ಕರ್ನಾಟಕದ ಪ್ರಸ್ತುತ ವಿದ್ಯಮಾನಗಳಿಂದ ಕರ್ನಾಟಕ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಎಂಬ ಪ್ರಶ್ನೆ ಮೂಡುತ್ತದೆ. ಸರಕಾರದ ಪ್ರತಿಯೊಂದು ನಿರ್ಧಾರವೂ ಹಿಂದೂಗಳನ್ನು ಬೆಚ್ಚಿಬೀಳಿಸುವಂತಿದೆ; ಆದರೆ ದುರದೃಷ್ಟವಶಾತ್, ಹಿಂದೂಗಳೇ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಾರೆ, ಆದ್ದರಿಂದ ‘ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯಂತೆ ಹಿಂದೂಗಳೇ ಅನುಭವಿಸಬೇಕಾಗಿದೆ. ಈ ಪರಿಸ್ಥಿತಿಯನ್ನು ಹಿಂದೂಗಳೇ ಬದಲಾಯಿಸಬಹುದು; ಆದರೆ ಅವರು ಹಾಗೆ ಮಾಡುವುದಿಲ್ಲ ಎಂಬುದು ಅಷ್ಟೇ ಸತ್ಯ; ಏಕೆಂದರೆ ಹಿಂದೂಗಳಿಗೆ ಎಲ್ಲವೂ ಉಚಿತವಾಗಿ ಬೇಕಾಗಿದೆ, ಧರ್ಮ-ರಾಷ್ಟ್ರದ ಬಗ್ಗೆ ಯಾವುದೇ ಶ್ರದ್ಧೆ ಇಲ್ಲ, ಯಾರಿಗೆ ನಿಜವಾಗಿಯೂ ಶ್ರದ್ಧೆ ಇದೆಯೋ ಅಂತಹ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಅಪಾರ ವೇದನೆಯನ್ನು ಅನುಭವಿಸುತ್ತಿದ್ದಾರೆ. ಇದು ಸಾಮಾನ್ಯ ಜನರ ವ್ಯಥೆಯಾಯಿತು, ಹಾಗಾದರೆ ಪೊಲೀಸರ ವ್ಯಥೆ ಏನು ? ಅವರು ತಮ್ಮ ಕರ್ತವ್ಯವನ್ನು ತಾವೇ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆಯೇ ಅಥವಾ ರಾಜ್ಯದ ಚಿಂತೆಯನ್ನು ಬಿಟ್ಟು ತಮ್ಮ ಸ್ವಂತ ಚಿಂತೆಯನ್ನೇ ಮಾಡುತ್ತಿದ್ದಾರೆಯೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಗಡಿಯಲ್ಲಿ ಸೈನಿಕರು ದೇಶಕ್ಕಾಗಿ ವಿದೇಶಿ ಶಕ್ತಿಗಳೊಂದಿಗೆ ಹೋರಾಡುತ್ತಿದ್ದಾರೆ, ಅವರದ್ದೇ ಒಂದು ರೂಪ ಸೈನಿಕರಂತೆಯೇ ಪೊಲೀಸರ ಸಮವಸ್ತ್ರದಲ್ಲಿ ದೇಶದ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸೈನಿಕ ಮತ್ತು ಪೊಲೀಸ್ ನಡುವಿನ ಸಾಮ್ಯತೆ ಎಂದರೆ ಅನ್ಯಾಯ ಅಥವಾ ತಪ್ಪಿನ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ಒದಗಿಸುವುದು; ಆದರೆ ಇಲ್ಲೇ ಅವರಿಬ್ಬರ ನಡುವೆ ವ್ಯತ್ಯಾಸವಿದೆ. ಭಾರತೀಯ ವೀರ ಸೈನಿಕರು ಗಡಿ ದಾಟಿ ಶತ್ರುಗಳನ್ನು ಧೂಳೀಪಟ ಮಾಡುತ್ತಾರೆ; ಆದರೆ ರಾಜ್ಯದ ಪೊಲೀಸರು ತಮ್ಮ ಗಡಿಯನ್ನು (ಮಿತಿಗಳನ್ನು) ತಾವೇ ಕಿರಿದಾಗಿಸಿಕೊಂಡು ತೃಪ್ತಿಪಡುತ್ತಾರೆ, ಎಂದರೆ ತಪ್ಪಾಗಲಾರದು.
೧. ಪೊಲೀಸರ ಬಳಿ ಬಂದೂಕು ಇದ್ದರೂ ಮತಾಂಧ ಮುಸಲ್ಮಾನರಿಂದ ಹಲ್ಲೆಗೊಳಗಾದ ಘಟನೆಗಳು

ಅ. ೧೧ ಆಗಸ್ಟ್ ೨೦೨೦ : ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸೋದರಳಿಯ ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿದ್ದನು. ಇದರಿಂದಾಗಿ ಸಾವಿರಾರು ಜನರ ಗುಂಪು ರಾತ್ರಿಯ ಸಮಯದಲ್ಲಿ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿತು. ಪೊಲೀಸ್ ಠಾಣೆ, ಶಾಸಕರ ಮನೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ತೀವ್ರ ಕಲ್ಲು ತೂರಾಟ ನಡೆಸಲಾಯಿತು.
ಆ. ೧೬ ಏಪ್ರಿಲ್ ೨೦೨೨ : ಮಸೀದಿಯ ಮೇಲೆ ಭಗವಾ ಧ್ವಜ ಹಾರಿಸಿದಂತೆ ಎಡಿಟ್ ಮಾಡಿದ ಚಿತ್ರವನ್ನು ‘ವಾಟ್ಸಾಪ್ ಸ್ಟೇಟಸ್ನಲ್ಲಿ ಇಟ್ಟಿರುವುದನ್ನು ಪ್ರತಿಭಟಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ರಾತ್ರಿ ಸಾವಿರಾರು ಜನರು ಜಮಾಯಿಸಿದ್ದರು. ಈ ಗುಂಪು ಹಠಾತ್ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಠಾಣೆ, ಆಸ್ಪತ್ರೆ, ವಾಹನಗಳು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು.
ಇ. ೧ ಅಕ್ಟೋಬರ್ ೨೦೨೩ : ‘ಈದ್-ಎ-ಮಿಲಾದ್ ಮೆರವಣಿಗೆಯ ಸಮಯದಲ್ಲಿ ಅಳವಡಿಸಲಾಗಿದ್ದ ಕಟೌಟ್ (ಚಿತ್ರದ ಬ್ಯಾನರ್) ವಿವಾದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಹಠಾತ್ ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಬಂದ ಪೊಲೀಸರ ಮೇಲೆಯೂ ಕಲ್ಲು ತೂರಾಟವಾಯಿತು.
ಈ. ೧೦ ಫೆಬ್ರವರಿ ೨೦೨೫ : ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಮತ್ತು ಕೋಮುಪ್ರಚೋದನಾಕಾರಿ ಬರಹಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಪಾಂಡುರಂಗ ಎಂಬ ವ್ಯಕ್ತಿಯನ್ನು ಮೈಸೂರಿನ ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅಲ್ಪಸಂಖ್ಯಾತ ಸಮುದಾಯದ ದೊಡ್ಡ ಗುಂಪು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಗುಂಪನ್ನು ಶಾಂತಗೊಳಿಸಲು ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಗಿ, ಗುಂಪು ಹಠಾತ್ ಠಾಣೆ ಮತ್ತು ಪೊಲೀಸ್ ವಾಹನದ ಮೇಲೆ ಭಾರಿ ಕಲ್ಲು ತೂರಾಟ ನಡೆಸಿತು.
ಉ. ೧೯ ಫೆಬ್ರವರಿ ೨೦೨೬ : ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಯು ಮಸೀದಿಯ ಬಳಿ ಹಾದು ಹೋಗುತ್ತಿದ್ದಾಗ ಹಠಾತ್ ಕಲ್ಲು ತೂರಾಟ ನಡೆಯಿತು. ಬಂದೋಬಸ್ತ್‌ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲುಗಳು ಬಿದ್ದವು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ೮ ಜನರನ್ನು ವಶಕ್ಕೆ ಪಡೆದು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೆಕ್ಷನ್ ೧೪೪ ಜಾರಿಗೊಳಿಸಿದರು.
ಊ. ೨೪ ಮೇ ೨೦೨೬ : ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್.ಎಚ್. ೬೬) ಬಳಿ ಈ ಹಿಂದೆ ತೆರವುಗೊಳಿಸಲಾಗಿದ್ದ ಮೂರಿನ ಕಟ್ಟೆ ಮರುನಿರ್ಮಾಣ ಮಾಡುವ ವಿಷಯವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿತ್ತು. ಈ ನಿರ್ಮಾಣಕ್ಕೆ ಸ್ಥಳೀಯ ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
೨. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಲ್ಲೆಗೊಳಗಾಗುವುದು ಎಷ್ಟರ ಮಟ್ಟಿಗೆ ಸರಿ ?
ಮೇಲೆ ಉಲ್ಲೇಖಿಸಲಾದ ಘಟನೆಗಳು ಅಧಿಕೃತವಾಗಿ ಇಂಟರ್ನೆಟ್‌ನಲ್ಲಿ ಲಭ್ಯವಿವೆ. ಇದಲ್ಲದೆ ದಾಖಲಾಗದ ಮತ್ತು ಬೆಳಕಿಗೆ ಬರದ ಇಂತಹ ಎಷ್ಟೋ ವರದಿಗಳು ಇರಬಹುದು. ಒಟ್ಟಾರೆ ಘಟನೆಗಳನ್ನು ನೋಡಿದರೆ ಸಶಸ್ತ್ರ ಪೊಲೀಸರು ಹಲ್ಲೆಗೊಳಗಾಗುವುದು ದುರದೃಷ್ಟಕರ. ಪೊಲೀಸರು ಹೀಗೆ ಇನ್ನು ಎಷ್ಟು ದಿನ ಹಲ್ಲೆಗೊಳಗಾಗಿ ಖಾಕಿ ವಸ್ತ್ರಕ್ಕೆ ಕಳಂಕ ತರಲಿದ್ದಾರೆ ?
ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಲ್ಲೆಗೊಳಗಾಗುವುದು ಎಷ್ಟರ ಮಟ್ಟಿಗೆ ಸರಿ ? ನಿಜ ಹೇಳಬೇಕೆಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಮಾಜವಿರೋಧಿ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಅಥವಾ ಅವರು ಅನುಸರಿಸುವ ಮಾರ್ಗದಲ್ಲೇ ಯೋಗ್ಯ ಕಠಿಣ ಕ್ರಮ ಕೈಗೊಂಡರೆ ಮಾತ್ರ ಕಾನೂನು-ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಮತ್ತು ಪೊಲೀಸರ ಮೇಲೆ ಕೈ ಎತ್ತುವ ಮುನ್ನ ಮತಾಂಧರು ಅಥವಾ ಅಪರಾಧಿಗಳು ೧೦೦ ಬಾರಿ ಯೋಚಿಸುತ್ತಾರೆ. ಪೊಲೀಸರು ಈ ರೀತಿಯಾಗಿ ತಮ್ಮದೇ ಆದ ನಡುಕವನ್ನು ಮೂಡಿಸಿದರೆ ಅರ್ಧಕ್ಕಿಂತ ಹೆಚ್ಚು ಗಲಭೆಗಳು ತಾನಾಗಿಯೇ ನಿಲ್ಲುತ್ತವೆ. ದಂಗೆ ಎಬ್ಬಿಸುವ ಮುನ್ನ ದಂಗೆಕೋರರು ೧೦೦ ಬಾರಿ ಯೋಚಿಸುತ್ತಾರೆ; ಆದರೆ ಪೊಲೀಸರು ಹಾಗೆ ಮಾಡದ ಕಾರಣ ಜನರ ಮನಸ್ಸಿನಲ್ಲಿ ಅವರ ಬಗ್ಗೆ ಭಯ ಉಳಿದಿಲ್ಲ ಎಂಬುದು ಅಷ್ಟೇ ಸತ್ಯ.
೩. ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಸಮಾಜವಿರೋಧಿಗಳು ಯಾವಾಗಲೂ ಶಾಂತವಾಗಿರುತ್ತಾರೆ !
ಇವೆಲ್ಲವನ್ನೂ ನೋಡುವಾಗ ಪೊಲೀಸರೇ, ಖಾಕಿಯ ಗೌರವ ವನ್ನು ಕಾಪಾಡಲು ಸಮಾಜವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡಲು ಪ್ರಯತ್ನಿಸಿ. ಹಿಂದೆ ಸಾಮ, ದಾನ, ಭೇದ, ದಂಡಗಳನ್ನು ಬಳಸಲಾಗುತ್ತಿತ್ತು; ಆದರೆ ಕಾಲ ಬದಲಾಗಿದೆ ಎಂಬುದು ಪೊಲೀಸರ ಮೇಲಿನ ದಾಳಿಗಳ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಕಾಲಕ್ಕೆ ತಕ್ಕಂತೆ ಪೊಲೀಸರು ದಂಡವನ್ನು ಬಳಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಒಬ್ಬ ಮತಾಂಧ ಅಥವಾ ಆಪರಾಧಿಗೆ ಸರಿಯಾಗಿ ಬುದ್ಧಿ ಕಲಿಸಿದರೆ ಅವನ ಉಳಿದ ಸಹಚರರು ದಿಕ್ಕಾಪಾಲಾಗಿ ಓಡಿಹೋಗುತ್ತಾರೆ. ಪೊಲೀಸರು ನಿಷ್ಕ್ರಿಯತೆ ತೋರಿಸಿದರೆ ಮತ್ತು ಮತಾಂಧರಲ್ಲಿ ಒಬ್ಬನೇ ನಿಮ್ಮ ಮೇಲೆ ಕಲ್ಲು ತೂರಿದರೂ ಉಳಿದ ಸಹಚರರು ಆ ನಿಷ್ಕ್ರಿಯತೆಯನ್ನು ನೋಡಿ ಕಲ್ಲು ತೂರುತ್ತಾರೆ. ಆದ್ದರಿಂದ ಇನ್ಮುಂದೆಯಾದರೂ ಕಾನೂನು-ಸುವ್ಯವಸ್ಥೆಗಾಗಿ ದಂಡವನ್ನು ಬಳಸಿ. ಇದರಿಂದ ಖಾಕಿಯ ಮೇಲಿನ ಜನರ ಅಪನಂಬಿಕೆ ದೂರವಾಗುತ್ತದೆ ಮತ್ತು ನಿಜವಾದ ಅರ್ಥದಲ್ಲಿ ಜನರಿಗೆ ನೀವೇ ಆಧಾರವಾಗಿ ನಿಲ್ಲುತ್ತೀರಿ. ಹೀಗಾದರೆ ಮಾತ್ರ ಜನರು ನಿಮ್ಮ ಸಹಾಯಕ್ಕೆ ಧಾವಿಸಿ ಬರುತ್ತಾರೆ. ‘ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ನೀವು ಧರ್ಮಕ್ಕಾಗಿ ಅಂದರೆ ನಿಮ್ಮ ಪೊಲೀಸ್ ಕರ್ತವ್ಯಕ್ಕಾಗಿ ಸಜ್ಜಾದರೆ, ಧರ್ಮ ಅಂದರೆ ಸಜ್ಜನರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಇದರೊಂದಿಗೆ ನೀವು ಸಾಧನೆಯನ್ನು ಪ್ರಾರಂಭಿಸಿದರೆ ದೇವರ ರಕ್ಷಾಕವಚ ನಿಮ್ಮ ಸುತ್ತಲೂ ಇರುತ್ತದೆ. ಆದ್ದರಿಂದ ಪೊಲೀಸರೇ, ನೀವು ಸಾಧನೆಯನ್ನೂ ಮಾಡಿ !
– ಶ್ರೀ. ಚೇತನ ಹರಿಹರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೫.೨೦೨೬)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !