ಕೇರಳದಲ್ಲಿಯ ಸಾಮ್ಯವಾದಿ ಸರಕಾರದ ಹೊಸ ಷಡ್ಯಂತ್ರ !

೧. ಜಾತ್ಯತೀತತೆಯನ್ನು ಕೇವಲ ಹಿಂದೂಗಳು ಪಾಲಿಸಬೇಕೇ ?

ಕೇರಳದ ಪೆರಿಯಾಮಬಲಮ್ ಗ್ರಾಮದಲ್ಲಿಯ ಶ್ರೀಕೃಷ್ಣ ಆಶ್ರಮದ ಮೇಲಿರುವ ಧ್ವನಿವರ್ಧಕದಲ್ಲಿ ನಾಮಜಪ ಹಾಕುತ್ತಾರೆ. ಇಲ್ಲಿಯ ಇಬ್ಬರು ಮತಾಂಧರು ಆಶ್ರಮಕ್ಕೆ ಬಂದು ಅದನ್ನು ನಿಲ್ಲಿಸಬೇಕೆಂದು ಎಚ್ಚರಿಸಿದರು. ‘ಇದು ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಪ್ರದೇಶವಾಗಿದೆ. ಇಲ್ಲಿ ಹೀಗೆ ನಡೆಯಲಾರದು’ ಎಂದೂ ಅವರು ಹೇಳಿದರು.

೨. ‘ಉಗ್ರವಾದಿಗಳಿಗೆ ಧರ್ಮ ಇರುತ್ತದೆ’ ಎಂಬುದನ್ನು ತಿಳಿಯಿರಿ !

ಜಿಹಾದಿ ಉಗ್ರವಾದಿ ಸಂಘಟನೆ ಅಲ್‌ಕಾಯದಾ ಇದರ ಅರಬ ದೇಶಗಳಲ್ಲಿಯ ಶಾಖೆಯು ಭಾರತೀಯ ಮುಸಲ್ಮಾನ ಮತ್ತು ಅವರಲ್ಲಿಯ ವಿದ್ವಾಂಸರಿಗೆ ‘ಮುಸಲ್ಮಾನರೊಂದಿಗೆ ಭೇದಭಾವ ಆಗುತ್ತಿರುವುದರಿಂದ ಭಾರತದ ವಿರುದ್ಧ ಶಸ್ತ್ರವನ್ನು ಕೈಗೆತ್ತಿಕೊಂಡು ಜಿಹಾದ್‌ಗಾಗಿ ಸಂಘಟಿತರಾಗಿ’, ಎಂದು ಹಿಂದೂದ್ವೇಷಿ ಕರೆ ನೀಡಿದೆ.

೩. ಕೇರಳದಲ್ಲಿಯ ಸಾಮ್ಯವಾದಿ ಸರಕಾರದ ಹೊಸ ಷಡ್ಯಂತ್ರ !

ಕೇರಳದ ಸರಕಾರೀಕರಣ ಮಾಡಲಾಗಿದ್ದ ಗುರುವಾಯೂರ ದೇವಸ್ಥಾನದ ಸ್ಥಿರ ಠೇವಣಿಗಳಿಂದ ಕೊರೋನಾದ ವಿರುದ್ಧದ ಹೋರಾಟಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಹಾಯ ನಿಧಿಗೆ ೫ ಕೋಟಿ ರೂಪಾಯಿಗಳನ್ನು ಕೊಡಲು ಗುರುವಾಯೂರ ದೇವಸ್ಥಾನ ಸಮಿತಿಯು ನಿರ್ಧರಿಸಿದೆ. ಇದಕ್ಕೆ ಅಖಿಲ ಭಾರತೀಯ ಶಬರಿಮಲೆ ಕೃತಿ ಸಮಿತಿಯು ವಿರೋಧ ವ್ಯಕ್ತಪಡಿಸಿದೆ.

೪. ಮತಾಂಧರ ಉದ್ಧಟತನವನ್ನು ತಿಳಿಯಿರಿ !

‘ಮಾಸ್ಕ್’ ಹಾಕದೇ ತಿರುಗಾಡುವ ಮತಾಂಧರಿಗೆ ‘ಮಾಸ್ಕ್’ ಹಾಕಲು ಹೇಳಿದ ಸಿಟ್ಟು ಮನಸ್ಸಿನಲ್ಲಿಟ್ಟು ಮುಂಬಯಿಯ ಚೇಂಬುರದಲ್ಲಿ ಕೀರ್ತಿಸಿಂಹ ರಾಣಾ ಮತ್ತು ಇಂದರಸಿಂಹ ರಾಣಾ ಇವರಿಬ್ಬರ ಮೇಲೆ ಮತಾಂಧರು ಹಲ್ಲೆ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಸಲೀಮ್ ಸಿದ್ಧೀಕಿ ಇವನನ್ನು ಬಂಧಿಸಿದ್ದಾರೆ.

೫. ರಾಷ್ಟ್ರನಿಷ್ಠ ಸಂಪಾದಕರ ಮೇಲಿನ ಅನ್ಯಾಯವನ್ನು ತಿಳಿಯಿರಿ !

ಜಮ್ಮೂದಲ್ಲಿಯ ‘ಭೂಮಿ ಜಿಹಾದ್’ ಮತ್ತು ಜಿಹಾದನ ವಿವಿಧ ಕೃತ್ಯಗಳನ್ನು ಬಹಿರಂಗ ಪಡಿಸಿದ್ದರಿಂದ ‘ಝೀ ನ್ಯೂಸ್’ ಈ ಹಿಂದಿ ವಾರ್ತಾವಾಹಿನಿಯ ಸಂಪಾದಕ ಸುಧೀರ ಚೌಧರಿ ಇವರ ವಿರುದ್ಧ ಕೇರಳದಲ್ಲಿ ಜಾಮಿನುರಹಿತ ಅಪರಾಧ ದಾಖಲಿಸಲಾಗಿದೆ.

೬. ಕಾಂಗ್ರೆಸ್ಸಿನ ಆಡಳಿತದಲ್ಲಿ ಮತಾಂಧರ ಹೆಚ್ಚುತ್ತಿರುವ ದೌರ್ಜನ್ಯಗಳು !

ರಾಜಸ್ಥಾನದ ಟೋಂಕದಲ್ಲಿ ಓರ್ವ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವ ನಾಸೀರ, ಸಲ್ಮಾನ, ಝಾಕೀರ ಮತ್ತು ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಸಂತ್ರಸ್ತಳ ಕುಟುಂಬವು ದೂರ ಹಿಂಪಡೆಯಬೇಕೆಂದು ಆಡಳಿತ ಮತ್ತು ಆರೋಪಿಗಳ ಸಂಬಂಧಿಕರು ಒತ್ತಡ ಹೇರುತ್ತಿದ್ದಾರೆ.

೭. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವವರ ಮೇಲೆ ಹೀಗೆ ಯಾವಾಗ ಕ್ರಮಕೈಗೊಳ್ಳಲಾಗುವುದು ?

ಚೆನ್ನೈಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಮುಸಲ್ಮಾನರ ಕುರಿತು ತಥಾಕಥಿತ ಧಾರ್ಮಿಕ ಭೇದಭಾವ ಮಾಡುವ ಜಾಹೀರಾತನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪೊಲೀಸರು ಇಲ್ಲಿಯ ಕೆ.ಟಿ. ನಗರದ ‘ಜೈನ ಬೇಕರೀಸ್ ಆಂಡ್ ಕನ್ಫೆಕ್ಶನರೀಸ್ ಎಂಬ ಬೇಕರಿಯ ಮಾಲೀಕ ಪ್ರಶಾಂತ ಇವರನ್ನು ಬಂಧಿಸಿದರು.