ಮಾಸ್ಕ್ ವಿತರಣೆಯ ಹೆಸರಿನಲ್ಲಿ ಲೂಟಿ ಮಾಡುವ ಅಪರಿಚಿತ ವ್ಯಕ್ತಿಗಳಿಂದ ಎಚ್ಚರದಿಂದಿರಿ !
ಗೋವಾದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಮನೆಮನೆಗೆ ಹೋಗಿ ಮಾಸ್ಕ್ ವಿತರಿಸುತ್ತಿದ್ದಾರೆ. ಈ ವ್ಯಕ್ತಿಗಳು ‘ಸ್ಥಳೀಯ ಸಂಘ-ಸಂಸ್ಥೆಗಳಿಂದ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳುತ್ತಾರೆ ಮತ್ತು ಮಾಸ್ಕ್ ನೀಡಿ ಅದು ಸರಿಯಾಗಿ ಇದೆಯೋ ಇಲ್ಲವೋ ಎಂದು ನೋಡಲು ಅದನ್ನು ಹಾಕಿಕೊಳ್ಳಲು ಹೇಳುತ್ತಾರೆ. ಇದರಲ್ಲಿ ಅಪಾಯಕಾರಿ ವಿಷಯವೆಂದರೆ, ಈ ಮಾಸ್ಕ್‌ಗಳಿಗೆ ಒಂದು ರೀತಿಯ ರಾಸಾಯನಿಕವನ್ನು ಹಚ್ಚಿರುತ್ತಾರೆ. ಇದರಿಂದ ಈ ಮಾಸ್ಕ್ ಧರಿಸಿದ ಬಳಿಕ ಆ ರಾಸಾಯನಿಕದ ವಾಸನೆಯಿಂದ ಆ ವ್ಯಕ್ತಿ ಪ್ರಜ್ಞೆ ತಪ್ಪುತ್ತಾನೆ ಮತ್ತು ಇದರ ದುರುಪಯೋಗವನ್ನು ಪಡೆದುಕೊಂಡು ಆ ಅಪರಿಚಿತ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿರುವ ವ್ಯಕ್ತಿಯಿಂದ ಹಣ ಮತ್ತು ಇತರ ಬೆಲೆ ಬಾಳುವ ಸಾಮಗ್ರಿಗಳನ್ನು ಲೂಟಿ ಮಾಡಿ ಓಡಿ ಹೋಗುತ್ತಾನೆ. ಆದುದರಿಂದ ಯಾವುದೇ ಅಪರಿಚಿತ ವ್ಯಕ್ತಿಯಿಂದ ಮಾಸ್ಕ್ ಸ್ವೀಕರಿಸಬಾರದು, ಎಂದು ಗೋವಾ ಪೊಲೀಸರು ನಾಗರಿಕರಿಗೆ ಸೂಚನೆ ನೀಡಿದ್ದಾರೆ.
ಸದ್ಯದ ಆಪತ್ಕಾಲದ ಪರಿಸ್ಥಿತಿಯ ದುರುಪಯೋಗವನ್ನು ಪಡೆದುಕೊಂಡು ಕೆಲವು ಸಮಾಜಕಂಟಕರು ಹಣಗಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಇಂತಹ ಅಪರಾಧಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಗೋವಾ ರಾಜ್ಯದಂತೆಯೇ ಇತರ ರಾಜ್ಯಗಳಲ್ಲಿಯೂ ಇದೇ ರೀತಿ ಘಟಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲೆಡೆಯ ಸಾಧಕರು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಬೇಕು. ಎಲ್ಲಿಯಾದರೂ ಇಂತಹ ಪ್ರಕರಣಗಳು ಘಟಿಸುತ್ತಿರುವುದು ಕಂಡು ಬಂದರೆ ಆ ವಿಷಯವನ್ನು ತಕ್ಷಣವೇ ಜವಾಬ್ದಾರ ಸಾಧಕರಿಗೆ ತಿಳಿಸಬೇಕು. ಹಾಗೆಯೇ ಇದರ ಮಾಹಿತಿಯನ್ನು ಹತ್ತಿರದ ‘ಸನಾತನ ಪ್ರಭಾತದ ಕಾರ್ಯಾಲಯಕ್ಕೆ ತಿಳಿಸಬೇಕು.