ಭಾರತದ ಪ್ರಗತಿ ಮಂದಗತಿಯಲ್ಲಿ; ಆದರೆ ಅಲ್ಲಿ ಪ್ರಜಾಪ್ರಭುತ್ವ ಇರುವುದು ಒಳ್ಳೆಯ ವಿಷಯ!

  • ಚೀನಾವನ್ನು ಭಾರತಕ್ಕೆ ಹೋಲಿಸಿದ ''ಪೆಪ್ಸಿಕೋ' ಮಾಜಿ ಅಧ್ಯಕ್ಷೆ ಇಂದ್ರಾ ನೂಯಿ

  • ಚೀನಾದ ಕೇಂದ್ರೀಕೃತ ವ್ಯವಸ್ಥೆಯಿಂದಾಗಿ ಅಲ್ಲಿ ವೇಗವಾಗಿ ಪ್ರಗತಿಯಾಗಿದೆ

ಇಂದ್ರಾ ನೂಯಿ

ನವ ದೆಹಲಿ – ಚೀನಾವನ್ನು ದಾರಿದ್ರ್ಯದಿಂದ ಹೊರತಂದ ಅಲ್ಲಿನ ವ್ಯವಸ್ಥೆಯನ್ನು ನಾನು ಗೌರವಿಸುತ್ತೇನೆ. ಕೇಂದ್ರೀಕೃತ ಪದ್ಧತಿಯಲ್ಲಿ ಕೆಲಸ ಮಾಡಿದ್ದರಿಂದಲೇ ಆ ದೇಶವು ಜಾಗತಿಕ ಮಹಾಶಕ್ತಿಯಾಗಲು ಸಾಧ್ಯವಾಯಿತು. ಆದರೆ, ಭಾರತವು ಜಾಗತಿಕ ಮಹಾಶಕ್ತಿಯಾಗಲು ಇಂದಿಗೂ ಸಂಘರ್ಷ ಮಾಡುತ್ತಿದೆ. ಏಕೆಂದರೆ ಇಲ್ಲಿ ಪ್ರಜಾಪ್ರಭುತ್ವ ಇದೆ ಮತ್ತು ಯಾವಾಗ ಪ್ರತಿಯೊಬ್ಬರಿಗೂ ಮತದಾನದ ಹಾಗೂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಅಧಿಕಾರ ಇರುತ್ತದೆಯೋ, ಆಗ ಪ್ರಗತಿಯ ವೇಗವು ಮಂದವಾಗುತ್ತದೆ. ಆದಾಗ್ಯೂ, ಪರಿಸ್ಥಿತಿ ಹೀಗಿರುವುದಕ್ಕೆ ನನಗೆ ಆನಂದವೇ ಇದೆ, ಎಂದು ‘ಪೆಪ್ಸಿಕೋ’ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರು ಹೇಳಿದ್ದಾರೆ. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರೊಂದಿಗೆ ಸಂವಾದ ನಡೆಸುವಾಗ ೭೦ ವರ್ಷದ ನೂಯಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ನೂಯಿ ಅವರು ಮಾತನಾಡುತ್ತಾ,

೧. ಚೀನಾದ ಕೇಂದ್ರೀಕೃತ ವ್ಯವಸ್ಥೆಯನ್ನು ಅವಲಂಬಿಸಿರುವುದರಿಂದ ಅಲ್ಲಿ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವ ಸಾಂಸ್ಥಿಕ ‘ನಿಯಂತ್ರಣ ಮತ್ತು ಸಮತೋಲನ’ ವ್ಯವಸ್ಥೆಯ ಕೊರತೆಯಿದೆ. ಈ ಭಿನ್ನತೆಯನ್ನು ಸ್ಪಷ್ಟಪಡಿಸಲು ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯ ದೃಶ್ಯ ಸ್ವರೂಪದ ಕಡೆಗೆ ಬೆರಳು ಮಾಡಿದರು.

೨. ಅಮೆರಿಕದ ನಗರಗಳಂತೆಯೇ ಭಾರತದ ಪ್ರತಿಯೊಂದು ಪ್ರಮುಖ ನಗರದಲ್ಲೂ ಒಂದು ನ್ಯಾಯಾಲಯವಿರುತ್ತದೆ. ಆದರೆ ಚೀನಾದಲ್ಲಿ ನ್ಯಾಯಾಲಯಗಳಿಲ್ಲ; ಏಕೆಂದರೆ ಅಲ್ಲಿ ಸರಕಾರಿ ಮಟ್ಟದಲ್ಲೇ ನಿಯಮಗಳನ್ನು ರೂಪಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟಕಗಳಿರುತ್ತವೆ ಹಾಗೂ ಇದೇ ಕಾರಣಕ್ಕೆ ಅಲ್ಲಿ ಸಮಸ್ಯೆ ಉಂಟಾಗುತ್ತದೆ. ಜನರಿಗೆ ಸ್ಪಷ್ಟವಾಗಿ ಕಾಣಿಸುವ ನಮ್ಮ ನ್ಯಾಯಾಂಗ ವ್ಯವಸ್ಥೆಯೇ, ಈ ದೇಶದಲ್ಲಿ ತಮಗೂ ಕೆಲವು ಹಕ್ಕುಗಳಿವೆ ಎಂಬ ಭರವಸೆಯನ್ನು ಅವರಿಗೆ ನೀಡುತ್ತದೆ.

‘ಭಾರತದ ಸೌಂದರ್ಯವು ಅದರ ಗೊಂದಲದಲ್ಲೇ ಅಡಗಿದೆ!’ – ನೂಯಿ ಅವರ ಭಾರತದ ಪ್ರವಾಸೋದ್ಯಮದ ಕುರಿತು ಹೇಳಿಕೆ

ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಪಾಶ್ಚಾತ್ಯ ಪ್ರವಾಸಿಗರ ದೃಷ್ಟಿಯಿಂದ ಏನು ವ್ಯತ್ಯಾಸವಿದೆ ಎಂದು ರೈಸ್ ಅವರು ನೂಯಿ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ಚೀನಾವು ತುಲನಾತ್ಮಕವಾಗಿ ಏಕರೂಪವಾಗಿದೆ, ಇದರಿಂದಾಗಿ ಅಲ್ಲಿಗೆ ಬರುವ ಪ್ರವಾಸಿಗರಿಗೆ ಸಂಚರಿಸುವುದು ಸುಲಭವಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಭಾರತದ ಮುಖ್ಯ ವೈಶಿಷ್ಟ್ಯವೆಂದರೆ ಅಲ್ಲಿನ ‘ಗೊಂದಲ ಮತ್ತು ಓಟ-ನೂಕುನುಗ್ಗಲು’. ಭಾರತದ ಸೌಂದರ್ಯವು ಅಲ್ಲಿನ ಗೊಂದಲದಲ್ಲೇ ಅಡಗಿದೆ. ಯಾವ ಜನರಿಗೆ ಈ ದೇಶದ ಅಭ್ಯಾಸವಿದೆಯೋ, ಅವರಿಗೆ ಇಲ್ಲಿನ ಅನಿರೀಕ್ಷಿತ ಸಂಗತಿಗಳ ಬಗ್ಗೆ ಒಲವು ಮೂಡುತ್ತದೆ. ಅವರು ಮಾತನಾಡುತ್ತಾ, ಈ ಗೊಂದಲವು ಒಂದು ಅಮಲಿನಂತಿದೆ. ನಿಮಗೆ ಅದರ ಅಭ್ಯಾಸವಾಗಿ ಬಿಡುತ್ತದೆ. ಭಾರತದ ರಸ್ತೆಗಳ ಮೇಲಿನ ಜೀವನವನ್ನು ಉಲ್ಲೇಖಿಸಿದ ಅವರು, ವಾಹನಗಳ ಜೊತೆಗೆ ರಸ್ತೆಗಳಲ್ಲಿ ಹಸುಗಳು ಕೂಡ ಸಾಮಾನ್ಯವಾಗಿ ಕಾಣಸಿಗುತ್ತವೆ ಎಂದು ಹೇಳಿದರು. ಇಂತಹ ದೃಶ್ಯಗಳು ಮೊದಲ ಬಾರಿಗೆ ಬರುವ ಹಾಗೂ ಶಿಸ್ತುಬದ್ಧ ಮತ್ತು ಸ್ವಚ್ಛ ಪರಿಸರವನ್ನು ಇಷ್ಟಪಡುವ ಪ್ರವಾಸಿಗರನ್ನು ಗೊಂದಲಕ್ಕೀಡು ಮಾಡಬಹುದು; ಆದರೆ ಅನೇಕ ಭಾರತೀಯರಿಗೆ ಈ ವಿಷಯಗಳು ಅವರ ದೈನಂದಿನ ಜೀವನದ ಒಂದು ಭಾಗವಾಗಿವೆ. ಭಾರತೀಯ ಜನರು ಹಲವು ಬಾರಿ ‘ಈ ದಿನಗಳೂ ಕಳೆದುಹೋಗಲಿವೆ’ ಎಂಬ ಮಾನಸಿಕತೆಯನ್ನು ಸ್ವೀಕರಿಸುತ್ತಾರೆ ಮತ್ತು ಈ ಅವ್ಯವಸ್ಥೆಯನ್ನು ದೇಶದ ಸಾಮಾಜಿಕ ಸಂರಚನೆಯ ಒಂದು ಭಾಗವೆಂದೇ ಪರಿಗಣಿಸುತ್ತಾರೆ.

ಸಂಪಾದಕೀಯ ನಿಲುವು

ಪ್ರವಾಸೋದ್ಯಮದ ಮಾಧ್ಯಮದಿಂದ ಭಾರತವು ತನ್ನ ಅರ್ಥವ್ಯವಸ್ಥೆಯನ್ನು ಸಕ್ಷಮಗೊಳಿಸಲು ಪ್ರಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ನೂಯಿ ಅವರಂತಹ ಯಶಸ್ವಿ ಭಾರತೀಯರು ಮಾರಕವಾಗುವಂತಹ ಹೇಳಿಕೆ ನೀಡುವುದು ಯೋಗ್ಯವಲ್ಲ!