ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಎಲ್ಲಿ ಮುಂದೆ ಕೆಲವು ವರ್ಷಗಳಲ್ಲಿ ಏನಾಗಬಹುದು ಎಂದು ಬುದ್ಧಿಯನ್ನು ಉಪಯೋಗಿಕೊಂಡು ಅಂದಾಜಿಸಿ ಹೇಳುವ ಪಾಶ್ಚಾತ್ಯರು ಮತ್ತು ಎಲ್ಲಿ ಯುಗಾನುಯುಗದ ಸಂದರ್ಭದಲ್ಲಿ ಮಾಹಿತಿ ಹೇಳುವ ಜ್ಯೋತಿಷ್ಯಶಾಸ್ತ್ರ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಯಾರು ಏನೂ ಮಾಡುವ ಆವಶ್ಯಕತೆಯಿಲ್ಲ; ಏಕೆಂದರೆ ಕಾಲಮಹಾತ್ಮೆಗನುಸಾರ ಅದು ಆಗಲಿದೆ. ಆದರೆ ಈ ಕಾರ್ಯದಲ್ಲಿ ಯಾರು ತನು-ಮನ-ಧನದ ತ್ಯಾಗ ಮಾಡಿ ಸಹಭಾಗಿಯಾಗುವರು ಅವರ ಸಾಧನೆಯಾಗಿ ಅವರು ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತರಾಗುವರು.

ಮಸೀದಿ ಮತ್ತು ಚರ್ಚಗಳಲ್ಲಿ ಸಾಧನೆಯನ್ನು ಕಲಿಸುತ್ತಾರೆ ಮತ್ತು ಮಾಡಿಸಿಕೊಳ್ಳುತ್ತಾರೆ. ಆದರೆ ಹಿಂದೂಗಳ ಒಂದೇ ಒಂದು ದೇವಾಲಯದಲ್ಲಿ ಈರೀತಿ ಇಲ್ಲದಿರುವುದರಿಂದ ಹಿಂದೂಗಳ ಸ್ಥಿತಿ ದಯನೀಯವಾಗಿದೆ.

ಅಡಚಣೆಯ ಸಮಯದಲ್ಲಿ ಸಹಾಯವಾಗಲೆಂದು ನಾವು ಬ್ಯಾಂಕಿನಲ್ಲಿ ಹಣವನ್ನು ಇಡುತ್ತೇವೆ. ಅದರಂತೆಯೇ ಸಂಕಟದ ಸಮಯದಲ್ಲಿ ಸಹಾಯವಾಗಲೆಂದು ಸಾಧನೆಯ ರಾಶಿ ನಮ್ಮ ಸಂಗ್ರಹದಲ್ಲಿರುವುದು ಆವಶ್ಯಕವಾಗಿದೆ. ಇದರಿಂದ ಸಂಕಟದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ