ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ಪಿಫಲಗೋಲಿಸಿದ ಪೊಲೀಸರು : ISI Terror Module

  • ಪಂಜಾಬ ಮತ್ತು ದೆಹಲಿಯಿಂದ ೪ ಖಲಿಸ್ತಾನಿ ಭಯೋತ್ಪಾದಕರ ಬಂಧನ

  • ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಲಭಿಸಿತ್ತು

ಬಂಧಿತ ಭಯೋತ್ಪಾದಕರು

ನವದೆಹಲಿ – ದೆಹಲಿ ಪೊಲೀಸರ ವಿಶೇಷ ಘಟಕವು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ. (‘ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್’) ಸೂಚನೆಯ ಮೇರೆಗೆ ದೆಹಲಿ-ಎನ್.ಸಿ.ಆರ್. (ನ್ಯಾಷನಲ್ ಕ್ಯಾಪಿಟಲ್ ರೀಜನ್ ರಾಷ್ಟ್ರೀಯ ರಾಜಧಾನಿ ವಲಯ) ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದೆ. ಇವರಲ್ಲಿ ಮೂವರನ್ನು ಪಂಜಾಬ್‌ನಿಂದ ಮತ್ತು ಒಬ್ಬನನ್ನು ದೆಹಲಿಯಿಂದ ಬಂಧಿಸಲಾಗಿದೆ. ಇವರು ಐ.ಎಸ್.ಐ. ಹ್ಯಾಂಡ್ಲರ್ (ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನಿಯಂತ್ರಿಸುವ ಮತ್ತು ನಿರ್ವಹಿಸುವ ವ್ಯಕ್ತಿ) ಶಹಜಾದ್ ಭಟ್ಟಿ ಎಂಬಾತನೊಂದಿಗೆ ನೇರ ಸಂಪರ್ಕದಲ್ಲಿದ್ದರು ಮತ್ತು ಅವನ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದರು. ಅವರಿಂದ ೨ ವಿದೇಶಿ ಪಿಸ್ತೂಲ್‌ಗಳು, ೯ ಕಾರ್ಟಿಜ್ಡಗಳು ಮತ್ತು ೫ ಮೊಬೈಲ್ ಫೋನ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

೧. ಅಮೃತಸರದ ಮಜಿಠಾ ರೋಡ್ ಪ್ರದೇಶದಿಂದ ಶುಭದೀಪ ಸಿಂಗ್ ಉರ್ಫ್ ವಿಶಾಲ ಎಂಬಾತನನ್ನು ಬಂಧಿಸಲಾಯಿತು. ಆತ ನೀಡಿದ ಮಾಹಿತಿಯ ಮೇರೆಗೆ ಗುರುಜಂತ್ ಸಿಂಗ್ ಉರ್ಫ್ ರಿಷಿ ಮತ್ತು ಸಾಜನ ಸಿಂಗ್ ಉರ್ಫ್ ಹನಿ ಎಂಬುವವರನ್ನು ಪಂಜಾಬನಿಂದ ಬಂಧಿಸಲಾಯಿತು. ನಾಲ್ಕನೇ ಭಯೋತ್ಪಾದಕ ಗಗನಪ್ರೀತ ಎಂಬಾತನನ್ನು ದೆಹಲಿಯಿಂದ ಬಂಧಿಸಲಾಗಿದೆ.

೨. ಶುಭದೀಪ ನೀಡಿರುವ ಮಾಹಿತಿಯ ಪ್ರಕಾರ, ಆತ ಪಾಕಿಸ್ತಾನದಲ್ಲಿ ಕುಳಿತಿರುವ ಐ.ಎಸ್.ಐ. ಹ್ಯಾಂಡ್ಲರ್‌ ನೊಂದಿಗೆ ಸಂಪರ್ಕದಲ್ಲಿದ್ದನು ಮತ್ತು ಡ್ರೋನ್ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಹಾಗೂ ಮಾದಕ ಪದಾರ್ಥಗಳನ್ನು ತರಿಸಿಕೊಳ್ಳುತ್ತಿದ್ದನು. ಗಗನಪ್ರೀತನಿಗೆ ಹ್ಯಾಂಡ್ಲರ್‌ ಗಳು ದೆಹಲಿಯಲ್ಲಿರುವ ಧಾರ್ಮಿಕ ಸ್ಥಳಗಳ ಮಾಹಿತಿ ಸಂಗ್ರಹಿಸುವ ಜವಾಬ್ದಾರಿಯನ್ನು ವಹಿಸಿದ್ದರು. ಆತ ಈ ಸ್ಥಳಗಳ ವಿಡಿಯೋಗಳನ್ನು ಮಾಡಿ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನು. ಹಾಗೆಯೇ ಆತನಿಗೆ ದೆಹಲಿಯ ಪೊಲೀಸ್ ಠಾಣೆಗಳ ಮೇಲೆ ಗುಂಡಿನ ದಾಳಿ ನಡೆಸುವಂತೆಯೂ ಆದೇಶ ನೀಡಲಾಗಿತ್ತು.

೩. ಪಂಜಾಬ್‌ನ ಗಡಿ ಪ್ರದೇಶದಲ್ಲಿ ವಾಸಿಸುವ ಈ ಭಯೋತ್ಪಾದಕರು ಪಾಕಿಸ್ತಾನದಿಂದ ಡ್ರೋನ್ ಮೂಲಕ ಕಳುಹಿಸಲಾಗುವ ಶಸ್ತ್ರಾಸ್ತ್ರ ಮತ್ತು ಮಾದಕ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದರು, ಮುಂದೆ ಅವುಗಳನ್ನು ಸರಬರಾಜು ಮಾಡುತ್ತಿದ್ದರು.

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ನಾಶಪಡಿಸದ ಹೊರತು ಭಾರತದಲ್ಲಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ ಎಂಬುದು ಪದೇ ಪದೇ ಸ್ಪಷ್ಟವಾಗುತ್ತಿದ್ದರೂ, ಭಾರತವು ಪಾಕಿಸ್ತಾನವನ್ನು ಯಾವಾಗ ನಾಶಪಡಿಸುತ್ತದೆ?