ಸಾಯಪ್ರಸ್, ಗ್ರೀಸ್ ಮತ್ತು ಆರ್ಮೇನಿಯಾ ಎಂಬ ಮೂರು ನೆರೆಹೊರೆಯ ದೇಶಗಳಿಗೆ ಭಾರತದ ರಕ್ಷಣಾ ಸಹಕಾರ !
‘ಆಪರೇಷನ್ ಸಿಂದೂರ್’ನ ಸಮಯದಲ್ಲಿ ಟರ್ಕಿಯು ಪಾಕಿಸ್ತಾನಕ್ಕೆ ಡ್ರೋನ್ ಮತ್ತು ಸೈನಿಕರನ್ನು ಒದಗಿಸಿತ್ತು

ಇಸ್ತಾನಬುಲ್ (ಟರ್ಕಿ) / ನವದೆಹಲಿ – ಟರ್ಕಿಯು ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಬಂದಿರುವುದರಿಂದ ಭಾರತದ ಕಾರ್ಯತಂತ್ರದ ಶತ್ರುವಾಗಿಯೇ ಉಳಿದಿದೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಪರವಾಗಿಯೇ ಯಾವಾಗಲೂ ಧ್ವನಿ ಎತ್ತುತ್ತಿದ್ದ ಟರ್ಕಿಯು, ‘ಆಪರೇಷನ್ ಸಿಂದೂರ್’ನ ಸಮಯದಲ್ಲೂ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಬಳಸಲು ಡ್ರೋನ್ ಮತ್ತು ತನ್ನ ತಜ್ಞ ಸೇನಾಧಿಕಾರಿಗಳನ್ನು ನೀಡಿತ್ತು. ಈಗ ಈ ಎಲ್ಲದರ ನಡುವೆ ಭಾರತವು ಟರ್ಕಿಯ ಶತ್ರು ರಾಷ್ಟ್ರಗಳಿಗೆ ಸಹಾಯ ಮಾಡುವ ಮೂಲಕ ಅದಕ್ಕೆ ದಿಗ್ಬಂಧನ ವಿಧಿಸಲು ಆರಂಭಿಸಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ರವರು ಟರ್ಕಿಯ ನೆರೆದೇಶವಾದ ಸೈಪ್ರಸ್ ಗೆ ತಲುಪಿದ್ದಾರೆ. ಸೈಪ್ರಸ್ ಭಾರತದ ಬಳಿ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಮ್) ಹಾಗೂ ‘ಬ್ರಹ್ಮೋಸ್’ ಕ್ಷಿಪಣಿಗಾಗಿ ಬೇಡಿಕೆ ಇಟ್ಟಿದೆ. ಇನ್ನೊಂದೆಡೆ ಟರ್ಕಿಯ ಇತರ ನೆರೆರಾಷ್ಟ್ರಗಳಾದ ಗ್ರೀಸ್ ಮತ್ತು ಆರ್ಮೇನಿಯಾ ದೇಶಗಳಿಗೂ ಭಾರತವು ರಕ್ಷಣಾ ಸಹಕಾರವನ್ನು ನೀಡಿದೆ.

1. ಭಾರತವು ಗ್ರೀಸ್ ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿದೆ. ಗ್ರೀಸ್ ಕೂಡ ‘ಬ್ರಹ್ಮೋಸ್’ ಕ್ಷಿಪಣಿಯನ್ನು ಖರೀದಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ.
2. ಮತ್ತೊಂದೆಡೆ, ಮೇ 28 ರಂದು ಆರ್ಮೇನಿಯಾ ದೇಶವು ತನ್ನ ಗಣರಾಜ್ಯೋತ್ಸವ ದಿನದಂದು ನಡೆದ ಪಥಸಂಚಲನದ ಸಮಯದಲ್ಲಿ ಭಾರತದಿಂದ ತನಗೆ ಲಭಿಸಿದ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಜಗತ್ತಿನ ಎದುರು ಪ್ರದರ್ಶಿಸಿತು. ಇದರಲ್ಲಿ ‘ಪಿನಾಕಾ ಮಲ್ಟಿಬ್ಯಾರೆಲ್ ರಾಕೆಟ್ ಲಾಂಚರ್’, ‘ಆಕಾಶ್ ೧ ಎಸ್’, ‘ಹೋವಿಟ್ಜರ್’ ಫಿರಂಗಿ, ‘ಸ್ವಾತಿ ರಾಡಾರ್ ಸಿಸ್ಟಮ್’ ಮುಂತಾದವುಗಳು ಸೇರಿದ್ದವು.

3. ಈ ಎಲ್ಲ ಕಾರಣಗಳಿಂದಾಗಿ ಟರ್ಕಿಯ ಕೆಲವು ತಜ್ಞರು ತಮಗೆ ಅಪಾಯ ಎದುರಾಗುವ ಮುನ್ನವೇ ಗ್ರೀಸ್ ಮೇಲೆ ದಾಳಿ ನಡೆಸುವಂತೆ ಟರ್ಕಿಗೆ ಸಲಹೆ ನೀಡುತ್ತಿದ್ದಾರೆ. (ಟರ್ಕಿಯಂತಹ ತಜ್ಞರು ಭಾರತದಲ್ಲಿ ಇಲ್ಲವೇ? ‘ಪಾಕಿಸ್ತಾನದ ಭಯೋತ್ಪಾದಕರಿಂದ ದಾಳಿಗಳಾಗುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ಮಾಡಿ’, ಎಂದು ಅವರು ಏಕೆ ಹೇಳುವುದಿಲ್ಲ? – ಸಂಪಾದಕರು)
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !