
ಸಂವಿಧಾನವು ರಚಿಸಿರುವ ಬೇಸಿಕ್ ಸ್ಟ್ರಕ್ಚರ್ ಥಿಯರಿಯಲ್ಲಿ (ಮೂಲಭೂತ ರಚನೆಯ ಸಿದ್ಧಾಂತದಲ್ಲಿ) ಸರಕಾರವು ಏನು ಬೇಕಾದರೂ ಮಾಡಬಹುದು (ಇಲ್ಲಿ ಮಹತ್ವದ್ದೆಂದರೆ ಬೇಸಿಕ್ ಸ್ಟ್ರಕ್ಚರ್ ಥಿಯರಿಯನ್ನು ಡಾ. ಅಂಬೇಡ್ಕರ್ ಅವರು ಬರೆದಿಲ್ಲ). ನಮ್ಮ ದೇಶದ ರಾಜ-ಮಹಾರಾಜರು ಇದರಲ್ಲಿ ಹೇಗೆ ಸಿಲುಕಿಕೊಂಡರು ಎಂಬ ವಿಷಯಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಇಲ್ಲಿ ನೀಡುತ್ತಿದ್ದೇನೆ.
೧. ಭಾರತ ಸರಕಾರವು ರಾಜ-ಮಹಾರಾಜರಿಗೆ ಗೌರವಧನ ನಿಗದಿಪಡಿಸುವುದು ಮತ್ತು ಸಂವಿಧಾನದಲ್ಲಿ ದಾಖಲು

ಸಂವಿಧಾನ ಎಂದರೆ ಏನು ? ಸರಕಾರದ ಭರವಸೆಗಳ ಪುಸ್ತಕ ಮತ್ತು ಪೆನ್ಸಿಲ್‌ನಿಂದ ಬರೆದ ವಾಗ್ದಾನವೇ ? ಭಾರತ ಇದು ನಮ್ಮ ಮನೆ. ಸ್ವಾತಂತ್ರ್ಯ ಸಿಕ್ಕಾಗ, ಈ ಮನೆಯಲ್ಲಿ ೫೬೨ ಸಣ್ಣ-ದೊಡ್ಡ ಸಂಸ್ಥಾನಗಳ ಒಕ್ಕೂಟವಿತ್ತು. ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರ್ದಾರ್ ಪಟೇಲ್ ಮತ್ತು ವಿ.ಪಿ. ಮೆನನ್ ಎಂಬ ಇಬ್ಬರು ಚತುರ ನಾಯಕರು ಹೋಗಿ, ಮಹಾರಾಜರೇ, ಮನೆಯನ್ನು ಒಂದುಗೂಡಿಸೋಣ. ನೀವು ರಾಜಪದವಿ ಬಿಟ್ಟುಕೊಡಿ, ನಾವು ನಿಮಗೆ ಜೀವಿತಾವಧಿಯವರೆಗೆ ಪಾಕೆಟ್ ಮನಿ ನೀಡುತ್ತೇವೆ. ಅದಕ್ಕೆ ಪ್ರಿವಿ ಪರ್ಸ್ ಎಂದು ಹೆಸರು. ಇದಲ್ಲದೆ ಅರಮನೆ, ಆಭರಣಗಳು ನಿಮ್ಮದೇ ಮತ್ತು ಇದನ್ನು ಸಂವಿಧಾನದಲ್ಲೂ ಬರೆದುಕೊಡುತ್ತೇವೆ, ಅಂದರೆ ಪಕ್ಕಾ ! ಎಂದರು.
ರಾಜ-ಮಹಾರಾಜರಿಗೆ ಅದು ಪೂರ್ಣ ಸರಿ ಅನಿಸಿತು. ಸಂವಿಧಾನದಲ್ಲಿ ಬರೆದ ಮೇಲೆ ಇನ್ನೇನು ಬೇಕು ? ಒಪ್ಪಂದಗಳೆಲ್ಲ ಆದವು, ಮೈಸೂರಿನ ಒಡೆಯರ್ ಅವರಿಗೆ ವರ್ಷಕ್ಕೆ ೨೬ ಲಕ್ಷ, ಹೈದರಾಬಾದ್ ನಿಜಾಮನಿಗೆ ಮೊದಲು ೪೨ ಲಕ್ಷ ನಂತರ ೨೦ ಲಕ್ಷ, ಗ್ವಾಲಿಯರ್‌ನ ಶಿಂದೆ ಅವರಿಗೆ ೨೫ ಲಕ್ಷ. ಯಾವುದೇ ತೆರಿಗೆಯಿಲ್ಲ, ಕಡಿತವಿಲ್ಲ. ಸಂವಿಧಾನದ ೨೯೧ ನೇ ವಿಧಿಯಲ್ಲಿ ಈ ಹಣವನ್ನು ಭಾರತದ ಬೊಕ್ಕಸದಿಂದ ನೀಡಲೇಬೇಕು ! ಎಂದು ಬರೆಯಲಾಯಿತು.
೨. ಇಂದಿರಾ ಗಾಂಧಿಯವರು ಹಣವನ್ನು ನಿಲ್ಲಿಸಿದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸುವುದು
ಸಂವಿಧಾನದ ೩೬೨ ನೇ ವಿಧಿಯು, ಸಂಸತ್ತು ನೀಡಿದ ಮಾತಿಗೆ ಗೌರವ ನೀಡಬೇಕು ಎಂದು ಹೇಳಿತ್ತು. ಸರಕಾರವೇ ಒಂದು ವೈಟ್ ಪೇಪರ್ (ಶ್ವೇತಪತ್ರ) ಹೊರಡಿಸಿತ್ತು. ಅದರಲ್ಲಿ ಭಾವುಕರಾಗಿ, ಈ ಭರವಸೆಯನ್ನು ಈಡೇರಿಸದಿದ್ದರೆ ಅದು ವಿಶ್ವಾಸದ್ರೋಹವಾಗುತ್ತದೆ ! ಎಂದು ಬರೆಯಲಾಗಿತ್ತು. ವಾಹ್ ! ಎಂತಹ ಆವೇಶ ! ಆಮೇಲೆ ಇಂದಿರಾ ಗಾಂಧಿ ಬಂದರು. ೧೯೬೭ರ ನಂತರ ಅವರ ರಾಜಕಾರಣ ಸ್ವಲ್ಪ ಡೋಲಾಯಮಾನವಾಯಿತು. ಕಾಂಗ್ರೆಸ್ ಇಬ್ಭಾಗವಾಯಿತು. ಇಂದಿರಾ ಗಾಂಧಿಯವರಿಗೆ ಗರಿಬಿ ಹಠಾವೋ ಘೋಷಣೆಯ ಅಗತ್ಯವಿದೆ ಎಂದು ಎನಿಸಿತು. ಆಗ ಅವರ ಕಣ್ಣೆದುರು ಬಂದವರು ಈ ಪ್ರಿವಿ ಪರ್ಸ್ ಪಡೆಯುತ್ತಿದ್ದ ರಾಜ-ಮಹಾರಾಜರು. ಅವರು, ಇದು ಉಳಿಗಮಾನ್ಯ ಪದ್ಧತಿಯ ಅವಶೇಷ ! ಎಂದರು.
೧೯೭೦ರಲ್ಲಿ ರಾಷ್ಟ್ರಪತಿಗಳ ಮೂಲಕ ದಿಢೀರನೆ ಆದೇಶ ಹೊರಡಿಸಲಾಯಿತು, ಇಂದಿನಿಂದ ರಾಜಪದವಿ ರದ್ದು, ಪರ್ಸ್ ಬಂದ್ !.
ಆದರೆ ಸರ್ವೋಚ್ಚ ನ್ಯಾಯಾಲಯವು, ಅಲ್ಲಾ ಸ್ವಾಮಿ, ಸಂವಿಧಾನದಲ್ಲಿ ಬರೆದಿರುವ ಪದವನ್ನು ಕೇವಲ ಒಂದು ಆದೇಶದ ಮೂಲಕ ಅಳಿಸಲು ಸಾಧ್ಯವಿಲ್ಲ ಎಂದಿತು. ರಾಜರ ಹಣ ಮುಂದುವರಿಯಿತು.
೩. ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಪ್ರಿವಿ ಪರ್ಸ್ ಕಾಯ್ದೆಯನ್ನು ಬದಲಾಯಿಸುವುದು
ಇಂದಿರಾ ಗಾಂಧಿಯವರು ಸುಮ್ಮನೆ ಕೂರುವವರಾಗಿರಲಿಲ್ಲ. ೧೯೭೧ರಲ್ಲಿ ಚುನಾವಣೆಯನ್ನು ಗೆದ್ದು ಸಂಸತ್ತಿನಲ್ಲಿ ೨೬ನೇ ಸಂವಿಧಾನ ತಿದ್ದುಪಡಿಯನ್ನು ತಂದರು. ೨೯೧, ೩೬೨, ೩೬೬(೨೨) ವಿಧಿಗಳನ್ನು ರಬ್ಬರ್‌ನಿಂದ ಅಳಿಸಿದಂತೆ ಸಂಪೂರ್ಣವಾಗಿ ಅಳಿಸಿಹಾಕಿದರು. ಅದರ ಮೇಲೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗುವಂತಿಲ್ಲ ! ಎಂದು ಬರೆದರು. ಮುಗಿಯಿತು. ಒಪ್ಪಂದ ಮುಗಿಯಿತು, ವಚನವೂ ಮುಗಿಯಿತು. ಇದರಿಂದ (ರಾಜ-ಮಹಾರಾಜರಿಗೆ ನೀಡಿದ ವಾಗ್ದಾನಗಳನ್ನು ಮುರಿಯುವುದ ರಿಂದ) ಬೇಸಿಕ್ ಸ್ಟ್ರಕ್ಚರ್ ಥಿಯರಿಯ ಉಲ್ಲಂಘನೆಯಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಘೋಷಿಸಿತು. ಪ್ರಿವಿ ಪರ್ಸ್ ಅಂತ್ಯವಾಯಿತು.
ಹಾಗಾದರೆ ಸಂವಿಧಾನ ಎಂದರೆ ಏನು ? ಈಗ ನನಗೆ ಹೇಳಿ, ಭಾರತ ಸರಕಾರವು ಮೈಸೂರಿನ ರಾಜರೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ, ೨೬ ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಮತ್ತು ಈ ಮೊತ್ತವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವುದಿಲ್ಲ ಅಥವಾ ಕಡಿಮೆ ಮಾಡುವುದಿಲ್ಲ ಎಂದು ಬರೆಯಲಾಗಿತ್ತು. ಎಷ್ಟು ಗಂಭೀರವಾದ ವಾಕ್ಯ ! ಆದರೆ ೧೯೭೧ರಲ್ಲಿ ಸಂಸತ್ತು ನಿರ್ಧರಿಸಿತು, ಕಾರಣ ಸಿಕ್ಕಿತು – ಪ್ರಜಾಪ್ರಭುತ್ವ !. ಮುಂದೆ ಆ ಮೊತ್ತವನ್ನೇ ಶೂನ್ಯಕ್ಕೆ ತರಲಾಯಿತು. ಅಂದರೆ, ಮನೆಮಾಲೀಕನು ಬಾಡಿಗೆದಾರನಿಗೆ ಸ್ಟಾಂಪ್ ಪೇಪರ್ ಮೇಲೆ ನೀವು ಜೀವಮಾನವಿಡೀ ಇಲ್ಲೇ ಇರಿ ಎಂದು ಬರೆದುಕೊಟ್ಟು, ೨ ವರ್ಷಗಳ ನಂತರ ಮನೆಮಾಲೀಕನೇ ಕಾಯ್ದೆ ಬದಲಾಯಿಸಿ, ಸ್ಟಾಂಪ್ ಪೇಪರ್ ಕಾಯ್ದೆಯೇ ರದ್ದು ! ಹಾಗಾಯಿತು. ಬಾಡಿಗೆದಾರ ಬೀದಿಗೆ ಬಂದ. ನ್ಯಾಯಾಲಯ ಮೂಕಪ್ರೇಕ್ಷಕವಾಯಿತು.
೪. …ಹಾಗಾದರೆ, ಸಂವಿಧಾನದಲ್ಲಿ ಹಿಂದೂ ರಾಷ್ಟ್ರ ಪದವನ್ನು ಹಾಕಲು ಬರುವುದೇ ?
ಇಂದಿರಾ ಅವರ ಯುಕ್ತಿವಾದ ನಮಗೆ ತಿಳಿಯುತ್ತದೆ. ರಾಜರ ಪ್ರಭುತ್ವವನ್ನು ಕೊನೆಗಾಣಿಸಬೇಕಿತ್ತು; ಆದರೆ ಪದ್ದತಿ ? ಮೊದಲು ಸಂವಿಧಾನದಲ್ಲಿ ಬರೆದುಕೊಟ್ಟು ವಿಶ್ವಾಸ ಮೂಡಿಸುವುದು ಮತ್ತು ನಂತರ ಅದನ್ನು ಅಳಿಸಿಹಾಕಿ ವಿಶ್ವಾಸದ್ರೋಹ ಮಾಡುವುದೇ ?
ಸರ್ದಾರ್ ಪಟೇಲ್ ಅವರು ಸಂವಿಧಾನವನ್ನು ವಿಶ್ವಾಸ ಮೂಡಿಸಲು ಬಳಸಿಕೊಂಡರೆ, ಇಂದಿರಾಜಿಯವರು ಆ ವಿಶ್ವಾಸವನ್ನು ಮುರಿಯಲು ಸಂವಿಧಾನ ಬಳಸಿಕೊಂಡರೇ ? ಇದರ ಅರ್ಥವೇನು ? ನಮ್ಮ ದೇಶದಲ್ಲಿ ಸಂವಿಧಾನ ಎಂದರೆ ಕಲ್ಲಿನ ಹಲಗೆಯಲ್ಲ, ಬದಲಿಗೆ ಅದು ಶಾಲೆಯ ಕಪ್ಪುಹಲಗೆಯ ಮೇಲಿನ ಅಕ್ಷರಗಳು. ಆಡಳಿತ ಪಕ್ಷದವರು ಸೀಮೆಸುಣ್ಣ ಹಿಡಿದುಕೊಂಡು ಬರುತ್ತಾರೆ, ತಮಗೆ ಬೇಕಾದುದನ್ನು ಬರೆಯುತ್ತಾರೆ. ನಾಳೆ ಬಹುಮತ ಸಿಕ್ಕ ತಕ್ಷಣ, ಒದ್ದೆ ಬಟ್ಟೆಯಿಂದ ಅಳಿಸಿ ಹೊಸದನ್ನು ಬರೆಯುತ್ತಾರೆ. ಅದು ಬೇಸಿಕ್ ಸ್ಟ್ರಕ್ಚರ್ ಥಿಯರಿಯೊಳಗೆ ಹೊಂದಿಕೊಂಡರೆ ಸಾಕು! ರಾಜರ ಹಣ ಹೋಯಿತು, ಹೋಗಲಿ; ಆದರೆ ಈ ಸರಕಾರಿ ರಬ್ಬರ್ ಮತ್ತು ಸೀಮೆಸುಣ್ಣದ ಆಟವಿದೆಯಲ್ಲ, ಅದು ಕೊಂಚ ಭಯಾನಕವಾಗಿದೆ. ಏಕೆಂದರೆ ಇಂದು ರಾಜನ ಪ್ರಿವಿ ಪರ್ಸ್, ನಾಳೆ ನಿಮ್ಮ ನಿವೃತ್ತಿ ವೇತನ (ಪೆನ್ಷನ್), ನಾಡಿದ್ದು ಭವಿಷ್ಯ ನಿಧಿ (ಪಿ.ಎಫ್.). ಎಲ್ಲವನ್ನೂ ಲೋಕಹಿತಕ್ಕಾಗಿ ರದ್ದುಗೊಳಿಸಬಹುದು, ಅದಕ್ಕೆ ಕೇವಲ ಸಂವಿಧಾನದಲ್ಲಿ ಒಂದು ತಿದ್ದುಪಡಿ ಬೇಕಷ್ಟೇ.
ಹಾಗಾಗಿ ಮಿತ್ರರೇ, ಸರಕಾರದ ಭರವಸೆಗಳನ್ನು ನಂಬಿ ಮರುಳಾಗಬೇಡಿ; ಏಕೆಂದರೆ ಭಾರತದ ಸಂವಿಧಾನವು ದೃಢವಾದ ಭರವಸೆಯಲ್ಲ, ಅದು ಪೆನ್ಸಿಲ್ ನಿಂದ ಬರೆದ ವಾಗ್ದಾನ. ಯಾವಾಗ ಬೇಕಾದರೂ ಅಳಿಸಿಹಾಕಬಹುದುಕೇವಲ ಮೂರನೇ ಎರಡರಷ್ಟು ಬಹುಮತದ ರಬ್ಬರ್ ಇದ್ದರೆ ಸಾಕು ! ಆಗ ಈ ಹಿಂದೆ ಪೆನ್ಸಿಲ್‌ನಿಂದ ಬರೆದದ್ದರ ಮೇಲೆ ಸರ್ವೋಚ್ಚ ನ್ಯಾಯಾಲಯ ಏನೇ ಆಕ್ಷೇಪಣೆಗಳನ್ನು ಎತ್ತಿದ್ದರೂ ಅಥವಾ ಆದೇಶಗಳನ್ನು ನೀಡಿದ್ದರೂ, ಹೊಸದಾಗಿ ಬರೆದ ತಕ್ಷಣ ಅವು ಮತ್ತೆ ಬದಲಾಗುತ್ತವೆ. ಇದರರ್ಥವೇನು ? ಹಾಗಾದರೆ ಸಂವಿಧಾನದಲ್ಲಿ ಹಿಂದೂ ರಾಷ್ಟ್ರವನ್ನು ಅಳವಡಿಸಲು ಸಾಧ್ಯವೇ? ನೀವೇನಂತೀರಾ ?
– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್. (೨೩.೫.೨೦೨೬)
ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ
ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಂದ ಜೈಪುರದ ಪ್ರಸಿದ್ಧ ‘ಖೋಲೆ ಹನುಮಾನ’ಗೆ ಪ್ರಾರ್ಥನೆ !
ಕೃತಕ ಬುದ್ಧಿಮತ್ತೆಯ ಮಿತಿ !
ಗುರುಕುಲ ಶಿಕ್ಷಣಪದ್ಧತಿಯ ಅವಶ್ಯಕತೆ !