
ಕೋಪನ್ ಹ್ಯಾಗನ್ (ಡೆನ್ಮಾರ್ಕ್) – ಇಂದು ನನ್ನ ಸಣ್ಣ ಮಕ್ಕಳಿರುತ್ತಿದ್ದರೆ, ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಒಂಟಿಯಾಗಿ ಬಿಡುವುದಕ್ಕಿಂತ ಸಿಗರೇಟು ಸೇದಲು ಬಿಡುವುದನ್ನು ನಾನು ಹೆಚ್ಚು ಇಷ್ಟಪಡುತ್ತಿದ್ದೆ ಎಂದು ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟೆ ಫ್ರೆಡರಿಕ್ಸನ್ ಹೇಳಿಕೆ ನೀಡಿದ್ದಾರೆ.
ಡಿಜಿಟಲ್ ಯುಗದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಪ್ರಧಾನಿ ಮೆಟೆ ಅವರು, ನಮ್ಮ ವ್ಯವಸ್ಥೆಯಲ್ಲಿ ಏನೋ ಗಂಭೀರವಾದ ದೋಷವಿದೆ ಎಂದು ಹೇಳಿದ್ದಾರೆ. ನಾವು ಇಂದಿಗೂ ಹಳೆಯ ಅಪಾಯಗಳ ಕಡೆಯೇ ಗಮನ ಹರಿಸುತ್ತಿದ್ದೇವೆ, ಆದರೆ ಅದಕ್ಕಿಂತ ದೊಡ್ಡದಾದ ಮತ್ತು ಭಯಾನಕವಾದ ಅಪಾಯ ನಮ್ಮ ಕಣ್ಣೆದುರೇ ಬಂದು ನಿಂತಿದೆ ಎಂದರು.
ನಾವು ಮಕ್ಕಳ ಬಾಲ್ಯವನ್ನು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಭರವಸೆ ಮೇಲೆ ಬಿಟ್ಟಿದ್ದೇವೆ !
ಪ್ರಧಾನಮಂತ್ರಿಯವರು ಈ ವಿಷಯದ ಕುರಿತು ಇಷ್ಟೊಂದು ಕಠಿಣ ನಿಲುವು ತಳೆದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಂಸತ್ತಿನ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿ, ನಾವು ಇಲ್ಲಿಯವರೆಗೆ ಅತ್ಯಂತ ಮುಗ್ಧರಾಗಿದ್ದೆವು. ನಾವು ನಮ್ಮ ಮಕ್ಕಳ ಡಿಜಿಟಲ್ ಜೀವನವನ್ನು ಮಕ್ಕಳ ಹಿತಾಸಕ್ತಿಯನ್ನು ಎಂದಿಗೂ ಯೋಚಿಸದಂತಹ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಕೈಗೆ ಒಪ್ಪಿಸಿದ್ದೇವೆ. ಮೊಬೈಲ್ ಫೋನ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳು ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿವೆ. ಈಗ ನಾವು ಈ ಡಿಜಿಟಲ್ ಜೈಲಿನಿಂದ ಹೊರಬಂದು ಮತ್ತೊಮ್ಮೆ ನೈಜ ಸಮಾಜದ ಕಡೆಗೆ ತಿರುಗುವ ಅಗತ್ಯವಿದೆ ಎಂದು ಹೇಳಿದ್ದರು.
15 ವರ್ಷದೊಳಗಿನ ಮಕ್ಕಳ ಸಾಮಾಜಿಕ ಮಾಧ್ಯಮಗಳ ನೇರ ಬಳಕೆಗೆ ನಿಷೇಧ ಹೇರಲಿದ್ದಾರೆ !
ಡೆನ್ಮಾರ್ಕ್ ಸರಕಾರವು ಇಂತಹ ಒಂದು ಪ್ರಸ್ತಾಪದ ಬಗ್ಗೆ ಕೆಲಸ ಮಾಡುತ್ತಿದ್ದು, ಈ ಹೊಸ ನಿಯಮದ ಪ್ರಕಾರ 15 ವರ್ಷದೊಳಗಿನ ಮಕ್ಕಳ ಸಾಮಾಜಿಕ ಮಾಧ್ಯಮಗಳ ನೇರ ಬಳಕೆಯ ಮೇಲೆ ನಿಷೇಧ ಬರಲಿದೆ. ಹೊಸ ನಿಯಮಗಳ ಪ್ರಕಾರ 13-14 ವರ್ಷದ ಮಕ್ಕಳು ಕೇವಲ ಪೋಷಕರ ಲಿಖಿತ ಅಥವಾ ಡಿಜಿಟಲ್ ಅನುಮತಿಯ ನಂತರವಷ್ಟೇ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಸಾಧ್ಯವಾಗಲಿದೆ. ಈ ಕಟ್ಟುನಿಟ್ಟಿನ ನಿಯಮವನ್ನು ಮುಂದಿನ ವರ್ಷದಿಂದ ಜಾರಿಗೆ ತರಲಾಗುವುದು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !