ನಾಮಜಪಾದಿ ಉಪಾಯಗಳನ್ನು ಪರಿಪೂರ್ಣ ಮತ್ತು ಭಾವಪೂರ್ಣ ಮಾಡುವುದರ ಮಹತ್ವವನ್ನು ಗಾಂಭೀರ್ಯದಿಂದ ಅರಿತುಕೊಳ್ಳಿ !
‘ಪ್ರಸ್ತುತ ಸ್ಥೂಲದಲ್ಲಿ ಆರಂಭವಾಗಿರುವ ಆಪತ್ಕಾಲದಿಂದ ಸೂಕ್ಷ್ಮದಲ್ಲಿನ ನಿರ್ಣಾಯಕ ಆಪತ್ಕಾಲವು ಆರಂಭವಾಗಿದೆ. ಆದುದರಿಂದ ಸಾಧಕರ ಆಧ್ಯಾತ್ಮಿಕ ತೊಂದರೆಗಳಲ್ಲಿ ಹೆಚ್ಚಳವಾಗಿದೆ. ಅನೇಕ ಸಾಧಕರಿಗೆ ಕುಳಿತು ನಾಮಜಪಾದಿ ಉಪಾಯಗಳನ್ನು ಮಾಡಲು ಹೇಳಲಾಗಿದೆ. ಎಲ್ಲ ಸಾಧಕರಿಗೆ ದೇವತೆಗಳ ಸ್ತೋತ್ರಗಳನ್ನು ಕೇಳುವುದು, ಮಂತ್ರ ಮತ್ತು ನಾಮಜಪ ಕೇಳುವುದು ಮುಂತಾದ ಉಪಾಯಗಳನ್ನೂ ಮಾಡಲು ಹೇಳಲಾಗಿದೆ. ಹೀಗಿದ್ದರೂ ಉಪಾಯಗಳ ಬಗ್ಗೆ ಗಾಂಭೀರ್ಯದ ಕೊರತೆ, ಆಜ್ಞಾಪಾಲನೆ ಮಾಡದಿರುವುದು, ಪರಿಣಾಮಗಳ ವಿಚಾರ ಮಾಡದಿರುವುದು, ಇಂತಹ ದೋಷಗಳಿಂದಾಗಿ ಅನೇಕ ಸಾಧಕರಿಂದ ಎಲ್ಲಾ ಉಪಾಯಗಳು ಪೂರ್ಣವಾಗುವುದಿಲ್ಲ, ಹಾಗೆಯೇ ಭಾವಪೂರ್ಣವೂ ಆಗುವುದಿಲ್ಲ. ಆಧ್ಯಾತ್ಮಿಕ ತೊಂದರೆ ತೀವ್ರವಿದ್ದಾಗ ಸಾಧಕರಿಂದ ಉಪಾಯಗಳು ಅಷ್ಟು ಭಾವಪೂರ್ಣವಾಗಲು ಸಾಧ್ಯವಿಲ್ಲ; ಆದರೆ ಸ್ವಲ್ಪ ಸಮಯದಿಂದ ತೊಂದರೆಯನ್ನು ಭೋಗಿಸುತ್ತಿರುವ ಹೆಚ್ಚಿನ ಸಾಧಕರ ಮನಸ್ಸಿನಲ್ಲಿ ‘ನಮ್ಮಿಂದ ಭಾವಪೂರ್ಣವಾಗಿ ಉಪಾಯಗಳಾಗಲು ಸಾಧ್ಯವಿಲ್ಲ ಎಂಬುದು ಈಗ ಎಷ್ಟು ಆಳವಾಗಿ ಬಿಂಬಿತವಾಗಿದೆ ಎಂದರೆ ಆಧ್ಯಾತ್ಮಿಕ ತೊಂದರೆ ಕಡಿಮೆ ಇದ್ದಾಗ ಸಹ ಅವರಿಂದ ಭಾವಪೂರ್ಣವಾಗಿ ಉಪಾಯವನ್ನು ಮಾಡಲು ಪ್ರಯತ್ನಗಳಾಗುವುದಿಲ್ಲ. ಕೆಲವು ಸಾಧಕರು ‘ತುಂಬಾ ಸೇವೆ ಇರುತ್ತದೆ’, ಎಂಬ ಕಾರಣವನ್ನು ಹೇಳಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆ’ಯನ್ನು ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿಯೂ ಸಾಧಕರ ತೊಂದರೆಗಳು ಹೆಚ್ಚಾಗುತ್ತವೆ. ತೊಂದರೆಗಳು ಹೆಚ್ಚಾದಂತೆ ಉಪಾಯವನ್ನು ಹೆಚ್ಚಿಸಬೇಕಾಗುತ್ತದೆ ಮತ್ತು ಉಪಾಯ ಸರಿಯಾಗಿ ಮಾಡದಿದ್ದರೆ, ತೊಂದರೆಗಳು ಪುನಃ ಹೆಚ್ಚಾಗುತ್ತವೆ. ಈ ರೀತಿ ದುಶ್ಚಕ್ರವು ಮುಂದುವರಿಯುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರಿಗೆ, ಸಾಧಕರು ಪ್ರಾಣಕ್ಕಿಂತಲೂ ಹೆಚ್ಚು ಮೌಲ್ಯದವರಾಗಿದ್ದಾರೆ. ಅವರು ಸಾಧಕರನ್ನು ಅಂಗೈಮೇಲಿನ ಹುಣ್ಣಿನಂತೆ ಕಾಪಾಡುತ್ತಾರೆ. ವಿವಿಧ ನಾಡಿಪಟ್ಟಿಗಳ ಮಾಧ್ಯಮದಿಂದ ಮಹರ್ಷಿಗಳು, ಹಾಗೆಯೇ ಕೆಲವು ಸಂತರು ಮತ್ತು ಜ್ಯೋತಿಷಿಗಳು, ‘ಪರಾತ್ಪರ ಗುರು ಡಾ. ಆಠವಲೆಯವರು ತುಂಬಾ ಶಾರೀರಿಕ ತೊಂದರೆಯನ್ನು ಭೋಗಿಸಬೇಕಾಗುತ್ತದೆ; ಏಕೆಂದರೆ ಅವರು ಸಾಧಕರ ತೊಂದರೆಗಳನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ !’ ಎಂದು ಹೇಳಿದ್ದಾರೆ. ಇದಕ್ಕಾಗಿ, ಸಾಧಕರೇ, ‘ಒಂದು ವೇಳೆ ತಮ್ಮ ಆಧ್ಯಾತ್ಮಿಕ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ನಿಮ್ಮಲ್ಲಿ ಗಾಂಭೀರ್ಯ ಇಲ್ಲದಿದ್ದರೂ, ನಿಮ್ಮ ತೊಂದರೆಗಳನ್ನು ಪರಾತ್ಪರ ಗುರು ಡಾಕ್ಟರರು ಭೋಗಿಸುವಂತಾಗಬಾರದು, ಎಂಬುದಕ್ಕಾಗಿ ಉಪಾಯಗಳನ್ನು ಗಾಂಭೀರ್ಯದಿಂದ ಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಮಾಡಿರಿ, ಹಾಗೆಯೇ ಗಂಭೀರವಾಗಿ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆ’ಯನ್ನು ಮಾಡಿರಿ ! – (ಪೂ.) ಶ್ರೀ. ಸಂದೀಪ ಆಳಶಿ (೫.೫.೨೦೨೦)