ಭೀಕರ ಆಪತ್ಕಾಲದ ತೀವ್ರತೆ, ಅದರ ಸ್ವರೂಪ ಮತ್ತು ಈಶ್ವರನು ಸಹಾಯ ಮಾಡುವುದು, ಇದರ ಬಗ್ಗೆ ಲಭಿಸಿದ ಸೂಕ್ಷ್ಮಜ್ಞಾನ

ಕು. ಮಧುರಾ ಭೋಸಲೆ

‘ಕೆಲವು ದಾರ್ಶನಿಕ ಸಂತರು, ಪರಾತ್ಪರ ಗುರು ಡಾಕ್ಟರ ಆಠವಲೆಯವರು ಮತ್ತು ಭವಿಷ್ಯಕಾರರು ಅನೇಕ ವರ್ಷಗಳಿಂದ ಯಾವ ಭೀಕರ ಆಪತ್ಕಾಲದ ವಿಷಯದ ಬಗ್ಗೆ ಹೇಳುತ್ತಿದ್ದರೋ, ಅದೀಗ ಪ್ರಾರಂಭವಾಗಿದೆ. ಕಳೆದ ೩-೪ ವರ್ಷಗಳಲ್ಲಿ ದೇಶದಲ್ಲಿ ನಡೆದ ನೆರೆಹಾವಳಿ ಸ್ಥಿತಿ, ಕೆಲವು ದೇಶಗಳ ಅರಣ್ಯಗಳು ಬೆಂಕಿ ಗಾಹುತಿಯಾಗುವುದು, ಕೆಲವು ಸ್ಥಳಗಳಲ್ಲಿ ಭೂಕಂಪಗಳಾಗುವುದು ಮತ್ತು ಸುನಾಮಿಗಳಂತಹ ಘಟನೆಗಳಿಂದ ಆಪತ್ಕಾಲದ ಮುನ್ಸೂಚನೆ ದೊರಕಿತ್ತು. ಈಗ ಸಂಪೂರ್ಣ ಜಗತ್ತನ್ನು ಆವರಿಸಿಕೊಂಡಿರುವ ಕೊರೋನಾ ವಿಷಾಣುಗಳ ಸಂಕಟದಿಂದ ಆಪತ್ಕಾಲವು ಪ್ರತ್ಯಕ್ಷ ಪ್ರಾರಂಭವಾಗಿದೆ. ಈ ಆಪತ್ಕಾಲದ ಸ್ವರೂಪ ಮತ್ತು ಅದರ ಹಂತಗಳು ಮುಂದಿನಂತೆ ಇರಲಿದೆ.

೧. ಆಪತ್ಕಾಲದ ಹಂತ, ಅದರ ತೀವ್ರತೆ, ಅದರ ಮಟ್ಟ, ಅದರ ಸ್ವರೂಪ ಮತ್ತು ಅದಕ್ಕೆ ಸಂಬಂಧಿಸಿದ ವರ್ಷಗಳು

೨. ಭೀಕರ ಕಾಲದಲ್ಲಿ ಪೃಥ್ವಿಯ ಮೇಲಿರುವ ಸಾತ್ತ್ವಿಕ ಜೀವಗಳಿಗೆ ವಿವಿಧ ಸ್ತರದಲ್ಲಿ ಸಹಾಯ ದೊರಕಲಿದೆ.

ಟಿಪ್ಪಣಿ : ಈಶ್ವರನು ನೇರವಾಗಿ ಸಹಾಯ ಮಾಡದೇ ಅವನು ಯಾವುದಾದರೊಂದು ಮಾಧ್ಯಮದಿಂದ ಸಹಾಯ ಮಾಡುವನು.‘ವ್ಯಕ್ತಿ ಮತ್ತು ನಿಸರ್ಗ ಇವುಗಳ ಮಾಧ್ಯಮದಿಂದ ಸಾಕ್ಷಾತ ಭಗವಂತನು ಸಹಾಯ ಮಾಡುತ್ತಿದ್ದಾನೆ, ಎನ್ನುವ ಅರಿವು ಕೇವಲ ಭಾವವಿರುವ ಸಾಧಕರಿಗೆ ಮತ್ತು ಸಂತರಿಗೆ ಮಾತ್ರ ಆಗಲಿದೆ.

೩. ಭೀಕರ ಆಪತ್ಕಾಲದ ವ್ಯಾಪ್ತಿ

ಈ ಭೀಕರ ಆಪತ್ಕಾಲವು ಕೇವಲ ಪೃಥ್ವಿಯ ಮೇಲಷ್ಟೇ ಇರದೇ ಬ್ರಹ್ಮಾಂಡದಲ್ಲಿರುವ ವಿವಿಧ ಗ್ರಹಗಳ ಮೇಲೆ ಮತ್ತು ಸಪ್ತಲೋಕಗಳಲ್ಲಿರುವ ಕೆಲವು ಲೋಕಗಳ ಮೇಲೆಯೂ ಇರುವುದು. ಆದುದರಿಂದ ಬ್ರಹ್ಮಾಂಡದಲ್ಲಿನ ವಿವಿಧ ಗ್ರಹಗಳು ಮತ್ತು ಲೋಕಗಳಲ್ಲಿರವ ವಿವಿಧ ಸಾತ್ತ್ವಿಕ ಜೀವಗಳ ರಕ್ಷಣೆಯನ್ನು ಭಗವಂತನು ವಿವಿಧ ರೀತಿಯಲ್ಲಿ ಮಾಡುವವನಿದ್ದಾನೆ; ಏಕೆಂದರೆ ಸತ್ತ್ವಪ್ರಧಾನ ಜೀವಗಳ ಸೆಳೆತವು ಮಾಯೆಯ ಕಡೆಗಿರದೇ ಭಗವಂತನ ಕಡೆಗೆ ಇರುತ್ತದೆ. ಆದುದರಿಂದ ಭಗವಂತನು ಅವರ ಸಂಪೂರ್ಣ ಭಾರವನ್ನು ಹೊರುತ್ತಾನೆ.

೪. ಧರ್ಮಾಚರಣೆ ಮತ್ತು ಸಾಧನೆ ಮಾಡುವ ಸಾತ್ತ್ವಿಕ ಜೀವಗಳಿಗೆ ವಿವಿಧ ಸಾತ್ವಿಕ ಘಟಕಗಳ ಸಹಾಯ ಮತ್ತು ಸಂರಕ್ಷಣೆ ದೊರೆತು ಘೋರ ಆಪತ್ಕಾಲದಲ್ಲಿಯೂ ರಕ್ಷಣೆಯಾಗಲಿದೆ

ಈಶ್ವರನು ಅನಂತ ಕೋಟಿ ಬ್ರಹ್ಮಾಂಡನಾಯಕನಾಗಿರುವುದರಿಂದ ಅವನ ಪರಿಪಾಲನೆಯು ಅತ್ಯಂತ ಉತ್ಕೃಷ್ಟವಾಗಿದೆ. ಇದರಿಂದ ಅವನ ಈ ಗುಣಗಳ ಅನುಭೂತಿಯು ಈಶ್ವರನ ಸಗುಣ-ನಿರ್ಗುಣ ರೂಪವಾಗಿರುವ ದೇವದೇವತೆಗಳು, ಋಷಿಮುನಿಗಳು, ಸಂತರು, ಸದ್ಗುರು ಮತ್ತು ಪರಾತ್ಪರ ಗುರುಗಳ ಮಾಧ್ಯಮದಿಂದ  ಸಾತ್ತ್ವಿಕ ಜೀವಗಳಿಗೆ ಬರಲಿದೆ. ಅದೇ ರೀತಿ ಕಠಿಣ ಧರ್ಮಾಚರಣೆ ಮತ್ತು ಉತ್ತಮ ಸಾಧನೆ ಮಾಡುವ ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ರಾಜಕಾರಣಿಗಳಲ್ಲಿಯೂ ಈಶ್ವರನ ‘ಉತ್ಕೃಷ್ಟ ಪರಿಪಾಲನೆ ಮಾಡುವ, ದೈವೀ ಗುಣಗಳು ಪ್ರಜೆಗಳಿಗೆ ಅನುಭವಿಸಲು ಸಿಗಲಿದೆ. ಇದರಿಂದ ಧರ್ಮಾಚರಣೆ ಮತ್ತು ಸಾಧನೆ ಮಾಡುವ ಸಾತ್ತ್ವಿಕ ಜೀವಗಳಿಗೆ ಘೋರ ಆಪತ್ಕಾಲದಲ್ಲಿಯೂ ರಕ್ಷಣೆಯಾಗಲಿದೆ.

ಈಶ್ವರನ ವಿವಿಧ ರೂಪಗಳಿಂದ ವಿವಿಧ ಸ್ತರದಲ್ಲಿ ಸಹಾಯ ಲಭಿಸಲು ಎಲ್ಲರೂ ಇಂದಿನಿಂದ ಅಲ್ಲ; ಈ ಕ್ಷಣದಿಂದಲೇ ಸಾಧನೆಗೆ ಪ್ರಾರಂಭಿಸಬೇಕು ಮತ್ತು ಯಾರು ಮೊದಲಿನಿಂದಲೂ ಸಾಧನೆಯನ್ನು ಮಾಡುತ್ತಿರುವರೋ, ಅವರು  ತಮ್ಮ ಸಾಧನೆಯನ್ನು ಗುಣಾತ್ಮಕ ದೃಷ್ಟಿಯಿಂದ ಹೆಚ್ಚಿಸಲು ಪ್ರಯತ್ನಿಸಬೇಕು. – ಕು. ಮಧುರಾ ಭೊಸಲೆ (ಸೂಕ್ಷ್ಮದಲ್ಲಿ ಲಭಿಸಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೩.೨೦೨೦)