‘ಆನ್‌ಲೈನ್ ಸತ್ಸಂಗವನ್ನು ವೀಕ್ಷಿಸುವ ಜಿಜ್ಞಾಸುಗಳ ಗ್ರಂಥ ಮತ್ತು ಕಿರು ಗ್ರಂಥಗಳ ಬೇಡಿಕೆಯನ್ನು ನೋಂದಾಯಿಸಿಕೊಳ್ಳಿರಿ !

ಸಾಧಕರಿಗೆ ಸೂಚನೆ

ದೇಶಾದ್ಯಂತ ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಸಾಮಾಜಿಕ ಪ್ರಸಾರಮಾಧ್ಯಮಗಳ ಮೂಲಕ ‘ಆನ್‌ಲೈನ್ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಧರ್ಮಪ್ರಸಾರದ ಈ ಉಪಕ್ರಮಗಳಲ್ಲಿ ವಕ್ತಾರರು ಸನಾತನ ಸಂಸ್ಥೆ ಪ್ರಕಟಿಸಿರುವ ಗ್ರಂಥ ಮತ್ತು ಕಿರುಗ್ರಂಥಗಳ ಆಧಾರವನ್ನು ನೀಡಲಾಗುತ್ತದೆ. ಇದರಿಂದ ಆ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಜಿಜ್ಞಾಸುಗಳು ಗ್ರಂಥಗಳ ಮತ್ತು ಕಿರುಗ್ರಂಥಗಳ ಬೇಡಿಕೆಯನ್ನು ಸಲ್ಲಿಸುತ್ತಾರೆ. ಸದ್ಯ ದೇಶದಲ್ಲಿ ಬಹಳಷ್ಟು ಸ್ಥಳಗಳಲ್ಲಿ ಸಂಚಾರ ನಿಷೇಧವಿರುವುದರಿಂದ ಜಿಜ್ಞಾಸುಗಳ ಈ ಬೇಡಿಕೆಯನ್ನು ತಕ್ಷಣವೇ ಪೂರೈಸಲು ಸಾಧ್ಯವಾಗುತ್ತಿಲ್ಲ; ಆದರೆ ಯಾರಾದರೂ ಗ್ರಂಥಗಳಿಗೆ ಕೇಳಿದರೆ ಸಾಧಕರು ಅದನ್ನು ತಮ್ಮಲ್ಲಿ ನೋಂದಣಿ ಮಾಡಿಟ್ಟುಕೊಳ್ಳಬೇಕು. ಮುಂದೆ ಸಂಚಾರ ನಿಷೇಧ ತೆರವಾಗಿ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ಬೇಡಿಕೆಯನ್ನು ಪೂರ್ಣಗೊಳಿಸಬಹುದಾಗಿದೆ. ಬೇಡಿಕೆಯನ್ನು ನೋಂದಾಯಿಸಿಕೊಳ್ಳುವಾಗ ಸಾಧಕರು ಜಿಜ್ಞಾಸುಗಳಿಗೆ ‘ಸಂಚಾರ ನಿಷೇಧದ ಕಾರಣದಿಂದ ತಕ್ಷಣವೇ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ; ಆದರೆ ಸಂಚಾರ ನಿಷೇಧ ತೆರವಾದ ಬಳಿಕ ಆದ್ಯತೆಯ ಮೇರೆಗೆ ಬೇಡಿಕೆಯನ್ನು ಪೂರೈಸುತ್ತೇವೆ, ಎಂದು ಅವರಿಗೆ ತಿಳಿಸಿ ಹೇಳಬೇಕು. ಅಲ್ಲದೇ ಆ ಗ್ರಂಥದ ಮೌಲ್ಯವನ್ನು ಕೂಡ ತಿಳಿಸಬೇಕು. ಕಾಲಾಂತರದಲ್ಲಿ ಅವರಿಗೆ ಗ್ರಂಥವನ್ನು ತಲುಪಿಸಿದ ಬಳಿಕ ಅವರಿಂದ ಅದರ ಅರ್ಪಣೆ ಮೌಲ್ಯವನ್ನು ಪಡೆದುಕೊಳ್ಳಬೇಕು.
ಕೆಲವು ಜಿಲ್ಲೆಯವರು ಈ ರೀತಿ ಗ್ರಂಥಗಳ ಮತ್ತು ಕಿರುಗ್ರಂಥಗಳ ಬೇಡಿಕೆಯನ್ನು ನೋಂದಣಿ ಮಾಡಿಕೊಳ್ಳಲು ಪ್ರಾರಂಭಿಸಿದ ಬಳಿಕ ಜಿಜ್ಞಾಸುಗಳಿಂದ ಉತ್ಸಾಹದ ಪ್ರತಿಸ್ಪಂದನೆ ದೊರೆಯುತ್ತಿದೆ. ಸಾವಿರಾರು ಸಂಖ್ಯೆಗಳಲ್ಲಿ ಜಿಜ್ಞಾಸುಗಳಿಂದ ಬೇಡಿಕೆ ಬರುತ್ತಿದೆ. ಆದುದರಿಂದ ಎಲ್ಲ ಜಿಲ್ಲೆಗಳ ಸಾಧಕರು ಈ ದೃಷ್ಟಿಯಿಂದ ಪ್ರಯತ್ನಿಸಿ ಸಂಚಾರ ನಿಷೇಧ ಕಾಲದಲ್ಲಿಯೂ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು.