ಇತರ 3 ಆರೋಪಿಗಳ ಬಂಧನ, ಇನ್ನೊಬ್ಬ ಇನ್ನೂ ಪರಾರಿ
ಎಲ್ಲಾ ಆರೋಪಿಗಳನ್ನು ಕೊಲ್ಲುವಂತೆ ಸೂರ್ಯನ ತಾಯಿಯ ಆಗ್ರಹ

ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಖೋಡಾ ಪ್ರದೇಶದಲ್ಲಿ ಬಕ್ರೀದ್ ಹಬ್ಬದ ದಿನದಂದು 17 ವರ್ಷದ ಸೂರ್ಯ ಚೌಹಾಣ್ ನನ್ನು ಆತನ ಮುಸ್ಲಿಂ ಸ್ನೇಹಿತರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಇದೀಗ ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿ ಅಸದ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
1. ಅಸದ್ ತನ್ನ ಸ್ನೇಹಿತನೊಬ್ಬನಿಂದ ಹಣ ಪಡೆಯಲು ಖೋಡಾ ಪ್ರದೇಶಕ್ಕೆ ಬರಲಿದ್ದನು. ಹಣ ಪಡೆದ ನಂತರ ಆತ ನಗರ ಬಿಟ್ಟು ಪರಾರಿಯಾಗುವ ಯೋಜನೆಯಲ್ಲಿದ್ದ. ಈ ಮಾಹಿತಿ ತಿಳಿಯುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ಅಸದ್ ನನ್ನು ಹಿಡಿಯಲು ಆ ಪ್ರದೇಶದಲ್ಲಿ ಬಲೆ ಬೀಸಿ ಸುತ್ತುವರೆದರು.
2. ಸ್ವಲ್ಪ ಹೊತ್ತಿನಲ್ಲೇ ಅಸದ್ ಮತ್ತೊಬ್ಬ ಆರೋಪಿಯೊಂದಿಗೆ ಮೋಟಾರ್ ಸೈಕಲ್ ನಲ್ಲಿ ಅಲ್ಲಿಗೆ ತಲುಪಿದನು ಮತ್ತು ಪೊಲೀಸರು ಅವನನ್ನು ಹಿಡಿದರು. ಆ ಸಮಯದಲ್ಲಿ ಅಸದ್ ಪೊಲೀಸ್ ಸಿಬ್ಬಂದಿ ಮೇಲೆ ನೇರ ಗುಂಡಿನ ದಾಳಿ ನಡೆಸಿದ. ಪೊಲೀಸರು ಕೂಡ ಸ್ವರಕ್ಷಣೆಗಾಗಿ ತಕ್ಷಣ ಪ್ರತ್ಯುತ್ತರ ನೀಡಿದರು. ಎರಡು ಕಡೆಯಿಂದ ನಡೆದ ಈ ಗುಂಡಿನ ಚಕಮಕಿಯಲ್ಲಿ ಅಸದ್ ಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಚಕಮಕಿಯಲ್ಲಿ ಓರ್ವ ಪೊಲೀಸ್ ಕಾನ್ ಸ್ಟೆಬಲ್ ಕೂಡ ಗಾಯಗೊಂಡಿದ್ದಾರೆ. ಅಸದ್ ಜೊತೆ ಮತ್ತೊಬ್ಬ ಆರೋಪಿ ಕೂಡ ಬಂದಿದ್ದನು. ಆತ ಚಕಮಕಿಯ ವೇಳೆ ಪರಾರಿಯಾಗಿದ್ದಾನೆ.
3. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ 3 ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಅವರಲ್ಲಿ ಅಸದ್ ಹತ್ಯೆಯಾದ ಕಾರಣ, ಈಗ ಒಬ್ಬ ಪರಾರಿಯಾಗಿದ್ದಾನೆ.
4. ಸೂರ್ಯನ ಕುಟುಂಬಸ್ಥರು ಆರೋಪಿಗಳ ಎನ್ ಕೌಂಟರ್ ಮತ್ತು ಬುಲ್ಡೋಜರ್ ಕಾರ್ಯಾಚರಣೆಗೆ ಒತ್ತಾಯಿಸುತ್ತಿದ್ದರು. ಪ್ರಕರಣದ ಗಾಂಭೀರ್ಯತೆ ಅರಿತಿದ್ದರಿಂದ ತೀವ್ರ ಭದ್ರತೆಯಲ್ಲಿ ಸೂರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಅಸದ್ ನ ಸಾವಿನ ಫೋಟೋ ನೋಡಬೇಕು, ಆಗಲೇ ಸಮಾಧಾನವಾಗುವುದು ! – ಸೂರ್ಯನ ತಾಯಿಯ ಆಗ್ರಹ

ಸೂರ್ಯನ ತಾಯಿ ಸರೋಜಾ ಅವರು, ತಾವು ಕೇವಲ ಒಬ್ಬನ ಎನ್ ಕೌಂಟರ್ ಸುದ್ದಿಯನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಅವರು ಅಸದ್ ನ ಫೋಟೋವನ್ನು ನೋಡಬೇಕೆಂದಿದ್ದಾರೆ. ಅದನ್ನು ನೋಡಿದ ನಂತರವಷ್ಟೇ ಆತ ನಿಜವಾಗಿಯೂ ಹತ್ಯೆಯಾಗಿದ್ದಾನೆ ಎಂಬ ನಂಬಿಕೆ ಅವರಿಗೆ ಬರಲಿದೆ. ಉಳಿದ ಆರೋಪಿಗಳನ್ನೂ ಇದೇ ರೀತಿ ಕೊಲ್ಲಬೇಕು. ಅಷ್ಟೇ ಅಲ್ಲ, ಅವರ ಮನೆಗಳ ಮೇಲೂ ಬುಲ್ಡೋಜರ್ ಹರಿಸಬೇಕು ಎಂದು ಹೇಳಿದ್ದಾರೆ.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!