ದಿಕ್ಕೆಟ್ಟಿದ್ದಾನೆ. ಇಂತಹ ಈ ಘೋರ ಆಪತ್ಕಾಲದಲ್ಲಿ ವಿಜ್ಞಾನವಲ್ಲ ಬದಲಾಗಿ ಸಾಧನೆಯಿಂದಲೇ ಅವನಿಗೆ ಸುಖ ಮತ್ತು ಶಾಂತಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಧನೆಯ ಕುರಿತಾದ ‘ಆನ್‌ಲೈನ್ ಸತ್ಸಂಗದ ಆಯೋಜನೆ ಮಾಡಲಾಗುತ್ತಿದೆ. ಇತ್ತೀಚೆಗೆ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಜಾಗತಿಕ ಸಂಕಟಗಳು : ಧರ್ಮದ ಕುರಿತು ದೃಷ್ಟಿಕೋನ ಮತ್ತು ಉಪಾಯ ಇದರ ಬಗ್ಗೆ ಮಾರ್ಗದರ್ಶನ ಮಾಡಿದರು. ಆ ಮಾರ್ಗದರ್ಶನದ ಆಯ್ದ ಭಾಗವನ್ನು ಇಲ್ಲಿ ಕ್ರಮಶಃ ಮುದ್ರಿಸುತ್ತಿದ್ದೇವೆ.

೯. ಆಪತ್ಕಾಲವನ್ನು ತಡೆಯಲು ಸಾಧ್ಯವಿದೆಯೇ ?

ಇಂದು ಕಾಲವು ಅತ್ಯಂತ ಭೀಕರವಾಗಿದೆ. ಇದನ್ನು ವಿಜ್ಞಾನ ಸಹ ಹೇಳುತ್ತಿದೆ. ನಾವು ಸಹ ಇದನ್ನು ನೋಡುತ್ತಿದ್ದೇವೆ ಮತ್ತು ಸಂತರು ಸಹ ಹೇಳಿದ್ದಾರೆ. ಈಗ ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆ ಏನೆಂದರೆ ಆಪತ್ಕಾಲವನ್ನು ತಡೆಯಲು ಸಾಧ್ಯವಿದೆಯೇ ? ಇದಕ್ಕೆ ಪರಿಹಾರವಿದೆಯೇನು ? ದುರದೃಷ್ಠವಶಾತ್ ಇದರ ಉತ್ತರ ‘ಇಲ್ಲ ಎಂದೇ ಹೇಳಬೇಕು. ಕೆಲವರಿಂದಾದ ದುಷ್ಕರ್ಮಗಳು ಮತ್ತು ಅದನ್ನು ನೋಡಿಯೂ ನೋಡದಂತಿರುವ ಇತರ ಜನರಿಂದಾಗಿ ಇಂದು ಇಡೀ ಸಮಾಜವು ಈ ಆಪತ್ಕಾಲದ ಪರಿಣಾಮವನ್ನು ಭೋಗಿಸಬೇಕಾಗುತ್ತಿದೆ. ಮಾನವನು ಪ್ರಕೃತಿಯನ್ನು ಎಷ್ಟು ಅಸಮತೋಲನಗೊಳಿಸಿದ್ದಾನೆಂದರೆ ಈಗ ಪ್ರಕೃತಿಯೇ ತನ್ನ ಸಮತೋಲನವನ್ನು ಮಾಡಿಕೊಳ್ಳಲಿದೆ. ಆದರೆ ಅದರ ಪರಿಣಾಮವನ್ನು ನಾವೆಲ್ಲರೂ ಭೋಗಿಸಬೇಕಾಗಿದೆ. ಹಾಗಾದರೆ ನಾವೀಗ ಏನು ಮಾಡಬೇಕು ? ನಾವು ಆಪತ್ಕಾಲವನ್ನಂತೂ ತಡೆಯಲಾರೆವು. ಆದರೆ ಆ ಆಪತ್ತಿನ ಪರಿಣಾಮವನ್ನು ಸೌಮ್ಯಗೊಳಿಸಲು ಮತ್ತು ತನ್ನ ರಕ್ಷಣೆಗಾಗಿ ಖಂಡಿತವಾಗಿ ಪ್ರಯತ್ನ ಮಾಡಬಹುದು. ಆಪತ್ಕಾಲದಲ್ಲಿ ಆಗುವ ಭೀಕರ ಹಾನಿಯ ವಿಷಯವನ್ನು ತಿಳಿದು ಕೆಲವರಿಗೆ ದುಃಖವಾಗಬಹುದು, ಇನ್ನು ಕೆಲವರ ಮನಸ್ಸಿನಲ್ಲಿ ಈ ಹಾನಿಯನ್ನು ತಡೆಗಟ್ಟಲು ಈಶ್ವರನು ಏನೂ ಮಾಡುವುದಿಲ್ಲವೇ ?, ಎಂದು ಪ್ರಶ್ನೆಗಳು ಮೂಡಬಹುದು. ಈ ವಿಷಯದಲ್ಲಿ ನಾವು ಗಮನದಲ್ಲಿಡಬೇಕೇನೆಂದರೆ ಈ ಆಪತ್ಕಾಲವು ಸಂಪೂರ್ಣ ವಿಶ್ವದಲ್ಲಿ ಈಶ್ವರೀಯ ರಾಜ್ಯವನ್ನು ಸ್ಥಾಪನೆ ಮಾಡುವ ದೃಷ್ಟಿಯಿಂದಾದ ಈಶ್ವರೀ ಆಯೋಜನೆಯಾಗಿದೆ. ಪೃಥ್ವಿಯಲ್ಲಿ ಹೆಚ್ಚಾಗಿರುವ ರಜ-ತಮವನ್ನು ಕಡಿಮೆಗೊಳಿಸಿ ಸತ್ತ್ವಗುಣದ ಪ್ರಭಾವವನ್ನು ಹೆಚ್ಚಿಸಲು ಈ ಆಪತ್ಕಾಲವು ಈಶ್ವರನು ರೂಪಿಸಿದ ಯೋಜನೆಯಾಗಿದೆ. ಅರ್ಥಾತ್, ಸಜ್ಜನರಿಗಾಗಿ ಇದು ಆಪತ್ಕಾಲವು ‘ಇಷ್ಟಕಾಲ (ಸಂಪತ್ಕಾಲ)ವಾಗಿದೆ. ಹಾಗಾಗಿ ಹಿಂದೂ ಸಮಾಜವು, ‘ಆಪತ್ಕಾಲವು ಉಚಿತವೋ, ಅನುಚಿತವೋ; ಎಂಬ ವಿಚಾರದಲ್ಲಿ ಮುಳುಗದೇ ಈ ಆಪತ್ಕಾಲವು ಸಾಧನೆಯನ್ನು ಮಾಡಲು ಮತ್ತು ಹಿಂದೂಗಳ ರಕ್ಷಣೆ ಮಾಡಿ ಈಶ್ವರನ ಕೃಪೆಯನ್ನು ಪಡೆಯುವ, ಸುವರ್ಣಾವಕಾಶವಾಗಿದೆ. ಈ ಕಾರ್ಯವನ್ನು ಮಾಡಲು ಈಶ್ವರನು ನಮಗೆಲ್ಲರಿಗೂ ಶಕ್ತಿ, ಯುಕ್ತಿ ಮತ್ತು ಬುದ್ಧಿಯನ್ನು ನೀಡಲಿ, ಎಂದು ಪ್ರಾರ್ಥನೆಯನ್ನು ಮಾಡುತ್ತೇನೆ.

ಕೊರೋನಾದಿಂದ ಉದ್ಭವಿಸಿದ ಭಯ ಹಾಗೂ ಚಿಂತೆಯನ್ನು ಶ್ರದ್ಧೆಯ ಬಲದಿಂದ ಎದುರಿಸಬೇಕು !

೧. ತನ್ನ ಸೈನಿಕರು ಅಸಾಧ್ಯವಿರುವ ಆಲ್ಫ್ಸ್ ಪರ್ವತವನ್ನು ಪಾರು ಮಾಡಲು ನೆಪೋಲಿಯನ್ ಮಾಡಿದ ಉಪಾಯ ! : ನೆಪೊಲಿಯನ್ ಬಾನ್‌ಪಾರ್ಟ್‌ನು ಫ್ರಾನ್ಸ್‌ನಲ್ಲಿ ಜನಿಸಿದ್ದನು. ಅವನ ಶಬ್ದಕೋಶದಲ್ಲಿ ‘ಅಸಾಧ್ಯ ಎಂಬ ಪದವೇ ಇರಲಿಲ್ಲ ಎಂದು ಹೇಳಲಾಗುತ್ತದೆ. ಒಂದು ಸಲ ನೆಪೋಲಿಯನ್ ತನ್ನ ಸೇನೆಯೊಂದಿಗೆ ಆಲ್ಫ್ಸ್ ಪರ್ವತವನ್ನು ದಾಟಿ ಹೋಗಲಿಕ್ಕಿತ್ತು. ಅಲ್ಲಿಯ ತನಕ ಯಾರೂ ಆಲ್ಫ್ಸ್ ಪರ್ವತವನ್ನು ದಾಟಿ ಹೋಗುವ ಪ್ರಯತ್ನವನ್ನು ಮಾಡಿರಲಿಲ್ಲ. ‘ಇದು ಅಸಾಧ್ಯವಿದೆ ಎಂದು ಎಲ್ಲರೂ ನಂಬಿದ್ದರು. ನೆಪೋಲಿಯನ್ ತನ್ನ ಸೇನೆಯೊಂದಿಗೆ ಹೊರಟಾಗ ಸೇನೆಯು ತುಂಬಾ ಚಿಂತೆಯಲ್ಲಿತ್ತು. ಸೈನಿಕರು ಬಹಳ ಹೆದರಿದ್ದರು. ಸ್ವಲ್ಪ ದೂರ ಹೋದ ನಂತರ ರಸ್ತೆಯಲ್ಲಿ ಒಬ್ಬ ವೃದ್ಧ ಮಹಿಳೆಯು ಸಿಕ್ಕಿದಳು. ಅವಳು ನೆಪೋಲಿಯನ್‌ನಿಗೆ, “ನೀನು ನಿನ್ನ ಸೈನ್ಯವನ್ನು ತೆಗೆದುಕೊಂಡು ಹಿಂದಕ್ಕೆ ಹೊರಟು ಹೋಗು, ಆಲ್ಫ್ಸ್ ಪರ್ವತವನ್ನು ದಾಟಿ ಹೋಗಲು ಪ್ರಯತ್ನಿಸಿದವರು ಯಾರೂ ಜೀವಂತವಾಗಿ ವಾಪಾಸ್ಸು ಬಂದಿಲ್ಲ ಎಂದು ಹೇಳಿದಳು. ಅದನ್ನು ಕೇಳಿ ಸೈನಿಕರು ಇನ್ನಷ್ಟು ಹೆದರಿದರು. ಆದರೆ ನೆಪೋಲಿಯನ್‌ನು ತನ್ನ ಸೈನಿಕರಿಗೆ “ನಾನು ನಿಮ್ಮನ್ನು ಆಲ್ಫ್ಸ್ ಪರ್ವತದ ತನಕ ಕರೆದೊಯ್ಯುತ್ತೇನೆ. ಆಲ್ಫ್ಸ್ ಪರ್ವತವನ್ನು ನೋಡಿದ ನಂತರ ನೀವೇ ನಿರ್ಣಯ ಹೇಳಿ, ಮುಂದೆ ಹೋಗಬೇಕೋ ಬೇಡವೋ ? ಅನಂತರ ಮುಂದೆ ಹೋಗುವುದು ಬೇಡ ಎಂದು ಅನಿಸಿದರೆ ನಾವು ಹಿಂದೆ ತಿರುಗಿ ಬರೋಣ ಎಂದು ಹೇಳುತ್ತಾನೆ. ಇದನ್ನು ಕೇಳಿದ ನಂತರ ಸೈನಿಕರು ಉತ್ಸಾಹದಿಂದ ಮುಂದುವರಿಯುತ್ತಾರೆ.

೨. ಆಲ್ಫ್ಸ್ ಪರ್ವತ ಪಾರು ಮಾಡಲು ಸೈನಿಕರ ಮನಸ್ಸಿನಲ್ಲಿ ಭಯ ಉಳಿಯದ ಕಾರಣ ಅವರು ಸಹಜವಾಗಿ ಪಾರು ಮಾಡುವುದು ! : ದಾರಿಯಲ್ಲಿ ಕೆಲವು ಪರ್ವತ ಕಾಣಿಸುತ್ತದೆ, ಅನಂತರ ಇನ್ನೊಂದು ದೊಡ್ಡ ಪರ್ವತ ಕಾಣಿಸುತ್ತದೆ. ಸೈನಿಕರು ನೆಪೋಲಿಯನ್‌ನ ಬಳಿ ‘ಇದೇನಾ ಆಲ್ಫ್ಸ್ ಪರ್ವತ ? ಎಂದು ಕೇಳುತ್ತಾರೆ. ನೆಪೋಲಿಯನ್‌ನು, “ಅಲ್ಲ ಆಲ್ಫ್ಸ್ ಪರ್ವತವು ಈ ಪರ್ವತಕ್ಕಿಂತ ಒಂದುವರೆ ಪಟ್ಟು ದೊಡ್ಡದಿದೆ. ಆಲ್ಫ್ಸ್ ಪರ್ವತವು ಕಂಡ ತಕ್ಷಣ ನಾನು ನಿಮಗೆ ತಿಳಿಸುತ್ತೇನೆ ಎನ್ನುತ್ತಾನೆ. ಎಲ್ಲರೂ ಮುಂದೆ ಸಾಗಲು ಪ್ರಾರಂಭಿಸುತ್ತಾರೆ. ಪರ್ವತವನ್ನು ದಾಟಿ ದೊಡ್ಡ ಮೈದಾನಕ್ಕೆ ಬರುತ್ತಾರೆ. ಸ್ವಲ್ಪ ದೂರ ಹೋದ ನಂತರ ಸೈನಿಕರು “ಯಾವಾಗ ಬರುತ್ತದೆ ಆಲ್ಫ್ಸ್ ಪರ್ವತ? ಎಂದು ಕೇಳುತ್ತಾರೆ. ಆಗ ನೆಪೋಲಿಯನ್‌ನು “ಯಾವ ಆಲ್ಫ್ಸ್ ಪರ್ವತದ ಬಗ್ಗೆ ಕೇಳುತ್ತಿದ್ದೀರಿ. ನಾವು ಆಲ್ಫ್ಸ್ ಪರ್ವತವನ್ನು ಯಾವಾಗಲೋ ದಾಟಿ ಆಗಿದೆ ಎನ್ನುತ್ತಾನೆ.

೩. ಶ್ರದ್ಧೆಯ ಬಲದಿಂದ ಭಯ-ಚಿಂತೆಯನ್ನು ಎದುರಿಸಿ ! :

ಇಂದು ಸಹ ಜನರ ಮನಸ್ಸಿನಲ್ಲಿ ಕೊರೋನಾ ಸಂಕಟದ ಮತ್ತು ಮಹಾಮಾರಿಯ ಬಗ್ಗೆ ಭಯ ಮನೆ ಮಾಡಿದೆ. ನಾವು ಜೀವನದ ಇತರ ಕಠಿಣ ಪ್ರಸಂಗಗಳ ಅಧ್ಯಯನ ಮಾಡೋಣ ಮತ್ತು ಅವುಗಳ ಮೇಲೆ ಶ್ರದ್ಧೆಯ ಬಲದಲ್ಲಿ ಯಾವ ರೀತಿಯಲ್ಲಿ ಎದುರಿಸಿದೆವು ಎಂಬುದನ್ನು ಅಭ್ಯಾಸ ಮಾಡೋಣ. ಆಗ ಈ ಭಯ ಚಿಂತೆಯ ಮೇಲೆ ನಾವು ವಿಜಯ ಸಾಧಿಸಬಹುದು. – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.