ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಸಾಧಕರೇ, ಸಾಧನೆಯಲ್ಲಿ ಅಡಚಣೆಗಳನ್ನುಂಟು ಮಾಡುವ ವಿಚಾರಗಳು ಮನಸ್ಸಿನಲ್ಲಿ ಬರುತ್ತಿದ್ದಲ್ಲಿ, ಅದಕ್ಕೆ ಸ್ವಯಂಸೂಚನೆಯನ್ನು ನೀಡಿ ಮತ್ತು ಸಾಧನೆಯ ಪ್ರಯತ್ನವಾಗದಿದ್ದರೆ ‘ಮನಸ್ಸಿಗೆ ಅರಿವಾಗಬೇಕು’, ಅಂತಹ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಿರಿ !

‘ಕೆಲವು ಸಾಧಕರ ಮನಸ್ಸಿನಲ್ಲಿ, ‘ನಾನು ಇಷ್ಟೊಂದು ಪ್ರಯತ್ನ ಮಾಡಿದರೂ ಸಾಧನೆಯಲ್ಲಿ ನನ್ನ ಪ್ರಗತಿಯಾಗುತ್ತಿಲ್ಲ, ಎಂಬ ವಿಚಾರ ಬರುತ್ತದೆ, ಅದರ ಕಾರಣವೇನು, ಎಂಬುದನ್ನು ನಾವು ತಿಳಿದುಕೊಳ್ಳಬೇಕು.’ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ‘ನಮ್ಮ ಪ್ರಗತಿಯಾಗುವುದಿಲ್ಲ’, ಎಂದೆನಿಸುತ್ತದೆ. ಸಂತರು ಹೇಳಿದ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು, ಇದೇ ಅವರ ಸಾಧನೆಯಾಗಿದೆ. ಉಪಾಯಗಳನ್ನು ಮಾಡುವುದರಿಂದ ಅವರ ಸಾಧನೆಯು ಆಗುತ್ತಲೇ ಇರುತ್ತದೆ; ಆದರೆ ಅವರ ಜನ್ಮಜನ್ಮಾಂತರದ ತೊಂದರೆಗಳು ಕಡಿಮೆಯಾಗಲು ಅವರು ಮಾಡಿದ ಸಾಧನೆಯು ಖರ್ಚಾಗುತ್ತಿರುತ್ತದೆ.

ಸಾಧನೆಯಲ್ಲಿ ಅಡಚಡೆಗಳನ್ನುಂಟು ಮಾಡುವ ವಿಚಾರಗಳು ಮನಸ್ಸಿನಲ್ಲಿ ಬರುತ್ತಿದ್ದಲ್ಲಿ, ಅದಕ್ಕೆ ನಾವು ಸ್ವಯಂಸೂಚನೆಯನ್ನು ಕೊಡಬೇಕು. ನಾವು ಸ್ವಯಂಸೂಚನೆಗಳನ್ನು ನೀಡದಿದ್ದರೆ, ಆ ವಿಚಾರಗಳಿಂದ ನಮ್ಮ ಮೇಲಾದ ಪರಿಣಾಮಗಳು ನಾಶವಾಗಲು ದಿನವಿಡಿ ಮಾಡಿದ ಸಾಧನೆಯು ಖರ್ಚಾಗುತ್ತದೆ. ಸ್ವಯಂಸೂಚನೆಯನ್ನು ತೆಗೆದುಕೊಂಡರೆ, ಮನಸ್ಸಿಗೆ ‘ಟಾನಿಕ್’ ಸಿಗುತ್ತದೆ ಮತ್ತು ನಾವು ಒಳ್ಳೆಯ ರೀತಿಯಿಂದ ಸಾಧನೆಯನ್ನು ಮಾಡಬಹುದು. ಅದಕ್ಕಾಗಿ ನಾವೇ ನಮ್ಮ ಮನಸ್ಸಿನ ವರದಿಯನ್ನು ತೆಗೆದುಕೊಳ್ಳಬೇಕು ಮತ್ತು ನಮ್ಮಿಂದ ಸಾದನೆಯ ಪ್ರಯತ್ನಗಳಾಗದಿದ್ದರೆ ಸ್ವತಃ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು, ಉದಾ. ಸ್ವಯಂಸೂಚನೆಯ ಸತ್ರಗಳು ಆಯೋಜನೆಗನುಸಾರ ರಾತ್ರಿಯೊಳಗೆ ಪೂರ್ಣವಾಗದಿದ್ದರೆ, ಅಂತಹ ಪ್ರಸಂಗದಲ್ಲಿ ದೇಹಕ್ಕೆ ತೊಂದರೆಯಾಗುವಂತಹ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು. ದೇಹಕ್ಕೆ ತೊಂದರೆಯಾದರೆ, ಮನಸ್ಸು ತನ್ನಿಂದತಾನೇ ಸ್ವಯಂಸೂಚನಾ ಸತ್ರಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನ ಹರಿಸುತ್ತದೆ.’

ಸಾಧಕರೇ, ಆಗುವುದೆಲ್ಲ ಒಳ್ಳೆಯದಕ್ಕಾಗಿ ಮತ್ತು ನಾವು ಮನಸ್ಸಿಗೆ ಸತತವಾಗಿ ದೇವರ ಮೇಲೆ ಅವಲಂಬಿಸಿರಲು ಕಲಿಸಿದರೆ, ಅದರಿಂದ ನಮ್ಮ ಸಾಧನೆಯಾಗುತ್ತದೆ !

‘ನನ್ನತ್ತ ಯಾರು ಗಮನ ಹರಿಸುವುದಿಲ್ಲ, ಎಂಬ ವಿಚಾರವನ್ನು ಮಾಡಬಾರದು. ನಾವು ಮಾಡುತ್ತಿರುವ ಪ್ರತಿಯೊಂದು ವಿಷಯವನ್ನು ದೇವರು ನೋಂದಣಿ ಮಾಡುತ್ತಿರುತ್ತಾನೆ. ನಮಗೆ ಹೀಗೆ ಅನಿಸುತ್ತದೆ ಅಂದರೆ ನಮ್ಮ ಮನಸ್ಸಿನಲ್ಲಿ ಅಸುರಕ್ಷತೆಯ ಭಾವನೆಯಿದೆ ಎಂದರ್ಥವಾಗಿದೆ. ನಮ್ಮ ಸಂದರ್ಭದಲ್ಲಿ ಘಟಿಸುವುದೆಲ್ಲವೂ ಒಳ್ಳೆಯದಕ್ಕಾಗಿಯೇ ಘಟಿಸುತ್ತದೆ. ದೇವರು ಯಾವತ್ತೂ ತಪ್ಪು ಮಾಡುವುದಿಲ್ಲ. ‘ದೇವರು ಮತ್ತು ನಾನು, ಇದರತ್ತವೇ ನಾವು ಗಮನ ಹರಿಸಬೇಕು. ‘ಯಾರು ಹೇಗೆ ವರ್ತಿಸುತ್ತಾರೆ ?, ಎಂಬುದರತ್ತ ಗಮನಹರಿಸದೇ ನಾವು ನಮ್ಮ ಸತ್ಸೇವೆ ಮತ್ತು ಸಾಧನೆಯನ್ನು ಮಾಡುತ್ತಿರಬೇಕು. ಮನಸ್ಸಿಗಾಗುವ ಅಸುರಕ್ಷತೆಯು ಕಡಿಮೆಯಾಗಲು ಅದಕ್ಕೆ ಸ್ವಯಂಸೂಚನೆಯನ್ನು ನೀಡಬೇಕು. ಮನಸ್ಸಿಗೆ ಸತತವಾಗಿ ದೇವರ ಬಳಿಗೆ ಇರಲು ಕಲಿಸಬೇಕು. ದೇವರನ್ನೇ ಆಧರಿಸಿರುವುದರಿಂದ, ನಮ್ಮ ಸಾಧನೆಯಾಗುತ್ತದೆ. – (ಸದ್ಗುರು) ಸೌ. ಅಂಜಲಿ ಗಾಡಗೀಳ

ಸನಾತನದ ಪ್ರತಿಯೊಬ್ಬ ಸಾಧಕನ ಜೀವನವೆಂದರೆ ಅನುಭೂತಿಯೇ ಆಗಿದೆ !

‘ಸನಾತನ ಸಂಸ್ಥೆಯ ಮಾಧ್ಯಮದಿಂದ ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯನ್ನು ಮಾಡುವ ಸಾಧಕರ ಜೀವನವೆಂದರೆ ಒಂದು ಅನುಭೂತಿಯೇ ಆಗಿದೆ. ಸಾಧನಾ ಪ್ರವಾಸದಲ್ಲಿ ಪ್ರತಿಯೊಬ್ಬ ಸಾಧಕನಿಗೆ ಆತನ ಕ್ಷಮತೆಗನುಸಾರ ಶ್ರೀ ಗುರುಗಳು ಅಪಾರ ಜ್ಞಾನವನ್ನು ನೀಡಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಅನುಭವ ಹಾಗೂ ಅನುಭೂತಿಗಳ ಮೂಲಕ ಪರಿಪೂರ್ಣರಾಗುವಂತಹ ಮಹಾಮಂತ್ರವನ್ನೇ ನೀಡಿದ್ದಾರೆ. ಪ್ರತಿಯೊಬ್ಬ ಸಾಧಕನ ಅವನ ಜೀವನದಲ್ಲಿನ ಸಾಧನಾ ಪ್ರವಾಸದಲ್ಲಿನ ಅನುಭೂತಿಗಳದ್ದೇ ಒಂದು ಗ್ರಂಥ ಆಗಬಹುದು. (‘ಪ್ರತ್ಯಕ್ಷದಲ್ಲಿ ಹಾಗೆಯೇ ಇದೆ.’ – ಪರಾತ್ಪರ ಗುರು ಡಾ. ಆಠವಲೆ) ಕಲಿಯುಗದಲ್ಲಿ ತನು, ಮನ ಹಾಗೂ ಧನದಿಂದ ಸರ್ವಸ್ವದ ತ್ಯಾಗ ಮಾಡಿ ಆನಂದದಿಂದ ಈಶ್ವರಪ್ರಾಪ್ತಿಗಾಗಿ ಸಂಪೂರ್ಣ ಜೀವನವನ್ನು ನೀಡುವ ಹಾಗೂ ರಾಷ್ಟ್ರ ಮತ್ತು ಧರ್ಮ ಇವುಗಳ ಅಭಿವೃದ್ಧಿಗಾಗಿ ನಿರಪೇಕ್ಷ ಭಾವದಿಂದ ಅಹೋರಾತ್ರಿ ಶ್ರಮಿಸುತ್ತಿರುವ ಸನಾತನದ ಸಾಧಕರಿಗೆ ತ್ರಿವಾರ ಪ್ರಣಾಮಗಳು ! – (ಸದ್ಗುರು) ಸೌ. ಅಂಜಲಿ ಗಾಡಗೀಳ (ಸಂಗ್ರಹಕಾರರು : ಶ್ರೀ. ದಿವಾಕರ ಆಗಾವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ.)

(ಈ ಲೇಖನವು ಈ ಮೊದಲು ಬರೆದಿರುವುದರಿಂದ ಇಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಎಂಬ ಉಲ್ಲೇಖವಿದೆ.- ಸಂಕಲನಕಾರರು)