(ಹನಿ ಟ್ರ್ಯಾಪ್ ಎಂದರೆ ಮಹಿಳೆಯ ಮೂಲಕ ವ್ಯಕ್ತಿಯನ್ನು ಜಾಲದಲ್ಲಿ ಸಿಲುಕಿಸುವುದು. ಶತ್ರು ರಾಷ್ಟ್ರದ ಮಹಿಳಾ ಗೂಢಚಾರಿಣಿ, ಸೇನಾಧಿಕಾರಿ ಅಥವಾ ಸೈನಿಕರನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಸೇನೆಯ ಗೌಪ್ಯ ಮಾಹಿತಿಯನ್ನು ಹಸ್ತಾಂತರಿಸಿಕೊಳ್ಳಲು ರೂಪಿಸುವ ಪಿತೂರಿಯನ್ನು ಹನಿ ಟ್ರ್ಯಾಪ್ ಎನ್ನಲಾಗುತ್ತದೆ.)

ಶ್ರೀನಗರ (ಜಮ್ಮು-ಕಾಶ್ಮೀರ) – ದೋಡಾ ಜಿಲ್ಲೆಯ ಯುವಕನೊಬ್ಬನನ್ನು ‘ಹನಿ ಟ್ರ್ಯಾಪ್’ ಮಾಡುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ನ ಸಂಚು ವಿಫಲಗೊಂಡಿದೆ. ಪಾಕಿಸ್ತಾನಿ ಮಹಿಳೆಯ ಹೆಸರಿನಲ್ಲಿ ಫೇಸ್ ಬುಕ್‌ನಲ್ಲಿ ಬಂದ ‘ಫ್ರೆಂಡ್ ರಿಕ್ವೆಸ್ಟ್’ ಮತ್ತು ಹಣದ ಆಮಿಷಕ್ಕೆ ಬಲಿಯಾಗದ ಈ ಯುವಕನು ದೇಶದ್ರೋಹ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಹಣದ ಬದಲಾಗಿ ಗಡಿಭಾಗದಲ್ಲಿರುವ ಭಾರತೀಯ ಭದ್ರತಾ ಪಡೆಗಳ ನೆಲೆಗಳು ಮತ್ತು ಅವರ ಚಲನವಲನಗಳ ಛಾಯಾಚಿತ್ರಗಳನ್ನು ಕಳುಹಿಸುವಂತೆ ಆ ಮಹಿಳೆಯು ಯುವಕನಿಗೆ ಹೇಳಿದ್ದಳು.
ಭದ್ರತಾ ಸಂಸ್ಥೆಗಳಿಂದ ವಿಚಾರಣೆ
ಯುವಕನಿಗೆ ಪಾಕಿಸ್ತಾನದಿಂದ ಬರುತ್ತಿದ್ದ ಸಂಶಯಾಸ್ಪದ ‘ವಾಟ್ಸಾಪ್ ಕರೆಗಳ’ ಮೇಲೆ ಭಾರತೀಯ ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು. ಇದೇ ಸಂಶಯದ ಆಧಾರದ ಮೇಲೆ ಪೊಲೀಸರು ಯುವಕನ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದರು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಆತನ ನಿರಪರಾಧಿತ್ವ ಸಾಬೀತಾದ್ದರಿಂದ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ, ಭದ್ರತೆಯ ಕಾರಣಗಳಿಗಾಗಿ ಆತನ ಹೆಸರನ್ನು ರಹಸ್ಯವಾಗಿಡಲಾಗಿದ್ದು, ಆತ ಪ್ರಸ್ತುತ ಪೊಲೀಸರ ಮೇಲ್ವಿಚಾರಣೆಯಲ್ಲಿದ್ದಾನೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid