ಬದಲಾದ ಪುಸ್ತಕಗಳು ಶಾಲೆಯ ಮೊದಲ ದಿನವೇ ಸಿಗಲಿವೆ!

ಮುಂಬಯಿ – ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಈ ವರ್ಷ ೨ನೇ, ೩ನೇ, ೪ನೇ ಹಾಗೂ ೬ನೇ ತರಗತಿಯ ಪುಸ್ತಕಗಳನ್ನು ಬದಲಾಯಿಸಲಾಗಿದೆ. ಈ ಪುಸ್ತಕಗಳನ್ನು ಬಾಲಭಾರತಿಯು ಸಿದ್ಧಪಡಿಸಿದ್ದು, ಬಾಲಭಾರತಿಯ ವಜ್ರ ಮಹೋತ್ಸವದ ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ೪ ತರಗತಿಗಳ ಪುಸ್ತಕಗಳನ್ನು ಬದಲಾಯಿಸಲಾಗಿದೆ. ಶಾಲೆಯ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಸಿಗಲಿವೆ.
📚 A welcome step in correcting historical neglect!
CBSE textbooks will now feature a 20-page chapter on Chhatrapati Shivaji Maharaj, expanded from just 1.5 pages earlier, informed Education Minister Dada Bhuse.
The revised books will be available from the first day of school.… pic.twitter.com/nbM40sezjF
— Sanatan Prabhat (@SanatanPrabhat) June 11, 2026
ಈ ಮೊದಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ೮ನೇ ತರಗತಿಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮರಾಠಾ ಸಾಮ್ರಾಜ್ಯದ ಬಗ್ಗೆ ಕೇವಲ ಒಂದೂವರೆ ಪುಟದಷ್ಟು ಮಾತ್ರ ಬರವಣಿಗೆ ಇತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿಕ್ಷಣ ಇಲಾಖೆಯಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರವರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ನಂತರ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ೨೦ ಪುಟಗಳ ಪಾಠವನ್ನು ಸೇರಿಸಲಾಗಿದೆ, ಎಂದು ಶಿಕ್ಷಣ ಸಚಿವ ದಾದಾ ಭುಸೆಯವರು ಮಾಹಿತಿ ನೀಡಿದ್ದಾರೆ.
ಈ ಪುಸ್ತಕಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣವನ್ನು ಹೆಚ್ಚು ಆನಂದದಾಯಕ, ಪ್ರಯೋಗಶೀಲ ಮತ್ತು ಅನುಭವವನ್ನು ಸಮೃದ್ಧಗೊಳಿಸಲು ಒತ್ತು ನೀಡಲಾಗಿದೆ. ಭಾರತೀಯ ಜ್ಞಾನ ಪರಂಪರೆ, ಸ್ಥಳೀಯ ಸಂದರ್ಭ, ವಿವಿಧ ಚಟುವಟಿಕೆಗಳು, ಪರಿಕಲ್ಪನೆ ಚಿತ್ರಗಳು ಮತ್ತು ಕೋಷ್ಟಕಗಳ ಮೂಲಕ ಶಿಕ್ಷಣವನ್ನು ಹೆಚ್ಚು ಅನುಭವಾಧಾರಿತಗೊಳಿಸಲು ಪ್ರಯತ್ನಿಸಲಾಗಿದೆ.
‘ನ್ಯೂಸ್ ಕ್ಲಿಕ್’ ಮೇಲಿನ ಕ್ರಮ ರದ್ದುಗೊಳಿಸಿದ ದೆಹಲಿ ಉಚ್ಚ ನ್ಯಾಯಾಲಯ!
ನಾಶಿಕ್: ಸಿಂಹಸ್ಥ ಕುಂಭಮೇಳದ ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭ !
ಪ್ರಪಂಚ ಅಸ್ಥಿರವಾಗಿದ್ದರೂ; ಭಾರತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ! – ಪ್ರಧಾನಮಂತ್ರಿ
‘ಅಗ್ನಿ-೬’ ಕ್ಷಿಪಣಿಯ ಸಂಭಾವ್ಯ ಪರೀಕ್ಷೆಯ ಮುನ್ನ ಒಡಿಶಾದ ೧೧ ಸಾವಿರ ನಾಗರಿಕರ ತಾತ್ಕಾಲಿಕ ಸ್ಥಳಾಂತರ!
ತೃಣಮೂಲ ಕಾಂಗ್ರೆಸ್ಸಿನ ರಾಜ್ಯಸಭಾ ಸಂಸದರಾದ ಪಿ.ಸಿ. ಬರಾಯಿಕರಿಂದ ರಾಜೀನಾಮೆ!
ಪ್ರಭು ಶ್ರೀರಾಮಚಂದ್ರರ ಅವಮಾನವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ! – ಪ್ರಮೋದ್ ಮುತಾಲಿಕ್