ನೇಪಾಳದ ಪ್ರಧಾನಿ ಬಾಲೆನ್ ಶಾ ಅವರ ಹಳೆಯ ಹೇಳಿಕೆಗೆ ಸ್ಪಷ್ಟನೆ

ಕಾಠಮಂಡು (ನೇಪಾಳ) – ಭಾರತದೊಂದಿಗಿನ ಗಡಿ ವಿವಾದವನ್ನು ಇತ್ಯರ್ಥಪಡಿಸಲು ತಮ್ಮ ದೇಶವು ಬ್ರಿಟನ್ ಅನ್ನು ಮಧ್ಯಸ್ಥಗಾರನನ್ನಾಗಿ ಮಾಡಲು ಬಯಸುವುದಿಲ್ಲ ಎಂದು ನೇಪಾಳದ ಪ್ರಧಾನಿ ಬಾಲೆನ್ ಶಾ ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ವಹಿಸಬೇಕೆಂದು ಕರೆ ನೀಡಿದ್ದರು. ಈಗ ಅವರು, ನನ್ನ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನೇಪಾಳವು ಈ ವಿಷಯವನ್ನು ಭಾರತದೊಂದಿಗೆ ನೇರ ಚರ್ಚೆಯ ಮೂಲಕವೇ ಬಗೆಹರಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಶಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕಾಲಾಪಾನಿ ಮತ್ತು ಲಿಪುಲೇಖ್ ಗೆ ಸಂಬಂಧಿಸಿದ ಬ್ರಿಟಿಷ್ ಆಡಳಿತದ ಕೆಲವು ದಾಖಲೆಗಳು ಲಭ್ಯವಿವೆ. ಈ ಐತಿಹಾಸಿಕ ಪುರಾವೆಗಳನ್ನು ಮುನ್ನೆಲೆಗೆ ತರಬೇಕು; ಆದರೆ ಇದರರ್ಥ ನೇಪಾಳಕ್ಕೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬೇಕು ಎಂದಲ್ಲ. ನೇಪಾಳವು ತನ್ನ ನೆರೆಯ ದೇಶಗಳೊಂದಿಗೆ ಸ್ವತಃ ಚರ್ಚಿಸಿ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಿದೆ. ಭಾರತದೊಂದಿಗಿನ ಎಲ್ಲಾ ಬಾಕಿ ಉಳಿದಿರುವ ವಿಷಯಗಳನ್ನು ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಬಗೆಹರಿಸಲಾಗುವುದು ಎಂದು ಹೇಳಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು