ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ

ವಾಷಿಂಗ್ಟನ್ (ಅಮೆರಿಕ) – ಇರಾನ್ ಜೊತೆಗಿನ ಒಪ್ಪಂದವು ಈಗ ಮುಕ್ತಾಯಗೊಂಡಿದೆ ಎಂದು ನಾನು ಭಾವಿಸುತ್ತೇನೆ. ಅವರೊಂದಿಗೆ ಚರ್ಚೆ ನಡೆಸುವುದೆಂದರೆ ಕೇವಲ ಸಮಯ ವ್ಯರ್ಥ ಮಾಡಿದಂತೆ, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ಒಪ್ಪಂದ ಅಂತ್ಯಗೊಂಡಿರುವುದಾಗಿ ಘೋಷಿಸಿದ್ದಾರೆ.
🚨 BREAKING: "America's ceasefire agreement with Iran is OVER!" 🇺🇸❌🇮🇷
US President Donald Trump has officially announced the termination of the deal, stating: "Negotiating with them is just a waste of time."#IranUS #MiddleEastTension pic.twitter.com/xNl7E9nI3D
— Sanatan Prabhat (@SanatanPrabhat) July 8, 2026
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ಈ ಒಪ್ಪಂದದ ನಿಯಮಗಳನ್ನು ಗೌರವಿಸಲಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ. ನಾವೆಲ್ಲರೂ ಸೇರಿ ಒಂದು ಒಪ್ಪಂದ ಮಾಡಿಕೊಂಡಿದ್ದೆವು. ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಬಾರದು, ಎಂದು ಸ್ಪಷ್ಟವಾಗಿ ನಿರ್ಧರಿಸಲಾಗಿತ್ತು; ಆದರೆ ಒಪ್ಪಂದ ಆದ ನಂತರ ಅವರು ಹೊರಗಡೆ ಹೋಗಿ ಮಾಧ್ಯಮಗಳಿಗೆ ಈ ವಿಷಯದ ಬಗ್ಗೆ ನಮ್ಮ ನಡುವೆ ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಹೇಳಿದ್ದಾರೆ. ಅವರಲ್ಲಿ ಖಂಡಿತವಾಗಿಯೂ ಏನೋ ಗಂಭೀರವಾದ ಸಮಸ್ಯೆಯಿದೆ. ಅವರು ಹುಚ್ಚರಾಗಿದ್ದಾರೆ ಎಂದು ಟ್ರಂಪ್ ಟೀಕಿಸಿದರು.
ತಜ್ಞರ ಪ್ರಕಾರ, ಟ್ರಂಪ್ ಅವರ ಈ ಘೋಷಣೆಯ ನಂತರ ಕೊಲ್ಲಿ ದೇಶಗಳಲ್ಲಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು. ಈಗಾಗಲೇ ಕ್ಷಿಪಣಿ ದಾಳಿಗಳು, ಡ್ರೋನ್ ದಾಳಿಗಳು ಮತ್ತು ಕಡಲ ಭದ್ರತೆಯ ಕುರಿತು ಉದ್ವಿಗ್ನತೆ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉಭಯ ದೇಶಗಳ ನಡುವೆ ಮತ್ತೆ ಸೇನಾ ಕಾರ್ಯಾಚರಣೆ ತೀವ್ರಗೊಂಡರೆ, ಅದರ ಪರಿಣಾಮ ಜಾಗತಿಕ ಇಂಧನ ಪೂರೈಕೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೇಲೂ ಬೀರುವ ಸಾಧ್ಯತೆಯಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman