ಕಳೆದ ದಶಕದಲ್ಲಿ 25 ಪಟ್ಟು ಹೆಚ್ಚಾದ ರಫ್ತು !
ಶಸ್ತ್ರಾಸ್ತ್ರಗಳ ರಫ್ತು ದಾಖಲೆಯ 38 ಸಾವಿರ 424 ಕೋಟಿ ರೂಪಾಯಿಗಳಿಗೆ ತಲುಪಿದೆ !

ನವ ದೆಹಲಿ – ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2025-26 ರ ಸಾಲಿನಲ್ಲಿ ಭಾರತದ ರಕ್ಷಣಾ ರಫ್ತು ದಾಖಲೆಯ 38 ಸಾವಿರ 424 ಕೋಟಿ ರೂಪಾಯಿಗಳಿಗೆ ತಲುಪಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 62 ಕ್ಕಿಂತ ಹೆಚ್ಚಾಗಿದೆ. ಬ್ರಹ್ಮೋಸ್ ಗಾಗಿ ಫಿಲಿಪೈನ್ಸ್, ವಿಯೆಟ್ನಾಂ ಮತ್ತು ಇತರ ಎರಡು ದೇಶಗಳಿಂದ ಅಂದಾಜು 12 ಸಾವಿರ 500 ಕೋಟಿ ರೂಪಾಯಿಗಳ ಒಪ್ಪಂದಗಳಾಗಿವೆ. ಭಾರತವು ಈಗ 100 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ, ಇದರಲ್ಲಿ ಅಮೆರಿಕ, ಫ್ರಾನ್ಸ್ ಮತ್ತು ಅರ್ಮೇನಿಯಾ ಪ್ರಮುಖವಾಗಿವೆ.
🚀 India’s defence exports are now reaching over 100 countries worldwide!
📈 Exports have grown 25-fold in the last decade, touching a record ₹38,424 crore.
🇮🇳 The successful deployment of BrahMos and Akash during Operation Sindoor has significantly boosted global demand.… pic.twitter.com/rJQDff7iQp
— Sanatan Prabhat (@SanatanPrabhat) June 1, 2026
1. ‘ಆಪರೇಷನ್ ಸಿಂದೂರ್’ನಲ್ಲಿ ‘ಬ್ರಹ್ಮೋಸ್’, ‘ಆಕಾಶ್’ ನಂತಹ ಭಾರತೀಯ ಶಸ್ತ್ರಾಸ್ತ್ರಗಳ ಬಳಕೆಯಿಂದಾಗಿ ಅವುಗಳ ಜಾಗತಿಕ ಬೇಡಿಕೆಯು ವೇಗವಾಗಿ ಹೆಚ್ಚಾಗಿದೆ. ಹಲವು ದೇಶಗಳು ಅವುಗಳನ್ನು ಖರೀದಿಸಲು ಆಸಕ್ತಿ ತೋರಿಸಿವೆ, ಇನ್ನು ಕೆಲವು ದೇಶಗಳೊಂದಿಗೆ ಸಾವಿರಾರು ಕೋಟಿ ರೂಪಾಯಿಗಳ ಒಪ್ಪಂದಗಳೂ ಆಗಿವೆ.
2. ಇಂಡೋನೇಷ್ಯಾದೊಂದಿಗಿನ ಅಂದಾಜು 3 ಸಾವಿರ 600 ಕೋಟಿ ರೂಪಾಯಿಗಳ ಒಪ್ಪಂದವು ಅಂತಿಮ ಒಪ್ಪಿಗೆಯ ಹಂತದಲ್ಲಿದೆ. ‘ಆಕಾಶ್ ಕ್ಷಿಪಣಿ ವ್ಯವಸ್ಥೆ’ಗಾಗಿ ಅರ್ಮೇನಿಯಾದಿಂದ 6 ಸಾವಿರ 100 ಕೋಟಿ ರೂಪಾಯಿಗಳ ಒಪ್ಪಂದ ಈಗಾಗಲೇ ಆಗಿದೆ.
3. ಭಾರತೀಯ ಶಸ್ತ್ರಾಸ್ತ್ರಗಳ ಅತಿ ದೊಡ್ಡ ಖರೀದಿದಾರ ಅಮೆರಿಕ ಆಗಿದೆ. 280 ಕೋಟಿ ಡಾಲರ್ (26 ಸಾವಿರ 880 ಕೋಟಿ ರೂಪಾಯಿ) ಮೌಲ್ಯದ ವ್ಯವಸ್ಥೆಗಳು ಮತ್ತು ಬಿಡಿಭಾಗಗಳು ಭಾರತದಿಂದ ‘ಬೋಯಿಂಗ್’ ಮತ್ತು ‘ಲಾಕ್ಹೀಡ್ ಮಾರ್ಟಿನ್’ ನಂತಹ ದೊಡ್ಡ ಸಂಸ್ಥೆಗಳಿಗೆ ಹೋಗುತ್ತವೆ.
4. ಸರಕಾರವು 2029-30 ರ ವೇಳೆಗೆ 50 ಸಾವಿರ ಕೋಟಿ ರೂಪಾಯಿಗಳ ರಕ್ಷಣಾ ರಫ್ತಿನ ಗುರಿಯನ್ನು ಇಟ್ಟುಕೊಂಡಿದೆ. 2016-17 ರಲ್ಲಿ ಇದು ಕೇವಲ 1 ಸಾವಿರ 522 ಕೋಟಿ ರೂಪಾಯಿ ಇತ್ತು. ಈಗಿನ ಅಂಕಿ-ಅಂಶವು 38 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಇದರರ್ಥ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ರಕ್ಷಣಾ ರಫ್ತಿನಲ್ಲಿ 25 ಪಟ್ಟಿಗಿಂತಲೂ ಹೆಚ್ಚು ಬೆಳವಣಿಗೆ ದಾಖಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation