
ಲಂಡನ್/ಪ್ಯಾರಿಸ್ – ಯುರೋಪಿನ ೨೩ ದೇಶಗಳಲ್ಲಿ ಈ ವರ್ಷ ದಾಖಲೆ ಪ್ರಮಾಣದ ಬಿಸಿಗಾಳಿ (ಹೀಟ್‌ವೇವ್) ದಾಖಲಾಗಿದ್ದು, ಹಲವು ಭಾಗಗಳಲ್ಲಿ ತಾಪಮಾನವು ೪೦ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದೆ. ಇದರಿಂದಾಗಿ ಆಸ್ಪತ್ರೆಗಳು, ವಿದ್ಯುತ್ ಪೂರೈಕೆ, ಸಾರಿಗೆ ವ್ಯವಸ್ಥೆ ಮತ್ತು ಕೃಷಿಯ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ವಿವಿಧ ಅಂದಾಜುಗಳ ಪ್ರಕಾರ, ಈ ತೀವ್ರ ಬಿಸಿ ಗಾಳಿಯಿಂದಾಗಿ ೨೦ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ‘ಅಲಿಯಾಂಜ್ ರಿಸರ್ಚ್’ ಸಂಸ್ಥೆಯ ಅಂದಾಜಿನ ಪ್ರಕಾರ, ಈ ಬಿಸಿಗಾಳಿಯಿಂದಾಗಿ ಯುರೋಪಿನ ಆರ್ಥಿಕತೆಗೆ ಅಂದಾಜು ೧೧ ಲಕ್ಷ ಕೋಟಿ ರೂಪಾಯಿಗಳ ನಷ್ಟ ಉಂಟಾಗುವ ಸಾಧ್ಯತೆಯಿದೆ. ಉತ್ಪಾದನೆಯಲ್ಲಿ ಕುಸಿತ, ಬೆಳೆ ನಾಶ, ಪ್ರವಾಸೋದ್ಯಮದ ಮೇಲಿನ ಪ್ರತಿಕೂಲ ಪರಿಣಾಮ ಮತ್ತು ಮೂಲಸೌಕರ್ಯಗಳ ಮೇಲಿನ ಒತ್ತಡದಿಂದಾಗಿ ೨೦೩೦ ರ ವೇಳೆಗೆ ಈ ನಷ್ಟವು ೬೧ ಲಕ್ಷ ಕೋಟಿ ರೂಪಾಯಿಗಳವರೆಗೆ ತಲುಪುವ ಸಾಧ್ಯತೆಯಿದೆ.
ಮುಂದಿನ ವರ್ಷ ಯುರೋಪಿನ ಶೇಕಡಾ ೩೪ ರಷ್ಟು ಜನಸಂಖ್ಯೆ ನೀರಿನ ಸಮಸ್ಯೆ ಎದುರಿಸಲಿದೆ!
ಯುರೋಪಿಯನ್ ಪರಿಸರ ಸಂಸ್ಥೆಯ ಅಂದಾಜಿನ ಪ್ರಕಾರ, ಮುಂದಿನ ವರ್ಷ ಯುರೋಪಿನ ಅಂದಾಜು ಶೇಕಡಾ ೩೪ ರಷ್ಟು ಜನಸಂಖ್ಯೆಯು ನೀರಿನ ಅಭಾವದ ಸಂಕಷ್ಟವನ್ನು ಎದುರಿಸಬೇಕಾಗಬಹುದು. ದಕ್ಷಿಣ ಯುರೋಪಿನಲ್ಲಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರವಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’