ಸಚಿವರಿಂದ ಚಿತ್ರದ ವಿರುದ್ಧ ಟೀಕೆ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಪ್ರಸಿದ್ಧ ತಮಿಳು ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ‘ತಿರುವಳ್ಳುವರ್ ದಿನ’ದ ಆಚರಣೆಯನ್ನು ಚೆನ್ನೈನ ಗಿಂಡಿಯಲ್ಲಿರುವ ‘ತಮಿಳುನಾಡು ಲೋಕ ಭವನ’ದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರ ಕಾವಿ ಬಟ್ಟೆ ಧರಿಸಿರುವ ಚಿತ್ರವನ್ನು ಪ್ರದರ್ಶಿಸಿದ್ದರಿಂದ ವಿವಾದ ನಿರ್ಮಾಣವಾಗಿದೆ. ತಿರುವಳ್ಳುವರ್ ಅವರು ಕಾವಿ ಬಟ್ಟೆಯನ್ನು ಧರಿಸಿರುವ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆಯನ್ನು ಹಾಕಿರುವ ಮತ್ತು ಹಣೆಯ ಮೇಲೆ ಪವಿತ್ರ ಭಸ್ಮವನ್ನು (ವಿಭೂತಿ) ಧರಿಸಿರುವಂತೆ ಈ ಚಿತ್ರದಲ್ಲಿ ತೋರಿಸಲಾಗಿತ್ತು. ತಮಿಳುನಾಡಿನ ಸಚಿವ ಅರುಣ ರಾಜ್ ಅವರು ಈ ಚಿತ್ರವನ್ನು ಖಂಡಿಸಿದ್ದಾರೆ. ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜೋಸೆಫ್ ವಿಜಯ ಅವರ ಸಚಿವ ಸಂಪುಟದ ಯಾವುದೇ ಸಚಿವರೂ ಉಪಸ್ಥಿತರಿರಲಿಲ್ಲ!
ಮುಖ್ಯವಾದ ವಿಷಯವೆಂದರೆ ಮುಖ್ಯಮಂತ್ರಿ ಜೋಸೆಫ್ ವಿಜಯ ಅವರ ಸಚಿವ ಸಂಪುಟದ ಯಾವುದೇ ಸಚಿವರು ಲೋಕ ಭವನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಈ ಸಮಾರಂಭ ಮತ್ತು ಕವಿಯ ಚಿತ್ರದ ಕುರಿತು ನಡೆಯುತ್ತಿರುವ ವಿವಾದದ ಮೇಲಿನ ರಾಜಕೀಯ ಚರ್ಚೆಗಳು ಇನ್ನಷ್ಟು ತೀವ್ರಗೊಂಡಿವೆ. (ಕ್ರಿಶ್ಚಿಯನ್ ಮುಖ್ಯಮಂತ್ರಿಯ ಸಚಿವರು ಎಂದಾದರೂ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆಯೇ? – ಸಂಪಾದಕರು)
ತಿರುವಳ್ಳುವರ್ ಅವರನ್ನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಬಣ್ಣಕ್ಕೆ ಜೋಡಿಸುವುದು ತಪ್ಪು! – ಸಚಿವ ಅರುಣ ರಾಜ್
ತಮಿಳುನಾಡಿನ 16 ನೇ ಶತಮಾನದ ಸೂಫಿ ಸಂತ ‘ನಾಗೋರ್ ಅಂಡಾವರ್’ (ಹಜರತ್ ಸೈಯದ್ ಶಾಹುಲ್ ಹಮೀದ್) ಅವರನ್ನು ಇಸ್ಲಾಂ ಬದಲಿಗೆ ಎಲ್ಲಾ ಧರ್ಮಗಳೊಂದಿಗೆ ಜೋಡಿಸುವ ಧೈರ್ಯವನ್ನು ಸಚಿವ ಮಹಾಶಯರು ಏಕೆ ತೋರಿಸುವುದಿಲ್ಲ?
ಅರುಣ ರಾಜ್ ಮಾತನಾಡಿ, ಲೋಕ ಭವನ ಅಥವಾ ಯಾವುದೇ ಸರಕಾರಿ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ತಿರುವಳ್ಳುವರ್ ಅವರನ್ನು ಕಾವಿ ಬಟ್ಟೆಯಲ್ಲಿ ಚಿತ್ರಿಸುವುದು ಅಯೋಗ್ಯವಾಗಿದೆ. ತಿರುವಳ್ಳುವರ್ ಅವರು ಇಡೀ ಮಾನವಕುಲಕ್ಕೆ ಸೇರಿದವರಾಗಿದ್ದಾರೆ. ತಿರುವಳ್ಳುವರ್ ಅವರನ್ನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಬಣ್ಣಕ್ಕೆ ಜೋಡಿಸುವುದು ಕವಿಯ ಜಾಗತಿಕ ದೃಷ್ಟಿಕೋನದ ಭಾವನೆಗೆ ವಿರುದ್ಧವಾಗಿದೆ. ತಿರುವಳ್ಳುವರ್ ಅವರನ್ನು ಒಂದು ಬಣ್ಣಕ್ಕೆ ಸೀಮಿತಗೊಳಿಸುವ ಪ್ರಯತ್ನವು ಸಮುದ್ರವನ್ನು ಪಾತ್ರೆಯೊಂದರಲ್ಲಿ ಬಂದಿಸಿಟ್ಟುಕೊಂಡಂತೆ ಎಂದು ಅವರು ಹೇಳಿದರು. ಅವರ ‘ತಿರುಕ್ಕುರಳ್’ ಮಾನವ ಜೀವನಕ್ಕೆ ಮಾರ್ಗದರ್ಶನ ನೀಡುವ ಜಾಗತಿಕ ನೈತಿಕ ಮೌಲ್ಯಗಳು ಮತ್ತು ತತ್ವಗಳ ಬಗ್ಗೆ ಮಾತನಾಡುತ್ತದೆಯೇ ಹೊರತು, ಯಾವುದೇ ಒಂದು ಧರ್ಮದ ಸಿದ್ಧಾಂತಗಳ ಬಗ್ಗೆ ಅಲ್ಲ ಎಂದು ಅವರು ಹೇಳಿದರು. ಕೆಲವು ಗುಂಪುಗಳು ಕವಿಯ ಚಿತ್ರವನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ