
ವಾಷಿಂಗ್ಟನ್ (ಅಮೆರಿಕ) – ನಾವು ಒಂದು ಅತ್ಯಂತ ಒಳ್ಳೆಯ ಒಪ್ಪಂದದ ಹತ್ತಿರ ತಲುಪಿದ್ದೇವೆ. ತುಂಬಾ ಆತುರಪಟ್ಟರೆ, ಒಳ್ಳೆಯ ಒಪ್ಪಂದವಾಗಲು ಸಾಧ್ಯವಿಲ್ಲ. ನಿಧಾನವಾಗಿಯಾದರೂ, ನಮಗೆ ಏನು ಬೇಕೋ ಅದನ್ನು ನಾವು ಪಡೆದುಕೊಳ್ಳುತ್ತಿದ್ದೇವೆ; ಆದರೆ ನಮಗೆ ಬೇಕಾದುದು ಸಿಗದಿದ್ದರೆ, ನಾವು ಈ ವಿಷಯವನ್ನು ‘ಬೇರೆಯದೇ ರೀತಿಯಲ್ಲಿ’ ಕೊನೆಗೊಳಿಸುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು.
ಇರಾನ್‌ನ ಸೈನ್ಯವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸದಿರಲು ಕಾರಣವನ್ನು ಸ್ಪಷ್ಟಪಡಿಸಿದ ಟ್ರಂಪ್, ಇರಾನ್ ಸೈನ್ಯದ ಕೆಲವು ವಿಭಾಗಗಳು ಸ್ವಲ್ಪ ಮೃದು ಧೋರಣೆಯನ್ನು ಹೊಂದಿವೆ ಎಂದು ನಮಗೆ ಅನ್ನಿಸುತ್ತದೆ. ಯಾವುದೇ ಒಂದು ದೇಶದ ಇಡೀ ವ್ಯವಸ್ಥೆಯನ್ನೇ ನಾಶಪಡಿಸಿದರೆ, ಅದು ದೀರ್ಘಕಾಲದ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಯುದ್ಧದಲ್ಲಿ ಇಡೀ ದೇಶವನ್ನೇ ನಾಶಮಾಡುವ ತಪ್ಪು ಈ ಹಿಂದೆ ನಡೆದಿದೆ, ಅದರಿಂದಾಗಿ ಆ ದೇಶವು ೪೦ ವರ್ಷಗಳವರೆಗೆ ಮತ್ತೆ ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ಇರಾಕ್‌ಗೆ ಏನಾಯಿತು, ಎಂಬುದನ್ನು ನಾವು ನೋಡಿದ್ದೇವೆ. ನಾವು ಇರಾನ್‌ನ ಇಡೀ ನೌಕಾಸೇನೆಯನ್ನು ನಾಶಪಡಿಸಿದರೂ ಸಹ, ಅವರ ನೌಕಾಸೇನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ನಮ್ಮಲ್ಲಿ ನಿಷ್ಪಕ್ಷಪಾತ ಮಾಧ್ಯಮಗಳಿಲ್ಲ, ಅವು ಕೇವಲ ಸುಳ್ಳು ಹೇಳುತ್ತವೆ,” ಎಂದು ಟ್ರಂಪ್ ಟೀಕಿಸಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation