ಬಿಜನೌರ್ (ಉತ್ತರ ಪ್ರದೇಶ) ನಲ್ಲಿ ‘ನಕಲಿ’ ವೈದ್ಯ ಫೈಜಾನ್ ನಿಂದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮತಾಂತರಕ್ಕೆ ಒತ್ತಡ : Bijnor Hindu Woman Rape

  • ಫೈಜಾನ್ ಬಂಧನ

  • ಆಸ್ಪತ್ರೆಯೂ ಕಾನೂನುಬಾಹಿರ ಎಂದು ತಿಳಿದುಬಂದಿದೆ

ಬಿಜನೌರ್ (ಉತ್ತರ ಪ್ರದೇಶ) – ಇಲ್ಲಿನ ಧಾಮಪುರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ಬಲವಂತದ ಮತಾಂತರದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೆಹೌರ್‌ನ ಹಬೀಬ್‌ವಾಲಾದಲ್ಲಿರುವ ‘ಶಿಫಾ ನರ್ಸಿಂಗ್ ಹೋಮ್’ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಹಿಂದೂ ದಲಿತ ಮಹಿಳೆ ಈ ಆಸ್ಪತ್ರೆಯ ಸಂಚಾಲಕ ಡಾ. ಫೈಜಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯ ಆಮಿಷ ಒಡ್ಡಿ ಫೈಜಾನ್ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ಆಕೆ ಗರ್ಭಿಣಿಯಾದ ನಂತರ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಹಾಗೂ ಆಕೆಗೆ ಮಾಂಸ ತಿನ್ನಿಸಿ ಮತಾಂತರಕ್ಕೆ ಒತ್ತಡ ಹೇರಿದ್ದಾನೆ.

1. ಸಂತ್ರಸ್ತ ಹಿಂದೂ ಮಹಿಳೆ ಜೂನ್ 2 ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

2. ಆರೋಪಿ ಫೈಜಾನ್ ಈಗಾಗಲೇ ವಿವಾಹಿತನಾಗಿದ್ದನು; ಆದರೆ ಅವನು ಈ ಪ್ರಮುಖ ವಿಷಯವನ್ನು ಸಂತ್ರಸ್ತ ಮಹಿಳೆಯಿಂದ ಮುಚ್ಚಿಟ್ಟಿದ್ದನು.

3. ಜೂನ್ 6 ರಂದು ಕಂದಾಯ ಮತ್ತು ಆರೋಗ್ಯ ಇಲಾಖೆಯ ತಂಡವು ಫೈಜಾನ್‌ನ ಕಾನೂನುಬಾಹಿರ ಆಸ್ಪತ್ರೆಗೆ ಬೀಗ ಜಡಿದಿದೆ. ಈ ಪ್ರಕರಣದ ಇತರ ಶಂಕಿತರಾದ ಶಬಾನ್, ಫರ್ಮನ್ ಮತ್ತು ಆರಿಫ್ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

4. ವೈದ್ಯಕೀಯ ವೃತ್ತಿ ಮಾಡಲು ಸಂಬಂಧಪಟ್ಟ ವ್ಯಕ್ತಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಇರಲಿಲ್ಲ ಮತ್ತು ಆಸ್ಪತ್ರೆ ನಡೆಸಲು ಅಗತ್ಯವಿರುವ ಸಿಂಧುತ್ವದ ದಾಖಲೆಗಳೂ ಅವರ ಬಳಿ ಇರಲಿಲ್ಲ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಕೌಶಲೇಂದ್ರ ಸಿಂಗ್ ತಿಳಿಸಿದ್ದಾರೆ. ಆದ್ದರಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

5. ಸ್ಥಳೀಯ ಹಿಂದೂ ಸಂಘಟನೆಗಳು ಮತ್ತು ಭಾರತೀಯ ಜನತಾ ಪಕ್ಷದ ಶಾಸಕ ಓಂ ಕುಮಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಪರಾಧದಲ್ಲಿ ಫೈಜಾನ್ ಸಹೋದರನೂ ಭಾಗಿಯಾಗಿದ್ದಾನೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್) ಸೆಕ್ಷನ್ ಸೇರಿಸಬೇಕೆಂದು ಅವರು ಒತ್ತಾಯಿಸಿದರು.

ಸಂಪಾದಕೀಯ ನಿಲುವು

  • ಇಂಥವರಿಗೆ ಗಲ್ಲು ಶಿಕ್ಷೆಯಾಗಲು ಸರಕಾರ ಪ್ರಯತ್ನಿಸುವುದು ಅಗತ್ಯವಾಗಿದೆ!
  • ಸಾಮಾನ್ಯವಾಗಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರು ವಂಚನೆ, ನಕಲಿ, ಅಪರಾಧ ಮುಂತಾದ ಕೃತ್ಯಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ ಎಂಬುದನ್ನು ಗಮನಿಸಿ!