ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡಿಟ್ಟುಕೊಳ್ಳಿ !

ಪರಾತ್ಪರ ಗುರು ಡಾ. ಆಠವಲೆ

ಆಪತ್ಕಾಲದ ದೃಷ್ಟಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ

ತಮ್ಮ ಮೇಲೆ ದೇವರ ಕೃಪಾದೃಷ್ಟಿ ಇರಲು ಮತ್ತು ತಮ್ಮ ಸುತ್ತಲೂ ಸಂರಕ್ಷಣಾ ಕವಚ ನಿರ್ಮಾಣವಾಗಲು ಮುಂದಿನ ಕೃತಿಯನ್ನು ಪ್ರತಿದಿನ ಮಾಡಬೇಕು ! : ಇದರಲ್ಲಿ ದೇವರಪೂಜೆ ಮಾಡುವುದು, ಸಾಯಂಕಾಲ ದೇವರೆದುರು ಮತ್ತು ತುಳಸಿಯ ಬಳಿ ದೀಪವನ್ನು ಹಚ್ಚಿ ದೀಪಕ್ಕೆ ನಮಸ್ಕರಿಸುವುದು, ದೀಪ ಹಚ್ಚಿದ ನಂತರ ಮನೆಯಲ್ಲಿನ ಎಲ್ಲರೂ ಒಟ್ಟಾಗಿ ಕುಳಿತು ಆರೋಗ್ಯ ಮತ್ತು ಸಂರಕ್ಷಣಾ-ಕವಚವನ್ನು ಒದಗಿಸುವ ಶ್ಲೋಕ/ಸ್ತೋತ್ರಗಳನ್ನು ಹೇಳುವುದು (ಉದಾ. ‘ಶುಭಂ ಕರೋತಿ, ರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ, ದೇವಿಕವಚ), ರಾತ್ರಿ ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ನಾಮಜಪ-ಪಟ್ಟಿಗಳ ಮಂಡಲವನ್ನು ಮಾಡುವುದು ಮತ್ತು ರಕ್ಷಣೆಗಾಗಿ ಆರಾಧ್ಯ ದೇವತೆಯನ್ನು ಪ್ರಾರ್ಥಿಸುವುದು ಮುಂತಾದ ಕೃತಿಗಳ ಸಮಾವೇಶವಿರಬೇಕು.

ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು ಆಧ್ಯಾತ್ಮಿಕ ಉಪಾಯವನ್ನು ಇಂದಿನಿಂದಲೇ ಗಾಂಭೀರ್ಯದಿಂದ ಮಾಡಬೇಕು ! : ಕೆಟ್ಟ ಶಕ್ತಿಗಳ ತೊಂದರೆ ದೂರವಾಗಲು ನಾಮಜಪ-ಉಪಾಯ, ಉಪ್ಪು-ನೀರಿನ ಉಪಾಯ ಇವುಗಳಂತಹ ಆಧ್ಯಾತ್ಮಿಕ ಉಪಾಯಗಳನ್ನು ನಿಯಮಿತವಾಗಿ ಮಾಡಬೇಕು. (ನಾಮಜಪ-ಉಪಾಯ ಮತ್ತು ಉಪ್ಪು-ನೀರಿನ ಉಪಾಯ ಇವುಗಳ ಬಗೆಗಿನ ವಿವರಣೆಯನ್ನು ‘ನಾಮಜಪ-ಉಪಾಯ (೩ ಖಂಡ) ಈ ಸನಾತನದ ಗ್ರಂಥಮಾಲಿಕೆಯಲ್ಲಿ ಕೊಡಲಾಗಿದೆ, ವಿವಿಧ ಆಧ್ಯಾತ್ಮಿಕ ಉಪಾಯಗಳ ವಿವರಣೆಯನ್ನು Sanatan.org ಮತ್ತು SSRF.org ಈ ಜಾಲತಾಣದಲ್ಲಿ ನೀಡಲಾಗಿದೆ.)

  • ಮುಂಬರುವ ಮೂರನೇ ಮಹಾಯುದ್ಧದಲ್ಲಿ ಉಪಯೋಗಿಸಲಾಗುವ ಅಣ್ವಸ್ತ್ರಗಳಿಂದ ಹರಡುವ ವಿಕಿರಣಗಳ ಮಾರಣಾಂತಿಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಅಗ್ನಿಹೋತ್ರ ಮಾಡಬೇಕು !
  •  ಮುಂಬರುವ ಕಾಲದಲ್ಲಿ ಉದ್ಭವಿಸುವ ಭೀಕರ ಆಪತ್ತುಗಳಿಂದ ಬದುಕುಳಿಯಲು ಉತ್ತಮ ಸಾಧನೆ ಮಾಡುವುದು ಮತ್ತು ಭಗವಂತನ ಭಕ್ತನಾಗದೇ ಬೇರೆ ಮಾರ್ಗವಿಲ್ಲ !
  • ಸಾಧನೆಯನ್ನು ಗಾಂಭೀರ್ಯತೆಯಿಂದ ಮಾಡಬೇಕು ! : ‘ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿ ಆಯಾ ಸಮಯಕ್ಕೆ ಪ್ರಕಟಿಸಲಾಗುವ ಸಾಧನೆಯ ವಿಷಯದ ಮಾರ್ಗದರ್ಶನದ ಅಂಶಗಳನ್ನು ಅಕ್ಷರಶಃ ಪಾಲನೆ ಮಾಡುವ ಪ್ರಯತ್ನ ಮಾಡಬೇಕು.
  •  ವ್ಯಷ್ಟಿ ಸಾಧನೆಯ ಆಯೋಜನೆ ಉತ್ತಮ ರೀತಿಯಲ್ಲಾಗಬೇಕು ! : ಸಾಧಕರು ತಮ್ಮ ವ್ಯಷ್ಟಿ ಸಾಧನೆಯ ಆಯೋಜನೆಯನ್ನು ಉತ್ತಮ ರೀತಿಯಲ್ಲಿ ಮಾಡಿ ವ್ಯಷ್ಟಿ ಸಾಧನೆಯು ನಿಯಮಿತವಾಗಿ ಆಗಲು ಪ್ರಯತ್ನಿಸಬೇಕು.

‘ಆಪತ್ಕಾಲವನ್ನು ಎದುರಿಸುವ ದೃಷ್ಟಿಯಿಂದ ಜನಜಾಗೃತಿ ಮಾಡುವುದು ಸಾಧನೆಯೇ ಆಗಿದೆ

ಮುಂಬರುವ ಆಪತ್ಕಾಲದ ಬಗ್ಗೆ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಹೇಳುವುದು, ಪ್ರಸ್ತುತ ಬರವಣಿಗೆಯನ್ನು ಕಾರ್ಯಾಲಯದ ಸಹೋದ್ಯೋಗಿಗಳಿಗೆ ಓದಲು ಕೊಡುವುದು ಮುಂತಾದ ಹಂತಗಳಲ್ಲಿ ಜನಜಾಗೃತಿ ಮಾಡುವುದು ಆವಶ್ಯಕವಿದೆ. ಹೀಗೆ ಮಾಡುವುದು ಎಂದರೆ ಸಮಾಜ ಋಣವನ್ನು ತೀರಿಸುವುದಾಗಿದೆ. ಹೀಗೆ ಮಾಡುವವರಿಂದ ಸಾಧನೆಯೂ ಆಗಲಿದೆ. – (ಪರಾತ್ಪರ ಗುರು) ಡಾ. ಆಠವಲೆ

(ಆಧಾರ : ಸನಾತನದ ಮುಂಬರುವ ಗ್ರಂಥ ‘ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವಸಿದ್ಧತೆ) (ಮುಕ್ತಾಯ)