ಕೊರೋನಾದ ನಂತರ ಸವಾಲುಗಳು !

ಸರಕಾರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಜನರಿಗೆ ಪತ್ರ ಬರೆದಿದ್ದಾರೆ. ಅವರು ಕಳೆದ ವರ್ಷದಲ್ಲಿ ಮಾಡಿದ ಕಾರ್ಯದ ಅವಲೋಕನವನ್ನು ನೀಡಿದ್ದಾರೆ. ಕಲಮ್ ೩೭೦, ರಾಮ ಮಂದಿರದ ನಿರ್ಮಾಣ ಇತ್ಯಾದಿಗಳು ಅದರಲ್ಲಿ ಬಹಳ ಜನಪ್ರಿಯ ವಿಷಯಗಳಾಗಿದ್ದರೂ ಈಗ ಅವರ ಆನಂದವನ್ನು ಹೇಗೆ ವ್ಯಕ್ತಪಡಿಸುವುದು ? ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ, ಎಂಬುದು ನಿಜವಾಗಿದ್ದರೂ, ಮುಂದಿನ ಸವಾಲುಗಳ ಬಗ್ಗೆ ಸಾಮಾಜಿಕ ಜಾಗೃತಿ ಇರಬೇಕು ಎಂಬುದು ಇದರ ಅರ್ಥವಲ್ಲ. ಅದಕ್ಕಾಗಿಯೇ, ನಾವೆಲ್ಲರೂ ಈಗಾಗಲೇ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ ಮುಂದೆ ಬರುವ ಬಿಕ್ಕಟ್ಟುಗಳನ್ನು ಚರ್ಚಿಸುವುದು ಮುಖ್ಯ. ಕಳೆದ ಒಂದು ವರ್ಷದಿಂದ ದೇಶವು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ದೇಶಾದ್ಯಂತ ಭಾರಿ ಮಳೆ, ಅದರಿಂದ ಉಂಟಾದ ಶತಕೋಟಿ ರೂಪಾಯಿಗಳ ಹಾನಿ, ಕೊರೋನಾದಿಂದ ಸ್ಥಗಿತಗೊಂಡ ಕೈಗಾರಿಕೆಗಳು ಮತ್ತು ವ್ಯವಹಾರಗಳು ಮತ್ತು ದೇಶದ ಕೆಲವು ಭಾಗಗಳಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಮಿಡತೆಗಳ ಬಿಕ್ಕಟ್ಟು ಇವುಗಳನ್ನು ನೋಡಿದಾಗ ಮುಂದಿನ ಚಿತ್ರಣವು ಇನ್ನಷ್ಟು ಭೀಕರವಾಗಿದೆ.

ಆಹಾರ ಬಿಕ್ಕಟ್ಟು !

ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಕೃಷಿಗೆ ತೀವ್ರ ಹಾನಿಯಾಗಿದೆ. ಆಗಲೂ ರೈತರು, ಬೆಳೆ ಕೊಯ್ಲು ಮಾಡಲು ಕೆಲವು ಪ್ರಯತ್ನಗಳನ್ನು ಮಾಡಿದ್ದರು ಮತ್ತು ಸುಗ್ಗಿಯ ಸಮಯದಲ್ಲಿ ಕೊರೋನದ ಬಿಕ್ಕಟ್ಟನ್ನು ಎದುರಿಸಿದರು. ಅದು ಚೇತರಿಸಿಕೊಳ್ಳುವವರೆಗೂ, ಕೆಲವು ರಾಜ್ಯಗಳಲ್ಲಿನ ಮಿಡತೆ ಬಿಕ್ಕಟ್ಟು ಬೆಳೆ ಹಾನಿಗೆ ಕಾರಣವಾಗಿದೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ, ೪೦ ದಶಲಕ್ಷ ಮಿಡತೆಗಳ ಸಮೂಹವು ೩೫,೦೦೦ ಜನರಿಗೆ ಆಹಾರಕ್ಕಾಗಿ ಸಾಕಷ್ಟು ಧಾನ್ಯವನ್ನು ನಾಶಪಡಿಸುತ್ತದೆ. ಮಿಡತೆಗಳಿಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಕಾಲಕಾಲಕ್ಕೆ ಸೂಚನೆಗಳನ್ನು ನೀಡುತ್ತಿದೆ; ಆದರೆ ಇದು ಬಿಕ್ಕಟ್ಟಿನ ತೀವ್ರತೆಯನ್ನು ಕಡಿಮೆ ಮಾಡುವುದಿಲ್ಲ. ಕೇವಲ ಸೂಚನೆ ಮಾತ್ರ ಸಾಕಾಗದೇ ಆಡಳಿತ ಸ್ತರದಲ್ಲಿ ಸೂಕ್ತ ಕಾರ್ಯಾಚರಣೆ ಮಾಡುವುದು ಅಗತ್ಯವಾಗಿರುತ್ತದೆ. ಕೃಷಿಯ ಮೇಲಿನ ಈ ಬಿಕ್ಕಟ್ಟುಗಳ ಅಂಕಿಅಂಶವನ್ನು ನೋಡಿದರೆ, ಮುಂದಿನ ವರ್ಷ ನಾವು ಏನು ತಿನ್ನಲಿದ್ದೇವೆ ? ಅದು ಪ್ರಶ್ನೆಯಾಗಿದೆ. ರೈತರಿಗಾಗಿ ಸರಕಾರ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ; ಆದರೆ ಅವು ರೈತರಿಗೆ ತಲುಪುವುದು ಮತ್ತು ಬೆಳೆಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಮುಂದಿನ ವರ್ಷ ಆಹಾರಧಾನ್ಯದ ಕೊರತೆಯ ಭಯವನ್ನು ತಳ್ಳಿ ಹಾಕಲಾಗುವುದಿಲ್ಲ. ಇದಕ್ಕಾಗಿ ಸರಕಾರ ಆರ್ಥಿಕ ಪ್ಯಾಕೇಜ್ ಮೀರಿ ಆಹಾರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಜನಸಾಮಾನ್ಯರ ಮೇಲಿನ ಆರ್ಥಿಕ ಬಿಕ್ಕಟ್ಟು !

ಈ ತುರ್ತು ಪರಿಸ್ಥಿತಿಯಲ್ಲಿ ಅನೇಕ ಶ್ರೀಮಂತರು ನೆರವು ನೀಡಿದ್ದರೂ, ಅದು ಸಾಕಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುವ ಕಾರ್ಯ ಸುಲಭವಲ್ಲ. ಈಗ ಕಾರ್ಮಿಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುತ್ತಿರುವಾಗ, ಕೆಲವು ಶ್ರೀಮಂತರು ಕರೋನಾ ಸೋಂಕಿಗೆ ಒಳಗಾಗದಂತೆ ಕುಟುಂಬದ ೪-೫ ಸದಸ್ಯರಿಗೆ ಇಡೀ ವಿಮಾನವನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಈ ಸಮಸ್ಯೆ ಈಗಿನದಕ್ಕಷ್ಟೇ ಸೀಮಿತವಾಗಿಲ್ಲ. ಪ್ರಧಾನಮಂತ್ರಿಯವರು ಆತ್ಮನಿರ್ಭರ (ಸ್ವಾವಲಂಬನೆಯ) ಸಂದೇಶವನ್ನು ತಿಳಿಸಿದಾಗ ಹಣದುಬ್ಬರದ ಕಾರಣದಿಂದಾಗಿ ದಿನಕ್ಕೆ ಎರಡು ಬಾರಿ ಊಟತಿಂಡಿಗೆ ಗತಿ ಇಲ್ಲದ  ಕವಲುದಾರಿಯಲ್ಲಿರುವ ಬಡವರಿಗೆ ನಿಖರವಾಗಿ ಏನು ಮಾಡಬೇಕೆಂದು ತಿಳಿದಿಲ್ಲ. ಹಣದುಬ್ಬರವು ಉತ್ತುಂಗಕ್ಕೇರಿದೆ ಎಂಬುದು ನಿಜ. ಆದರೆ ಅದನ್ನು ತಡೆಯಲು ಯಾವುದೇ ಕ್ರಮಗಳಿಲ್ಲ ಎಂದೇನಿಲ್ಲ. ಕೊರೋನಾ ಅವಧಿಯಲ್ಲಿ, ಮಹಾರಾಷ್ಟ್ರದ ಜಳಗಾವ್‌ನ ಛಲವಾದಿ ರೈತನೊಬ್ಬ ತನ್ನ ಜಮೀನಿನಲ್ಲಿ ಬೆಳೆದ ಧಾನ್ಯಗಳನ್ನು ಮನೆಮನೆಗಳಿಗೆ ಮಾರುತ್ತಿದ್ದನು. ನಿತ್ಯ ದಲ್ಲಾಲರ ಮೂಲಕ ಮಾರುಕಟ್ಟೆಗೆ ಹೋಗುವುದಕ್ಕಿಂತ ಅವರು ಈ ರೀತಿ ಹೆಚ್ಚು ಶ್ರಮಿಸಿದರು ಎಂಬುದು ನಿಜ. ಆದರೆ ಅವರು ದಲ್ಲಾಲರಿಗೆ ಪಾವತಿಸಬೇಕಾದ ಕಮಿಶನ್‌ನನ್ನು ಉಳಿಸಿದರು ಮತ್ತು ಕೊನೆಯಲ್ಲಿ ಅವರು ಆರ್ಥಿಕ ಲಾಭವನ್ನುಗಳಿಸಿದರು. ಈ ಘಟನೆಯು ಒಂದು ಉದಾಹರಣೆಯಾಗಿದ್ದರೂ, ಇದು ವಿಚಾರ ಮಾಡುವಂತಿದೆ.

ಮಧ್ಯವರ್ತಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲು, ಉತ್ಪನ್ನ ಸುಂಕವನ್ನು ಕಡಿಮೆ ಮಾಡಲು, ಎಲ್ಲಾ ಹಂತಗಳಲ್ಲಿ ಜಾಹೀರಾತುಗಳು, ಮನರಂಜನೆ ಮತ್ತು ಇತರ ಅನಿವಾರ್ಯ ವೆಚ್ಚಗಳನ್ನು ತಪ್ಪಿಸಲು, ಸ್ಥಳೀಯರಿಂದ ಹೆಚ್ಚಿನ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು, ಸ್ವದೇಶಿಗೆ ಪ್ರೋತ್ಸಾಹಿಸಲು ಉದ್ಯಮಿಗಳಿಗೆ ಮನವಿ ಮಾಡಬಹುದು. ಆರ್ಥಿಕವಾಗಿ ಚೇತರಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ, ಆದರೆ ಅನೇಕರಿಗೆ ಇದು ಸಣ್ಣದಾಗಿ ತೋರುತ್ತದೆ; ಆದಾಗ್ಯೂ, ದೊಡ್ಡ ಪರಿಣಾಮ ಬೀರುವ ಮೂಲಗಳ ಮೇಲೆ ಸರಕಾರಿ ಮಟ್ಟದಲ್ಲಿ ಪ್ರಯತ್ನಗಳು ನಡೆಯಬೇಕು.

ನಿರುದ್ಯೋಗ ಮತ್ತು ಕಾರ್ಮಿಕ ಕೊರತೆ !

ಕರೋನಾ ನಾಗರೀಕರಣವನ್ನು ಹಾಳುಗೆಡವಿತು. ಇಂದು, ಉದ್ಯೋಗದ ಹುಡುಕಾಟದಲ್ಲಿ ನಗರಗಳಲ್ಲಿ ಆಶ್ರಯ ಪಡೆದವರು ದಿಕ್ಕೆಟ್ಟಿದ್ದಾರೆ. ಕಾರ್ಮಿಕರು ಗ್ರಾಮಕ್ಕೆ ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಈಗ ನಗರದ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಇದೆ. ಮತ್ತೊಂದೆಡೆ, ಗ್ರಾಮದಲ್ಲಿ ಉದ್ಯೋಗವಿಲ್ಲದ ಕಾರಣ ನಗರಕ್ಕೆ ಬಂದ ಜನರು ಪುನಃ ಹಳ್ಳಿಗೆ ಹೋಗಿ ಏನು ತಿನ್ನುವುದು ? ಅವರಿಗೆ ಅಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು, ನಗರಗಳಲ್ಲಿ ಕಾರ್ಮಿಕರ ಲಭ್ಯತೆಗೆ ಅನುಕೂಲಕರ ಆಡಳಿತಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಈಗ ಸರಕಾರ ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ. ಅನೇಕ ಸಂಸ್ಥೆಗಳು ಸಿಬ್ಬಂದಿಯನ್ನು ಕಡಿತಗೊಳಿಸಲು ಪ್ರಾರಂಭಿಸಿವೆ. ಆದ್ದರಿಂದ, ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ, ಅವರಿಗೆ ಸರಕಾರದ ಯೋಜನೆ ಏನು ? ಸ್ವಉದ್ಯೋಗ, ಸ್ಟಾರ್ಟಪ್‌ಗಳ ಆಯ್ಕೆಗಳು, ಆದರೆ ಅದಕ್ಕಾಗಿ ಸಮಾಜವನ್ನು ನಿರ್ಮಿಸುವ ಕಾರ್ಯವನ್ನು ಮಾಡಬೇಕಾಗಿದೆ.

ಮೊದಲ ವರ್ಷದಲ್ಲಿ ಸರಕಾರ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿತು. ತಳಮಟ್ಟಕ್ಕೆ ಹೋಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಇದೀಗ ಬಂದಿದೆ. ಮುಂದಿನ ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ದೊಡ್ಡ ಸವಾಲಾಗಿದ್ದರೂ ಅದರ ಸರಣಿಯು ದೊಡ್ಡದಾಗಿದೆ. ಸರಕಾರಿ ಸಂಸ್ಥೆಗಳಿಂದ ಉಂಟಾದ ನಷ್ಟವನ್ನು ಸರಿದೂಗಿಸುವುದು, ಜನರನ್ನು ಶಿಸ್ತುಬದ್ಧಗೊಳಿಸುವುದು ಮತ್ತು ಕರೋನಾ ಅವಧಿಯಲ್ಲಿ ಸೃಷ್ಟಿಯಾದ ಅಸುರಕ್ಷಿತತೆಯ ಭಾವನೆಯಿಂದ ಜನರು ಹೊರಬರಲು ಕೃತಿಶೀಲಗೊಳಿಸುವುದು ಬಹಳ ಮುಖ್ಯವಾಗಿದೆ. ಭಯೋತ್ಪಾದನೆ, ಕಪ್ಪು ಹಣ, ಭ್ರಷ್ಟಾಚಾರ, ಚೀನಾದ ನುಸುಳುವಿಕೆ ಮುಂತಾದ ಎಲ್ಲಾ ಬಾಹ್ಯ ಬಿಕ್ಕಟ್ಟುಗಳನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ ! ಅದಕ್ಕಾಗಿ ಸರಕಾರ ತನ್ನ ಎಲ್ಲ ಕೌಶಲ್ಯಗಳನ್ನು ಬಳಸಬೇಕು, ಅಷ್ಟೇ !