(‘ಎಲ್‌ಜಿಬಿಟಿಕ್ಯೂ’ ಸಮುದಾಯ ಎಂದರೆ ಸಲಿಂಗಕಾಮಿ ಹಾಗೂ ಲಿಂಗ ಪರಿವರ್ತನೆ ಮಾಡಿಕೊಂಡ ಜನರು)

ಬರ್ಲಿನ್ (ಜರ್ಮನಿ) – ಇಲ್ಲಿ ಜುಲೈ ೨೫ ರಂದು ಆಯೋಜಿಸಲಾಗಿದ್ದ ಎಲ್‌ಜಿಬಿಟಿಕ್ಯೂ ಸಮುದಾಯದ ದೊಡ್ಡ ವಾರ್ಷಿಕ ಕಾರ್ಯಕ್ರಮ ‘ಕ್ರಿಸ್ಟೋಫರ್ ಸ್ಟ್ರೀಟ್ ಡೇ ಪ್ರೈಡ್’ ನಡೆಯುತ್ತಿದ್ದ ರಾತ್ರಿ ಸಮಯದಲ್ಲಿ ದಾಳಿ ನಡೆಸಲಾಯಿತು. ನಗರದ ಮಧ್ಯಭಾಗದಲ್ಲಿರುವ ಟಿಯರ್‌ಗಾರ್ಟನ್ ಪಾರ್ಕ್ ಬಳಿ ಇಸ್ಲಾಮಿಕ್ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ ವೇಗವಾಗಿ ಬಂದ ಬಿಳಿ ಬಣ್ಣದ ವ್ಯಾನ್ ಅನ್ನು ಜನರ ಗುಂಪಿಗೆ ಡಿಕ್ಕಿ ಹೊಡೆಸಿದನು. ಈ ದಾಳಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, ೧೬ ಇತರರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಒಬ್ಬ ಶಂಕಿತನನ್ನು ಗುರುತಿಸಲಾಗಿದ್ದು, ಆತನಿಗೆ ಬರ್ಲಿನ್‌ನ ಇಸ್ಲಾಮಿಕ್ ಜಾಲದೊಂದಿಗೆ ಸಂಪರ್ಕವಿರುವ ಬಗ್ಗೆ ಪೊಲೀಸರ ಬಳಿ ಈ ಹಿಂದೆಯೇ ದಾಖಲೆಗಳಿವೆ.
ದೋಷಿಗಳಿಗೆ ಕಠಿಣ ಶಿಕ್ಷೆಯಾಗಲಿದೆ! – ಚಾನ್ಸೆಲರ್ (ರಾಷ್ಟ್ರಪ್ರಮುಖ) ಫ್ರೆಡರಿಕ್ ಮರ್ಜ್
ಈ ಘಟನೆಯ ನಂತರ ಜರ್ಮನಿಯ ಚಾನ್ಸೆಲರ್ ಫ್ರೆಡರಿಕ್ ಮರ್ಜ್ ಅವರು, “ನಾನು ಮತ್ತು ಗೃಹ ಸಚಿವ ಅಲೆಕ್ಸಾಂಡರ್ ಡೋಬ್ರಿಂಟ್ ಈ ದಾಳಿಯ ಸಂಪೂರ್ಣ ತನಿಖೆ ನಡೆಸಲಿದ್ದೇವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವುದನ್ನು ನಾವು ಖಚಿತಪಡಿಸುತ್ತೇವೆ” ಎಂದು ಹೇಳಿದರು.
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ನೇಪಾಳದಿಂದ ಭಾರತೀಯ ಕರೆನ್ಸಿ ಮೇಲಿನ ನಿಷೇಧ ಹಿಂಪಡೆ
ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿಯ ಬಾಂಗ್ಲಾದೇಶದ ರಹಸ್ಯ ಭೇಟಿಯಿಂದ ಚರ್ಚೆಗೆ ವೇಗ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ