ಪ್ರತ್ಯುತ್ತರವಾಗಿ ಇರಾನ್ ನಿಂದ ಅಮೆರಿಕಾದ ನೆಲೆಗಳ ಮೇಲೆ ದಾಳಿ
ಉಭಯ ದೇಶಗಳ ನಡುವೆ ಮತ್ತೆ ಯುದ್ಧ ಭುಗಿಲೇಳುವ ಆತಂಕ

ನ್ಯೂಯಾರ್ಕ್ – ಹಾರ್ಮುಜ್ ಜಲಸಂಧಿಯಲ್ಲಿ (2 ಜಲರಾಶಿಗಳನ್ನು ಜೋಡಿಸುವ ಜಲಮಾರ್ಗದಲ್ಲಿ) ಅಮೆರಿಕಾದ ಅತ್ಯಾಧುನಿಕ ‘ಅಪಾಚೆ’ ಹೆಲಿಕಾಪ್ಟರ್ ಪತನಗೊಂಡಿದೆ. ಇರಾನ್ ಈ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಅಮೆರಿಕಾ ಆರೋಪಿಸಿದೆ. ಈ ಘಟನೆಯ ಬೆನ್ನಲ್ಲೇ ಅಮೆರಿಕಾ ಸೇನೆಯು ಪ್ರತ್ಯುತ್ತರವಾಗಿ ಇರಾನ್ ನ 20 ಸ್ಥಳಗಳ ಮೇಲೆ ಭೀಕರ ದಾಳಿ ಮಾಡಿದೆ. ಈ ಹೊಸ ದಾಳಿಯಿಂದಾಗಿ ಇರಾನ್-ಅಮೆರಿಕಾ ಕದನ ವಿರಾಮದ ಪ್ರಯತ್ನಗಳಿಗೆ ಭಾರಿ ಹಿನ್ನಡೆಯಾಗಿದೆ. ಟ್ರಂಪ್ ಈ 2 ದೇಶಗಳ ನಡುವಿನ ಶತ್ರುತ್ವವನ್ನು ಕೊನೆಗೊಳಿಸಿ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರು, ‘ನಾವು ಒಂದು ಮಹತ್ವದ ಒಪ್ಪಂದವನ್ನು ತಲುಪಲು ಅತ್ಯಂತ ಹತ್ತಿರದಲ್ಲಿದ್ದೇವೆ’, ಎಂದು ದಾವೆ ಮಾಡಿದ್ದರು; ಆದರೆ ಈ ತಾಜಾ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಯುದ್ಧದ ಆತಂಕ ಮತ್ತಷ್ಟು ಹೆಚ್ಚಾಗಿದೆ.
1. ‘ಅಮೆರಿಕಾದ ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ಇರಾನ್ ಮಾಡಿದ ದೊಡ್ಡ ತಪ್ಪು’, ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಅಮೆರಿಕಾ ಇದಕ್ಕೆ ತಕ್ಷಣ ಮತ್ತು ಕಠಿಣ ಪ್ರತ್ಯುತ್ತರ ನೀಡಲಿದೆ’, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2. ಇರಾನ್ ನ ‘ಆತ್ಮಹತ್ಯಾ ಡ್ರೋನ್’ ‘ಅಪಾಚೆ’ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಅಮೆರಿಕಾ ದಾವೆ ಮಾಡಿತ್ತು; ಆದರೆ ಹೆಲಿಕಾಪ್ಟರ್ ಇರಾನ್ ನ ದಾಳಿಯಿಂದಾಗಿ ಪತನಗೊಂಡಿತೇ ಅಥವಾ ತಾಂತ್ರಿಕ ದೋಷದಿಂದಲೇ?, ಎಂಬುದು ಇನ್ನಷ್ಟೇ ದೃಢಪಡಬೇಕಿದೆ. ಅದೃಷ್ಟವಶಾತ್ ಇಬ್ಬರೂ ಪೈಲಟ್ ಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ.
ಇರಾನ್ ಪ್ರತ್ಯುತ್ತರ!
ಇರಾನ್ ನ ಉಪ ವಿದೇಶಾಂಗ ಸಚಿವರು ಅಮೆರಿಕಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸುವ ಯಾವುದೇ ಉದ್ದೇಶ ಇರಾನ್ ಗೆ ಇರಲಿಲ್ಲ ಎಂದು ಹೇಳಿದ್ದಾರೆ. ಅಮೆರಿಕಾದ ದಾಳಿಯ ನಂತರ ಇರಾನ್ ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಅಮೆರಿಕಾ ತನ್ನ ದಕ್ಷಿಣ ಭಾಗಗಳಲ್ಲಿ ವೈಮಾನಿಕ ದಾಳಿ ನಡೆಸಿದಾಗ, ಇರಾನ್ ಅದಕ್ಕೆ ಪ್ರತಿಯಾಗಿ ಬಹರೇನ್ ನಲ್ಲಿರುವ ಅಮೆರಿಕಾ ನೌಕಾಪಡೆಯ ಅತ್ಯಂತ ದೊಡ್ಡ ಪ್ರಧಾನ ಕಚೇರಿಯ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದೆ ಎಂದು ಇರಾನ್ ಹೇಳಿಕೊಂಡಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಇರಾನ್ ಜೋರ್ಡಾನ್ ನಲ್ಲಿರುವ ಅಮೆರಿಕಾದ ವಾಯುಪಡೆ ನೆಲೆಗಳ ಮೇಲೆಯೂ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ಸರಕಾರಿ ಮಾಧ್ಯಮಗಳ ಪ್ರಕಾರ, ಈ ಸಂಪೂರ್ಣ ಕಾರ್ಯಾಚರಣೆಯು ಅಮೆರಿಕಾ ಇರಾನ್ ನ ಸ್ಥಳಗಳ ಮೇಲೆ ಬಾಂಬ್ ಮೂಲಕ ನಡೆಸಿದ ದಾಳಿಗಳಿಗೆ ನೀಡಿದ ಪ್ರತ್ಯುತ್ತರವಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation