ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಮಾಯೆಯ ಶಿಕ್ಷಣವು ತನು, ಮನ ಧನವನ್ನು ಉಪಯೋಗಿಸಿ ಹಣ ಸಂಪಾದಿಸುವುದನ್ನು ಕಲಿಸುತ್ತದೆ, ಆದರೆ ಸಾಧನೆಯು ತನು, ಮನ ಧನದ ತ್ಯಾಗ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದನ್ನು ಕಲಿಸುತ್ತದೆ.

ವ್ಯವಹಾರದಲ್ಲಿ ಹೆಚ್ಚೆಚ್ಚು ಸಂಪಾದಿಸುವುದಿರುತ್ತದೆ, ಆದರೆ ಸಾಧನೆಯಲ್ಲಿ ಸರ್ವಸ್ವದ ತ್ಯಾಗ ಮಾಡುವುದಿರುತ್ತದೆ. ಆದುದರಿಂದಲೇ ವ್ಯವಹಾರದಲ್ಲಿ ಮನುಷ್ಯರು ದುಃಖಿಗಳಾಗಿರುತ್ತಾರೆ ಮತ್ತು ಸಾಧಕರು ಆನಂದದಿಂದ ಇರುತ್ತಾರೆ.

ಹಿಂದೂಗಳೇ, ನಿದ್ರೆಯಲ್ಲಿರುವ ಹಿಂದೂಗಳಿಂದಲೇ ಇಡೀ ಜಗತ್ತಿನಲ್ಲಿ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿಯೂ ಹಿಂದೂಗಳಿಗಾಗಿ ದುಃಖದಾಯಕ ವಾರ್ತೆಗಳು ಹೆಚ್ಚುತ್ತಿದೆ, ಅದರಿಂದ ನಿರಾಶರಾಗದೆ ಸಾಧನೆಯನ್ನು ಮಾಡುತ್ತಲೇ ಇರಿ. ೨೦೨೩ ರಲ್ಲಿ ಹಿಂದೂಗಳಿಗಾಗಿ ಕಾಲವು ಪೂರಕವಾಗಬಹುದು ಮತ್ತು ಅದು ೧೦೦೦ ವರ್ಷ ಪೂರಕವಾಗಿರುವುದು.

ಬುದ್ಧಿಜೀವಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ ಅವರು ಚಿಕ್ಕಕ್ಕಿಂತ ಅತಿ ಚಿಕ್ಕದಾಗಿರುವ ಜೀವಿಯ ಒಂದು ಕೋಶವನ್ನು ಮಾತ್ರವಲ್ಲದೆ, ಬಾಹ್ಯ ವಸ್ತುಗಳನ್ನು ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಮಾಡಲು ಸಾಧ್ಯವಿಲ್ಲ ಮತ್ತು ತದ್ವಿರುದ್ಧ ಈಶ್ವರನು ಲಕ್ಷಗಟ್ಟಲೆ ಕೋಶವಿರುವ ಮಾನವ ಮತ್ತು ಅನಂತಕೋಟಿ ಬ್ರಹ್ಮಾಂಡವನ್ನು ನಿರ್ಮಿಸಿದ್ದಾನೆಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ದೇವರ ಕೃಪೆಯನ್ನು ಅನುಭವಿಸಿದ ನಂತರ ಸಮಾಜದಲ್ಲಿ ಯಾರಾದರೂ ಹೊಗಳಿದರೆ ಅದರ ಬೆಲೆ ಶೂನ್ಯವೆನಿಸುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ