ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಪೂ. ರಮಾನಂದ ಗೌಡ

ಕೊರೋನಾದಂತಹ ಸಾಂಕ್ರಾಮಿಕ ರೋಗವಾಗಿರಬಹುದು ಅಥವಾ ಇತರ ನೈಸರ್ಗಿಕ ವಿಕೋಪವಾಗಲಿ ಪ್ರತಿಯೊಬ್ಬರೂ ತಮ್ಮದೇ ಪರಿಯಲ್ಲಿ ಅದರ ಕಾರಣಗಳನ್ನು ಹುಡುಕುತ್ತಿದ್ದಾರೆ. ವೈಜ್ಞಾನಿಗಳಾಗಿದ್ದರೆ ‘ಈ ವಿಪತ್ತು ಏಕೆ ಬಂದಿತು ?, ‘ಅದರ ಪರಿಣಾಮವೇನು ? ಎಂದು ತರ್ಕ ಮಾಡುವನು. ಪತ್ರಕರ್ತರು ತಮ್ಮ ತರ್ಕ ಮಂಡಿಸುತ್ತಾರೆ; ಆದರೆ ವಿಪತ್ತಿಗೆ ಆಧ್ಯಾತ್ಮಿಕ ಕಾರಣಗಳೇನು (ದೃಷ್ಟಿಕೋನ) ಎಂಬುದನ್ನು ತಿಳಿಯಬೇಕಿದೆ; ಏಕೆಂದರೆ ಆಧ್ಯಾತ್ಮಿಕ ದೃಷ್ಟಿಕೋನವಿಲ್ಲದೆ, ನೀವು ವಿಪತ್ತುಗಳ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳಲಾಗದು.

ಆಪತ್ತುಗಳ ಕಾರಣವು ಮನುಷ್ಯನ ಸ್ವಭಾವದಲ್ಲಿಯೇ ಅಡಗಿದೆ !

ವಿಶ್ವಕ್ಕಾಗಿ ನಾವು ಏನು ಮಾಡಬಹುದು, ಎಂದು ನಮಗೆ ಗೊತ್ತಿಲ್ಲ. ಆದರೆ ನಮ್ಮ ಆಚರಣೆಯಿಂದ ವಿಶ್ವದ ಸಮತೋಲನ ಹಾಳಾಗದಂತೆ ನಾವು ಪ್ರಯತ್ನಿಸಬಹುದು. ಪ್ರತಿಯೊಬ್ಬರ ಇಂತಹ ಪ್ರಯತ್ನವು ಸಮಾಜ ಮತ್ತು ಮುಂದೆ ದೇಶವನ್ನು ಸುಧಾರಿಸಬಹುದು. ಸ್ವಚ್ಛತಾ ಅಭಿಯಾನಕ್ಕಾಗಿ ಸಂಪೂರ್ಣ ದೇಶದಲ್ಲಿ ಹೇಗೆ ಪ್ರಯತ್ನ ಮಾಡಲಾಯಿತೋ ಅದರಂತೆ ಇದು ಸಹ ಆಗಲಿದೆ. ಇಂದು ವಿಶ್ವದ ಆಪತ್ತುಗಳಿಗೆ ನಮ್ಮಿಂದಾದ ಏನಾದರೊಂದು ತಪ್ಪು ಕೃತ್ಯದ ಪರಿಣಾಮವೇ ಕಾರಣವಾಗಿದೆ. ಜನರು ಪೃಥ್ವಿಯಲ್ಲಿ ಲಭ್ಯವಿರುವ ಸಾಧನಸಾಮಾಗ್ರಿಗಳನ್ನು ಹಿಂದೆ ಮುಂದೆ ಯೋಚಿಸದೇ ದುರುಪಯೋಗ ಮಾಡುತ್ತಿದ್ದಾರೆ. ಬಹಳ ಮಂದಿಗೆ ಇದು ಗೊತ್ತಿದ್ದರೂ ಅವರು ಈ ತಪ್ಪು ಕೃತ್ಯಗಳನ್ನು ಮಾಡುತ್ತಾರೆ; ಏಕೆಂದರೆ ಅವರ ಅಹಂಕಾರ ಮತ್ತು ಸ್ವಾರ್ಥವು ಅವರಿಗೆ ಸಮಾಜದ ವಿಚಾರವನ್ನು ಮಾಡಲು ಬಿಡುತ್ತಿಲ್ಲ. ತೀವ್ರ ಅಹಂಕಾರ ಮತ್ತು ಸ್ವಾರ್ಥಿ ವೃತ್ತಿಯಿಂದ ಅವರು ಪ್ರಕೃತಿ, ಮನುಷ್ಯ ಹಾಗೂ ಇತರ ಜೀವಗಳಿಗೆ ಕಷ್ಟವನ್ನು ನೀಡಿ ಹೆಚ್ಚು ಹೆಚ್ಚು ಸಮಯವನ್ನು ತಮಗಾಗಿ ಸುಖ ಸಂಗ್ರಹಿಸಲಿಕ್ಕಾಗಿ ವ್ಯಸ್ತರಾಗಿದ್ದಾರೆ. ಸರಕಾರವು ಎಷ್ಟು ಪ್ರಯತ್ನ ಮಾಡಿದರೂ, ಎಷ್ಟು ಕಾನೂನು ಮಾಡಿದರೂ ವ್ಯಕ್ತಿ ಸ್ವಯಂ ತನ್ನ ಸಮಾಜಋಣವನ್ನು ತೀರಿಸುವ ವರೆಗೆ ಪರಿವರ್ತನೆ ಅಸಾಧ್ಯವಾಗಿದೆ. ಸಮಾಜದಲ್ಲಿ ಪ್ರಕೃತಿ ಮತ್ತು ಸಮಾಜದ ವಿಚಾರ ಮಾಡುವ ಜನರು ಕೇವಲ ಬೆರಳೆಣಿಕೆಯಷ್ಟೇ ಇದ್ದಾರೆ. ಅವರ ಜೀವನವನ್ನು ಇಣುಕಿ ನೋಡಿದರೆ ಅವರು ಧರ್ಮಾಚರಣಿಗಳು, ದಯಾಮಯ ಸ್ವಭಾವದವರು, ಎಲ್ಲರಲ್ಲಿ ಪ್ರೇಮವನ್ನು ಇಡುವಂತಹವರಾಗಿದ್ದಾರೆ. ಅವರ ವ್ಯವಹಾರದಲ್ಲಿ ವ್ಯಾಪಕತೆಯಿದೆ. ಅವರ ಆಚರಣೆಯು ನಮ್ಮೆಲ್ಲರನ್ನು ಜನಕಲ್ಯಾಣದ ಕೃತ್ಯಗಳನ್ನು ಮಾಡಲು ಪ್ರೇರಣೆ ನೀಡುತ್ತದೆ. ಅವರಿಗೆ ಅಧರ್ಮದ ಪರಿಣಾಮವೇನೆಂದು ಗೊತ್ತಿದೆ. ಕಾನೂನಿನ ದಂಡಕ್ಕಿಂತ ವ್ಯಕ್ತಿಯ ಆತ್ಮಸಂಯಮವು ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ಅವರಿಗೆ ಸರಿಯಾಗಿ ಗೊತ್ತಿದೆ. ಆತ್ಮಸಂಯಮವು ಧರ್ಮವನ್ನು ಅರಿತುಕೊಂಡು ಮತ್ತು ಅದನ್ನು ಜೀವನದಲ್ಲಿ ಅಳವಡಿಸುವುದರಿಂದಲೇ ಬರಲು ಸಾಧ್ಯವಿದೆ. – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.